ಕರ್ನಾಟಕ

karnataka

ETV Bharat / state

ಕನ್ನಡ ಬಿಗ್ ಬಾಸ್​ ಶೋಗೆ ಮತ್ತೊಂದು ಸಂಕಷ್ಟ: ಸಾಗರದ ನ್ಯಾಯಾಲಯದಿಂದ ತುರ್ತು ನೋಟಿಸ್

ಶಿವಮೊಗ್ಗ ಜಿಲ್ಲೆ ಸಾಗರದ ಜೆಎಂಎಫ್​ಸಿ ನ್ಯಾಯಾಲಯ ಕನ್ನಡದ ಬಿಗ್​ ಬಾಸ್​ ರಿಯಾಲಿಟಿ ಶೋಗೆ ತುರ್ತು ನೋಟಿಸ್ ಜಾರಿ ಮಾಡಿದೆ.

By ETV Bharat Karnataka Team

Published : 5 hours ago

BIG BOSS
ಬಿಗ್​ ಬಾಸ್​ (ETV Bharat)

ಶಿವಮೊಗ್ಗ:ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಜೆಎಂಎಫ್​ಸಿ ನ್ಯಾಯಾಲಯ ಇಂದು ತುರ್ತು ನೋಟಿಸ್ ಜಾರಿಗೊಳಿಸಿದೆ.

ಬಿಗ್ ಬಾಸ್ 11ರ ಸೀಸನ್​ನಲ್ಲಿ ಅಪರಾಧ ಹಿನ್ನೆಲೆ ಉಳ್ಳವರನ್ನು ಸ್ಪರ್ಧಿಯಾಗಿ‌ ಸೇರಿಸಿಕೊಳ್ಳಲಾಗಿದೆ. ಇವರ ಮೇಲೆ ಅನೇಕ ಪ್ರಕರಣಗಳಿವೆ. ಇಂತಹವರನ್ನು ಪ್ರತಿ‌ನಿತ್ಯ ಕೋಟ್ಯಂತರ ಮಂದಿ ವೀಕ್ಷಿಸುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಿದೆ ಎಂದು ಆರೋಪಿಸಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರ ನಿಲ್ಲಿಸಬೇಕೆಂದು ಸಾಗರ ವಕೀಲ ಕೆ.ಎಲ್.ಭೋಸರಾಜ್ ಎಂಬುವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಚಾಂದಿನಿ ಜಿ.ಯು. ಅವರು ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ ಅಡಿಯಲ್ಲಿ ವಾಹಿನಿಯ ನಿರ್ಮಾಪಕ ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆ ಅಕ್ಟೋಬರ್ 28ರಂದು ನಡೆಯಲಿದೆ.

ಬಿಗ್‌ ಬಾಸ್‌ ಶೋ ಕುರಿತು ಹಿಂದಿನ ದೂರುಗಳು:

ದೂರು-1: ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ವಕೀಲೆಯೊಬ್ಬರು ಕಳೆದ ವಾರ ದೂರು ನೀಡಿದ್ದರು.

ದೂರು-2: ಶೋನಲ್ಲಿಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಗ್ ಬಾಸ್ ತಂಡ ನರಕ-ಸ್ವರ್ಗ ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ, ಎಲ್ಲ ಸ್ಪರ್ಧಿಗಳನ್ನು ಒಂದೇ ಮನೆಯಲ್ಲಿರಲು ಅವಕಾಶ ಕಲ್ಪಿಸಿಕೊಟ್ಟಿತ್ತು.

ಇದನ್ನೂ ಓದಿ:'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ABOUT THE AUTHOR

...view details