ಕರ್ನಾಟಕ

karnataka

ETV Bharat / state

ಆಶ್ರಯ ಕೇಳಿ ಬಂದ ಇಬ್ಬರಿಂದ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ದರೋಡೆ - robbery in Math

ಮಠದಲ್ಲಿ ಮಲಗಲು ಆಶ್ರಯ ಕೇಳಿಕೊಂಡು ಇಬ್ಬರು ಆಗಮಿಸಿ ನೀರು ಕೇಳುವ ನೆಪದಲ್ಲಿ ಮಧ್ಯರಾತ್ರಿ ಸ್ವಾಮೀಜಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.

By ETV Bharat Karnataka Team

Published : Jul 5, 2024, 8:04 PM IST

ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ದರೋಡೆ
ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ದರೋಡೆ (ETV Bharat)

ಹೆಚ್ಚುವರಿ ಜಿಲ್ಲಾಅಧೀಕ್ಷಕ ಶಿವಕುಮಾರ್ .ಆರ್​. ಮಾಹಿತಿ (ETV Bharat)

ರಾಯಚೂರು: ಮಲಗಲು ಆಶ್ರಯ ಕೇಳಿ ಬಂದು ಮಠದ‌‌ ಪೀಠಾಧಿಪತಿಗೆ ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣ ದೊಚ್ಚಿ ಖದೀಮರು ಪರಾರಿಯಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದಿದೆ.

ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿರುವ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿಇಂದು ಬೆಳಗಿನ ಜಾವ ಕಳ್ಳತನ ನಡೆದಿದೆ. ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗೆ ಬೆದರಿಸಿ 20 ಲಕ್ಷ ನಗದು, 80 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ ವಸ್ತುಗಳನ್ನು ಸುಲಿಗೆ ಮಾಡಿ, ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ದರೋಡೆ (ETV Bharat)

ಗುರುವಾರ ರಾತ್ರಿ ಮಠದಲ್ಲಿ ಮಲಗಲು ಆಶ್ರಯ ಕೇಳಿಕೊಂಡು ಇಬ್ಬರು ಆಗಮಿಸಿದ್ದರು. ನೀರು ಕೇಳುವ ನೆಪದಲ್ಲಿ ಮಧ್ಯರಾತ್ರಿ ಸ್ವಾಮೀಜಿ ಕೋಣೆಯ ಬಾಗಿಲು ತೆಗೆಯಿಸಿ ಸುಲಿಗೆ ಮಾಡಿ ಓಡಿ ಹೋಗಿದ್ದಾರೆ. ಗನ್ ರೀತಿಯ ಆಯುಧ ಹಿಡಿದು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಅಧೀಕ್ಷಕ ಶಿವಕುಮಾರ್. ಆರ್​. ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ:ಮೊಹರಂ ಹಬ್ಬಕ್ಕೆ ಒಂದು ವಾರ ಬಾಕಿ ಇರುವಾಗಲೇ ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು - Gods idol Theft

ABOUT THE AUTHOR

...view details