ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿದರು. (ETV Bharat) ಮಂಡ್ಯ:ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಕರಣ ಸಂಬಂಧ ರಾಜಕೀಯ ನಾಯಕರ ಮಧ್ಯೆ ಆರೋಪ- ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಪ್ರಕರಣದ ಕುರಿತು ನಾಗಮಂಗಲದ ಮಾಜಿ ಶಾಸಕ ಸುರೇಶ್‌ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
''ಪ್ರಕರಣದ ಮೂಲ ರೂವಾರಿಗಳಿಗೆ ಸರ್ಕಾರ ರಾಜಾತೀಥ್ಯ ನೀಡುತ್ತಿದೆ. ಅವರಿಗೆ ನೋಟಿಸ್ ನೀಡದೇ, ಬಂಧಿಸದೇ ಆಟ ಆಡ್ತಿದ್ದಾರೆ. ದೇವರಾಜೇಗೌಡ ಬಂಧನದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಹಲವು ತಿಂಗಳು ದೇವರಾಜೇಗೌಡರನ್ನು ಕಸ್ಟಡಿಯಲ್ಲೇ ಇಡಲು ಪ್ಲಾನ್ ನಡೆದಿದೆ. ಅಲ್ಲದೇ ಕಸ್ಟಡಿಯಲ್ಲಿರುವಾಗಲೇ ಅವರ ಜೀವಕ್ಕೂ ದೊಡ್ಡ ಅಪಾಯವಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಸತ್ಯತೆ ಬೇಕಿಲ್ಲ. ಸಚಿವರ ಹೆಸರೇಳಿದ್ರೆ ಪರಿಗಣನೆ ಮಾಡಲ್ಲ. ಮೂಲ ಹುಡುಕಿ ತನಿಖೆಯೂ ಮಾಡಲ್ಲ. ದೇವರಾಜೇಗೌಡ ಪ್ರಾಣಕ್ಕೆ ಅಪಾಯ ಇರೋದು ನೂರಕ್ಕೆ ನೂರರಷ್ಟು ಸತ್ಯ. ಪ್ರಕರಣದ ಖಳನಾಯಕರು, ಸಚಿವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ'' ಅಂತಾ ರಾಜ್ಯ ಸರ್ಕಾರ ಹಾಗೂ ಸಚಿವರ ವಿರುದ್ಧ ಸುರೇಶ್ ಗೌಡ ಗಂಭೀರ ಆರೋಪ ಮಾಡಿದರು.
ಪ್ರಕರಣದ ತನಿಖೆ ನಡೆಸುತ್ತಿರುವ SIT ತಂಡದ ವಿರುದ್ಧವೂ ಸಂಶಯ ವ್ಯಕ್ತಪಡಿಸಿದ ಸುರೇಶ್‌ಗೌಡ ಅವರು, ''ಸಂತ್ರಸ್ತೆಯರು ಸ್ವಯಂ ಪ್ರೇರಿತವಾಗಿ ದೂರು ಕೊಟ್ಟಿಲ್ಲ. ಆಸೆ, ಆಮಿಷಗಳನ್ನು ನೀಡಿ ಸಂತ್ರಸ್ತೆಯರ ಹೆಸರಿನಲ್ಲಿ ಬೇಕಾದ ಹೇಳಿಕೆ ಪಡೆಯಲಾಗುತ್ತಿದೆ. ಹೇಳಿಕೆ ನೀಡುವವರಿಗೆ ಕಾಂಗ್ರೆಸ್ ಏಜೆಂಟ್ಗಳಿಂದ ಆಮಿಷ ಒಡ್ಡಲಾಗಿದೆ. ಆ ಮೂಲಕ ಅವರಿಗೆ ಬೇಕಾದಂತೆ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ಎಸ್ಐಟಿಯಿಂದ ನ್ಯಾಯ ಸಿಗುವುದಿಲ್ಲ.
ದೇವರಾಜೇಗೌಡ ಹೊರಗೆ ಬಂದ್ರೆ ಏನು ಬಿಡುಗಡೆ ಮಾಡಲಿದ್ದಾರೋ ಎಂಬ ಭಯ ಸರ್ಕಾರಕ್ಕಿದೆ. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾನೋ, ಇಲ್ವೋ ಗೊತ್ತಿಲ್ಲ. ಆತ ತಪ್ಪು ಮಾಡಿದ್ರೆ ಅತ್ಯಂತ ಕಠಿಣ ಶಿಕ್ಷೆಯಾಗಲಿ. ಆದ್ರೆ, ಅಪರಾಧ ಮಾಡದಿದ್ದರೂ, ಮಾಡಿದ್ದಾರೆ ಎಂದು ಬಿಂಬಿಸೋದು ಕೂಡ ತಪ್ಪು. ಇವರು ಬಿಟ್ಟಿರುವ ಪೆನ್ ಡ್ರೈವ್ನಲ್ಲಿ ಏನಿದೆ ಎಂಬುದನ್ನು ನೋಡಿ ಅದೇ ಸತ್ಯ ಎಂದು ನಂಬುವ ಮೂರ್ಖರು ನಾವಲ್ಲ. ಇವರ ಕಾಲದಲ್ಲಿ ಏನೇನು ತನಿಖೆ ಮಾಡುತ್ತಾರೆ ಮಾಡಲಿ. ನಮಗೂ ಟೈಂ ಬರುತ್ತೆ, ಪ್ರಕರಣ ರೀ ಓಪನ್ ಮಾಡೋಕೆ ಅವಕಾಶ ಇದೆ'' ಎಂದು ಹೇಳಿದರು.
ಇದನ್ನೂ ಓದಿ:ಅಂಜಲಿ ಕೊಲೆ ಪ್ರಕರಣ: ಮತ್ತೊಬ್ಬ ಅಧಿಕಾರಿ ತಲೆದಂಡ, ಎಸಿಪಿ ಅಮಾನತು - ACP Suspended