ಹುಬ್ಬಳ್ಳಿ:ಪ್ರಜ್ವಲ್ ರೇವಣ್ಣ ವಿಡಿಯೋ ತಮ್ಮದಲ್ಲ ಎಂದು ಹೇಳಲಿ. ಆಗ ನಾವು ಅದನ್ನು ಎಫ್‌ಎಸ್ಎಲ್ ಕೊಡಲು ಒತ್ತಾಯಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ಬಂಧನ ಆಗಲೇಬೇಕು. ಅವರ ವಿರುದ್ಧ ಹಲವಾರು ಮಹಿಳೆಯರು ದೂರು ಕೊಟ್ಟಿದ್ದಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದರು.
ಇನ್ನು ವಿಡಿಯೋ ಯಾರಾದರೂ ಬಿಡುಗಡೆ ಮಾಡಿರಬಹುದು. ವಿಡಿಯೋ ಬಿಡುಗಡೆ ನನ್ನ ಪ್ರಕಾರ ಚರ್ಚೆಯ ವಿಷಯವೇ ಅಲ್ಲ. ವಿಡಿಯೋ ಯಾರಿಗೆ ಸಿಕ್ಕಿದೆಯೋ ಅವರು ಬಿಡುಗಡೆ ಮಾಡಿರಬಹುದು. ಆದರೆ ಮಹಿಳೆಯರ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿದ್ದು ಗಂಭೀರ ಅಪರಾಧ ಎಂದು ಹೇಳಿದರು.
ಹೆಚ್.ಡಿ.ರೇವಣ್ಣ ಬಂಧನದ ಕುರಿತು ಮಾತನಾಡಿ, ಕಾನೂನು ಕ್ರಮ ಕೈಗೊಳ್ಳುತ್ತಿದೆ. ದುರ್ದೈವ ರೇವಣ್ಣಗೆ ವಯಸ್ಸಾಗಿದೆ. ಅವರ ಮೇಲೆ ಸಾಕಷ್ಟು ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆ ಮಾಡೋದು ಒಳ್ಳೆಯದು ಎಂದರು.