ದರ್ಶನ್ ಮನವಿ ಮೇರೆಗೆ ಜೈಲಿಗೆ ಬಂದ ಸರ್ಜಿಕಲ್ ಚೇರ್ (ETV Bharat) ಬಳ್ಳಾರಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮನವಿ ಮೇರೆಗೆ ಜಿಲ್ಲಾಸ್ಪತ್ರೆಯಿಂದ ಇಂದು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸರ್ಜಿಕಲ್ ಚೇರ್ ಬಂದಿತು. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸರ್ಜಿಕಲ್ ಚೇರ್ ಅನ್ನು ತೆಗೆದುಕೊಂಡು ಬಂದರು.
ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ, ಕಾರಾಗೃಹಕ್ಕೆ ಶನಿವಾರ ಉತ್ತರವಲಯದ ಡಿಐಜಿ ಟಿಪಿ ಶೇಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಭೇಟಿ ವೇಳೆ ದರ್ಶನ್, ತಮಗೆ ಬೆನ್ನೆಲುಬು ಸಮಸ್ಯೆ ಇದೆ. ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇರುವುದರಿಂದ ಶೌಚಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಸರ್ಜಿಕಲ್ ಚೇರ್ ನೀಡುವಂತೆ ಡಿಐಜಿ ಬಳಿಕ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಮೆಡಿಕಲ್ ರೆಕಾರ್ಡ್ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ. ಆ ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್ಗೂ ಕೊಡಿಸುತ್ತೇವೆ ಎಂದು ಡಿಐಜಿ ಹೇಳಿದ್ದರು.
ಅದರಂತೆ ಸೆಂಟ್ರಲ್ ಜೈಲಿಗೆ ಎಂಟ್ರಿ ಕೊಟ್ಟ ತಜ್ಞ ವೈದ್ಯರು, ದರ್ಶನ್ ಬೆನ್ನು ಹಾಗೂ ಕೈ ನೋವು ಬಗ್ಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ, ಬಳ್ಳಾರಿ ಜೈಲಿನಲ್ಲಿರುವ ಮೆಡಿಕಲ್ ವರದಿ ಮತ್ತು ಪರಪ್ಪನ ಅಗ್ರಹಾರ ಜೈಲಿನ ಮೆಡಿಕಲ್ ರಿಪೋರ್ಟ್ ತಾಳೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸರ್ಜಿಕಲ್ ಚೇರ್ ಒದಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್‌ನಲ್ಲಿ ದರ್ಶನ್: ಕಾರಾಗೃಹ ಪರಿಶೀಲನೆ ಬಳಿಕ ಮಾಹಿತಿ ನೀಡಿದ ಡಿಐಜಿ - DIG visited Bellary Jail