ಕರ್ನಾಟಕ

karnataka

ETV Bharat / state

ಬೆಂಗಳೂರು: ಕಳ್ಳತನದಲ್ಲಿ ಪಾಲು ನೀಡುವಂತೆ ತಾಯಿ-ಮಗನ ಅಪಹರಿಸಿ ಹಲ್ಲೆ, ಲೈಂಗಿಕ ಕಿರುಕುಳ; 9 ಜನರ ಬಂಧನ - KIDNAP CASE

ಕಳ್ಳತನದಲ್ಲಿ ಪಾಲು ನೀಡುವಂತೆ ತಾಯಿ, ಮಗನನ್ನು ಅಪಹರಿಸಿ ಹಲ್ಲೆಗೈದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 9 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

assault case
ಆರೋಪಿಗಳು (ETV Bharat)

By ETV Bharat Karnataka Team

Published : Aug 19, 2024, 6:45 AM IST

ಬೆಂಗಳೂರು:ತಾಯಿ - ಮಗನನ್ನು ಅಪಹರಿಸಿದ್ದಲ್ಲದೆ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ರೌಡಿಶೀಟರ್​ಗಳು ಸೇರಿದಂತೆ 9 ಮಂದಿ ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಾಬುದ್ದೀನ್, ಸ್ವಾತಿ ಹಾಗೂ ಮಾದೇಶ ಸೇರಿದಂತೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಆಗಸ್ಟ್ 13ರಂದು ಯುವಕ ಹಾಗೂ ಆತನ ತಾಯಿಯನ್ನು ಅಪಹರಿಸಿ ಮನೆಯಲ್ಲಿ ಅಕ್ರಮವಾಗಿ ಇರಿಸಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಇವರಲ್ಲಿ, ಆರೋಪಿ ಪ್ರತಾಪ್ ಪಿಎಸ್​ಐ ಎಂದು ಹೇಳಿಕೊಂಡು, ಬೆದರಿಸಿ ತಾಯಿ, ಮಗನನ್ನು ಕರೆಸಿಕೊಂಡಿದ್ದಾನೆ. ಬಳಿ ಎಲ್ಲರೂ ಸೇರಿ ಆರೋಪಿ ಸೌಮ್ಯಾ ಮನೆಯಲ್ಲಿ ಇರಿಸಿಕೊಂಡು ಕಿರುಕುಳ ನೀಡಿದ್ದರು.

ಯುವಕ ಮತ್ತು ಆತನ ತಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ವಿಚಾರ ತಿಳಿದಿದ್ದ ಆರೋಪಿಗಳು ಕದ್ದ ಹಣದಲ್ಲಿ 2 ಲಕ್ಷ ರೂ. ನೀಡುವಂತೆ ಅಮ್ಮ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಆರೋಪಿಗಳಿಗೆ ಯುವಕ ಮತ್ತು ಆತನ ತಾಯಿ ಹಣ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿಗಳು ತಾಯಿ, ಮಗನನ್ನು ಅಪಹರಿಸಿ ಮಹಿಳೆಯೊಬ್ಬರ ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದರು. ಬಳಿಕ ಇಬ್ಬರ ಬಳಿಯೂ ಹಣ ಇಲ್ಲ ಎಂದು ತಿಳಿದಾಗ ಅವರನ್ನು ಬಿಟ್ಟು ಕಳಿಸಿದ್ದರು.

ನಂತರ ನೊಂದ ಮಹಿಳೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಜೋಸೆಫ್ ಹಾಗೂ ಶ್ರೀನಿವಾಸ್ ರೌಡಿಶೀಟರ್​​ಗಳಾದರೆ, ಶಹಾಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ತಾಯಿ ಕೊಲೆ ಮಾಡುವುದಾಗಿ ಹೆದರಿಸಿ, ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ - Minor Girl Raped

ABOUT THE AUTHOR

...view details