ಭಾರತದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರ 'ಚುಂಬನ' ವಿವಾದಕ್ಕೀಡಾಗಿದೆ. ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಮಹಿಳಾ ಅಭಿಮಾನಿಗಳಿಗೆ ಮುತ್ತಿಟ್ಟಿದ್ದಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆ ಗಾಯಕರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆ ರೀತಿ ವರ್ತಿಸಿದ್ದಕ್ಕೆ ತಮಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನನಗೆ, ನನ್ನ ಕುಟುಂಬಕ್ಕೆ, ನನ್ನ ದೇಶಕ್ಕೆ ಕೆಟ್ಟ ಹೆಸರು ತರುವ ಯಾವ ಕೆಲಸವನ್ನೂ ನಾನೆಂದಿಗೂ ಮಾಡಿಲ್ಲ. ಈಗ ಅಂತಹ ಕೆಲಸಗಳನ್ನು ಏಕೆ ಮಾಡಬೇಕು? ನನ್ನ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯವಿದೆ. ನೀವು ನೋಡಿದ ವೈರಲ್ ವಿಡಿಯೋ ನಮ್ಮ (ಅಭಿಮಾನಿಗಳೊಂದಿಗೆ) ನಡುವಿನ ಪ್ರೀತಿಗೆ ಸಾಕ್ಷಿ. ಅವರು ನನ್ನನ್ನು ಪ್ರೀತಿಸುವ ರೀತಿಯನ್ನು ನಾನು ಮೆಚ್ಚುತ್ತೇನೆ. ಅವರ ಮೇಲೆ ನನಗೂ ಪ್ರೀತಿಯಿದೆ" - ಗಾಯಕ ಉದಿತ್ ನಾರಾಯಣ್.
Lol😭
— Ghar Ke Kalesh (@gharkekalesh) January 31, 2025
pic.twitter.com/bIVc4VJr2d
ಟೀಕಾಕಾರರಿಂದ ಹೆಚ್ಚು ಪ್ರಸಿದ್ಧನಾದೆ: "ಈ ವಿವಾದದ ಬಗ್ಗೆ ನಾನು ಚಿಂತೆ ಮಾಡೋದಿಲ್ಲ. ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಉದ್ದೇಶಗಳಿಲ್ಲದಿದ್ದಾಗ ನಾನೇಕೆ ಅಸಮಾಧಾನಗೊಳ್ಳಬೇಕು?. ಕೆಲವರು ನಮ್ಮ ಶುದ್ಧ ಪ್ರೀತಿಯನ್ನು ತಪ್ಪಾಗಿ ನೋಡುತ್ತಿದ್ದಾರೆ. ಹಾಗೆ ಮಾಡುವವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ನಿಜ ಹೇಳಬೇಕೆಂದರೆ, ಅವರಿಂದಾಗಿ ನಾನು ಹೆಚ್ಚು ಪ್ರಸಿದ್ಧನಾದೆ. ಅದಕ್ಕಾಗಿ ಧನ್ಯವಾದಗಳು" ಎಂದು ತಿಳಿಸಿದರು.
ಇದನ್ನೂ ಓದಿ: ಲೈವ್ ಪ್ರೋಗ್ರಾಮ್ನಲ್ಲೇ ಮಹಿಳಾ ಅಭಿಮಾನಿಗೆ ಚುಂಬಿಸಿದ ಗಾಯಕ ಉದಿತ್ ನಾರಾಯಣ್: ವಿಡಿಯೋ ವೈರಲ್
ಇತ್ತೀಚೆಗೆ ವೈರಲ್ ಆಗಿರೋ ವಿಡಿಯೋ, ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರ ಮ್ಯೂಸಿಕ್ ಪ್ರೋಗ್ರಾಮ್ಗೆ ಸಂಬಂಧಿಸಿದ್ದು. ಈವೆಂಟ್ನಲ್ಲಿ ತಮ್ಮ ವೃತ್ತಿಜೀವನದ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದರು. 'ಮೊಹ್ರಾ' ಚಿತ್ರದ ಟಿಪ್ ಟಿಪ್ ಬರ್ಸಾ ಹಾಡನ್ನು ಹಾಡುತ್ತಿದ್ದಾಗ, ಕೆಲ ಮಹಿಳಾ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಿಸಿದರು. ಆದ್ರೆ ಆಶ್ಚರ್ಯಕರವಾಗಿ ಮಹಿಳಾ ಅಭಿಮಾನಿಗಳಿಗೆ ಗಾಯಕ ಚುಂಬಿಸಿದರು. 2-3 ಮಹಿಳೆಯರೊಂದಿಗೆ ಇಂತಹ ಒಂದು ಘಟನೆ ನಡೆದಿದೆ. ಲಿಪ್ ಕಿಸ್ ಕೊಟ್ಟ ಹಿನ್ನೆಲೆ, ವಿಡಿಯೋ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು.
ಇದನ್ನೂ ಓದಿ: ಅಯೋಧ್ಯೆಗೆ ಭೇಟಿ, ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ: ಕಾಶಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು
"ಉದಿತ್ ನಾರಾಯಣ್ ಅವರಂತಹ ಹಿರಿಯ ಗಾಯಕರಿಂದ ಇಂತಹ ಕ್ಷಣವನ್ನು ನಿರೀಕ್ಷಿಸಿರಲಿಲ್ಲ" ಎಂದು ಅಸಮಧಾನ ವ್ಯಕ್ತವಾಗಿದ್ದರೆ, ಇಂತಹ ಕ್ಲೋಸ್ನೆಸ್ಗೆ ಅವಕಾಶ ಮಾಡಿಕೊಟ್ಟಿದ್ದೇ ಮಹಿಳಾ ಅಭಿಮಾನಿಗಳು ಎಂದು ಕೆಲವರು ದೂಷಿಸಿದರು. ಒಟ್ಟಾರೆ, ವಿಡಿಯೋ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಆದ್ರೆ ಇದು ಅಭಿಮಾನಿಗಳ ಮೇಲೆ ತಮ್ಮ ಪ್ರೀತಿ ವ್ಯಕ್ತಪಡಿಸುವ ರೀತಿ ಎಂದು ಗಾಯಕರು ಸಮರ್ಥಿಸಿಕೊಂಡಿದ್ದಾರೆ.