ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್​ ಆಗಿ ಎನ್ ಶಶಿಕುಮಾರ ಅಧಿಕಾರ ಸ್ವೀಕಾರ - Hubballi Dharawad Commissioner - HUBBALLI DHARAWAD COMMISSIONER

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್​ ಆಗಿ ಎನ್ ಶಶಿಕುಮಾರ ಅಧಿಕಾರ ಸ್ವೀಕರಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅಧಿಕಾರ ಸ್ವೀಕಾರ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅಧಿಕಾರ ಸ್ವೀಕಾರ (ETV Bharat)

By ETV Bharat Karnataka Team

Published : Jul 4, 2024, 9:44 AM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್​​ನಲ್ಲಿ ಬದಲಾವಣೆಯಾಗಿದೆ. ಹು-ಧಾ ಪೊಲೀಸ್ ಕಮೀಷನರ್ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಸ್ಥಾನಗಳಿಗೆ ನೂತನವಾಗಿ ನೇಮಕವಾದ ಅಧಿಕಾರಿಗಳು ಬುಧವಾರ ಅಧಿಕಾರ ಸ್ವೀಕರಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಆಗಿ ಎನ್ ಶಶಿಕುಮಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಅಧಿಕಾರ ಸ್ವೀಕಾರ ಮಾಡಿದರು.

ಕಳೆದ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಯುವತಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ ಎಂದು ರಾಜಕೀಯ ನಾಯಕರು ಆರೋಪ‌ ಮಾಡಿದ್ದರು‌. ಇದು ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿತ್ತು. ಅಂಜಲಿ ಕೊಲೆ ಪ್ರಕರಣದ ಬಳಿಕ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಲಾಗಿತ್ತು. ನಗರದಲ್ಲಿ ಕೊಲೆ, ಕೊಲೆ ಯತ್ನ, ರೌಡಿಶೀಟರ್​ಗಳನ್ನು ಹತೋಟಿಗೆ ತೆಗೆದುಕೊಳ್ಳಲು ಈ‌ ಹಿಂದಿನ ಕಮೀಷನರ್ ರೇಣುಕಾ ಸುಕುಮಾರ್ ವಿಫಲವಾಗಿದ್ದಾರೆ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಇದೀಗ ಹುಬ್ಬಳ್ಳಿ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಎನ್ ಶಶಿಕುಮಾರ ಅವರನ್ನು ನೇಮಕ ಮಾಡಲಾಗಿದೆ.

ಉತ್ತರಕನ್ನಡದ ನೂತನ ಎಸ್ಪಿಯಾಗಿ ನಾರಾಯಣ ಎಂ ನೇಮಕ (ETV Bharat)

ಇತ್ತೀಚೆಗೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಇದರಿಂದಾಗಿ ನೂತನ ಪೊಲೀಸ್ ಆಯುಕ್ತರು ಅವಳಿ ನಗರದಲ್ಲಿ ತೀವ್ರ ನಿಗಾವಹಿಸಿ ಕಾರ್ಯ ನಿರ್ವಹಿಸುವುದು ಸವಾಲಾಗಿದೆ.

ಉತ್ತರಕನ್ನಡದ ನೂತನ ಎಸ್ಪಿಯಾಗಿ ನಾರಾಯಣ ಎಂ ನೇಮಕ; ಎಸ್ಪಿ ವಿಷ್ಣುವರ್ಧನ್ ಮೈಸೂರಿಗೆ ವರ್ಗಾವಣೆ

ಉತ್ತರಕನ್ನಡದ ನೂತನ ಎಸ್ಪಿಯಾಗಿ ನಾರಾಯಣ ಎಂ ನೇಮಕ (ETV Bharat)

ಕಾರವಾರ: ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದು, ಜಿಲ್ಲೆಗೆ ನೂತನ ಎಸ್ಪಿ ಆಗಿ ನಾರಾಯಣ.ಎಂ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿಭಾಯಿಸಿದ ವಿಷ್ಣುವರ್ಧನ್ ಅವರನ್ನು ಇದೀಗ ಮೈಸೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು 2014ರ ಕರ್ನಾಟಕ ಬ್ಯಾಚಿನ ಐಪಿಎಸ್ ಅಧಿಕಾರಿ ಸದ್ಯ ಕೋಲಾರ ಜಿಲ್ಲೆಯ ಎಸ್ಪಿ ಆಗಿದ್ದ ನಾರಾಯಣ.ಎಂ ಅವರನ್ನು ಉತ್ತರಕನ್ನಡ ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕ ಮಾಡಿದೆ.

ಎಸ್ಪಿ ಎಂ ನಾರಾಯಣ ಅವರು ಈ ಹಿಂದೆ ಭಟ್ಕಳದಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡಿದ್ದ ಅವರು ಕೋಲಾರ ಎಸ್ಪಿಯಾಗಿ ಕಾರ್ಯನಿರ್ವಹಿಸಿ ಇದೀಗ ಉತ್ತರಕನ್ನಡಕ್ಕೆ ವರ್ಗಾವಣೆಗೊಂಡಿದ್ದಾರೆ.

ಇದನ್ನೂ ಓದಿ: ಝೀರೋ ಟ್ರಾಫಿಕ್ ಮೂಲಕ ಕೊಪ್ಪಳದಿಂದ ಬೆಂಗಳೂರು ಆಸ್ಪತ್ರೆಗೆ 22 ದಿನದ ಮಗು ರವಾನೆ - Child transported in zero traffic

ABOUT THE AUTHOR

...view details