ಕರ್ನಾಟಕ

karnataka

ರಾಜ್ಯದ ಅಭಿವೃದ್ದಿಗೆ ತೈಲ ದರ ಏರಿಕೆ ಎಂಬ ಸಿಎಂ ಹೇಳಿಕೆ ವಿಪರ್ಯಾಸ: ಬೊಮ್ಮಾಯಿ - Basavaraj Bommai

By ETV Bharat Karnataka Team

Published : Jun 21, 2024, 5:55 PM IST

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕುರಿತು ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.

MP Basavaraj Bommai
ಸಂಸದ ಬಸವರಾಜ ಬೊಮ್ಮಾಯಿ (ETV Bharat)

ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ (ETV Bharat)

ಹಾವೇರಿ:ರಾಜ್ಯದ ಅಭಿವೃದ್ದಿಗೆ ತೈಲ ದರ ಏರಿಕೆ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದು ದೊಡ್ಡ ವಿಪರ್ಯಾಸ ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿಂದು ಮಾತನಾಡಿದ ಅವರು, ಬೆಲೆ ಏರಿಕೆಯಾದರೆ ಹಣದುಬ್ಬರ ಹೆಚ್ಚಾಗುತ್ತದೆ. ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತದೆ. ಅವರ ಆದಾಯ, ಖರ್ಚು ಜಾಸ್ತಿಯಾಗುತ್ತದೆ. ಹೀಗಾಗಿ ಅಭಿವೃದ್ದಿ ಹೇಗೆ ಸಾಧ್ಯ ಹೇಳಿ ಎಂದು ಪ್ರಶ್ನಿಸಿದರು.

ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ದಿ ಮಾಡುತ್ತಾರೋ ಮುಖ್ಯಮಂತ್ರಿಗಳೇ ಹೇಳಬೇಕು. ಕೇವಲ ಗ್ಯಾರಂಟಿಯಷ್ಟೇ ಅಲ್ಲ, ಇಡೀ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಸಂಪನ್ಮೂಲ ಕ್ರೋಢೀಕರಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ಈ ರಾಜ್ಯದಲ್ಲಿ ಜಿಎಸ್​ಟಿಯಲ್ಲಿ ಎರಡು ಮೂರು ಟ್ರೇಡ್‌ಗಳಲ್ಲಿ ದೊಡ್ಡ ಸೋರಿಕೆಯಾಗುತ್ತಿದೆ ಎಂದು ಹೇಳಿದರು.

ಸ್ಕ್ರ್ಯಾಪ್ ಡೀಲಿಂಗ್‌, ಅಡಿಕೆ ವ್ಯಾಪಾರ, ಪ್ಲಾಸ್ಟಿಕ್ ವ್ಯವಹಾರದಲ್ಲಿ ಲೀಕೇಜಾಗುತ್ತಿದೆ. ಸರಿಯಾದ ಕ್ರಮ ಕೈಗೊಂಡರೆ ಅದರಲ್ಲಿಯೇ ಸಾಕಷ್ಟು ಆದಾಯ ಬರುತ್ತದೆ ಎಂದರು.

ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಮೇಲೆ ತೆರಿಗೆ ಹೆಚ್ಚಿಸುವುದಲ್ಲ. ನಿಮ್ಮ ಆಡಳಿತವನ್ನು ಸುಧಾರಣೆ ಮಾಡಿ, ಲೀಕೇಜ್ ತಪ್ಪಿಸಿ ಸಂಪನ್ಮೂಲ ಕ್ರೋಢೀಕರಿಸಿ. ಹಣ ಮತ್ತು ಸಮಯ ನಿರ್ವಹಣೆ ಮಾಡಿದರೆ ಇದಕ್ಕೆ ಪರಿಹಾರವಿದೆ ಎಂದು ತಿಳಿಸಿದರು.

ಅಭಿವೃದ್ದಿನೂ ಮಾಡಬೇಕು, ಗ್ಯಾರಂಟಿನೂ ಮಾಡಬೇಕು. ಆಗ ಸಿದ್ದರಾಮಯ್ಯಗೆ ಶಹಬ್ಬಾಸ್ ಎನ್ನುತ್ತೇವೆ. ಒಂದೆಡೆ ಅಭಿವೃದ್ದಿ ಶೂನ್ಯ ಮಾಡಿ ಜನರಿಗೆ ತೆರಿಗೆ ಹಾಕುತ್ತಿದ್ದಾರೆ. ಇದು ಸರಿಯಾದ ಆಡಳಿತವಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ ಹಾಕಿ, ಬರೆ ಎಳೆದಿದೆ : ಬೊಮ್ಮಾಯಿ - BASAVARAJ BOMMAI

ABOUT THE AUTHOR

...view details