ಬೆಂಗಳೂರು: ಪ್ರಪಂಚದಲ್ಲಿ ತಾಯಿಗಿಂತ ಬೇರೆ ದೇವರಿಲ್ಲ. ತಾಯಿ ಮಡಿಲು ಸ್ವರ್ಗಕ್ಕೆ ಸಮಾನ ಅಂತಾರೆ. ಆದರೆ ಇಲ್ಲೊಂದೆಡೆ ಮಗುವಿಗೆ ತಾಯಿಯ ಮಡಿಲೇ ನರಕಸದೃಶವಾಗಿದೆ. ಸ್ನೇಹಿತನ ಜೊತೆ ಸೇರಿ ಹೆತ್ತ ಮಗುವಿಗೆ ಕಿರುಕುಳ ನೀಡುತ್ತಿದ್ದ ನಿಷ್ಕರುಣಿ ತಾಯಿಗೆ ಸ್ಥಳೀಯರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ. ವಾರದ ಹಿಂದೆ ನಡೆದಿರುವ ಘಟನೆ ಎನ್ನಲಾಗಿದ್ದು, ಪುಟ್ಟ ಮಗುವಿನ ದಯನೀಯ ಸ್ಥಿತಿ ಮನಕಲಕುವಂತಿದೆ.
ಪತಿಯಿಂದ ಅಂತರ ಕಾಪಾಡಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆಯ ವಿರುದ್ಧ, ಅಂದಾಜು 2-3 ವರ್ಷ ವಯಸ್ಸಿನ ಗಂಡು ಮಗುವಿಗೆ ನಿತ್ಯ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮಗುವಿದ್ದರೂ ಸಹ ಬಹುತೇಕ ಮನೆಯಿಂದ ಹೊರಗಡೆಯೇ ಸಮಯ ಕಳೆಯುತ್ತಿದ್ದ ಆಕೆಯ ಕುರಿತು ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮಗುವಿನ ಅಸಹಾಯಕ ಸ್ಥಿತಿ ಕಂಡುಬಂದಿದೆ.