ಕಲಬುರಗಿ: ಮಗಳ ಜೊತೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನಲ್ಲಿರುವ ಕಾಗಿಣಾ ನದಿಯಲ್ಲಿ ನಡೆದಿದೆ. ಸುಮಲತಾ ಪಾಟೀಲ್ (41) ಹಾಗೂ ವರ್ಷಾ ಪಾಟೀಲ್(24) ಆತ್ಮಹತ್ಯೆಗೆ ಶರಾಣಾದವರು.
ಮೃತರು ಮೂಲತಃ ಅಫಜಲಪುರ ತಾಲೂಕಿನ ನೀಲೂರು ಗ್ರಾಮದ ನಿವಾಸಿಗಳಾಗಿದ್ದು, ಕಲಬುರಗಿಯ ಎಂಬಿ ನಗರದಲ್ಲಿ ವಾಸವಾಗಿದ್ದರು. ವರ್ಷಾ ಕಲಬುರಗಿಯ ವುಮೆನ್ಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವರ್ಷಾ ಓದುತ್ತಿದ್ದಳು. ಸೋಮವಾರ ಸಂಜೆ ಮನೆಯಿಂದ ಹೊರ ಹೋಗಿದ್ದವರು ಮಂಗಳವಾರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನದಿಯಲ್ಲಿ ಶವಗಳು ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೀನುಗಾರರ ಸಹಾಯದಿಂದ ಪೊಲೀಸರು ಇಬ್ಬರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ನಟರಾಜ ಲಾಡೆ ಹಾಗೂ ಪಿಎಸ್ಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಹಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ನಟಿ-ಗಾಯಕಿ ಮಲಿಕಾ ರಜಪೂತ್ ಅನುಮಾನಾಸ್ಪದ ಸಾವು