ಕರ್ನಾಟಕ

karnataka

ETV Bharat / state

ಡಿಸಿಎಂ ಹುದ್ದೆಗೆ ದಲಿತರಲ್ಲಿ ಅನೇಕರು ಸಮರ್ಥರಿದ್ದಾರೆ: ಸಚಿವ ಮಹಾದೇವಪ್ಪ - H C Mahadevappa - H C MAHADEVAPPA

ಡಿಸಿಎಂ ಹುದ್ದೆಯ ವಿಚಾರವಾಗಿ ಸಚಿವ ಡಾ.ಹೆಚ್​.ಸಿ.ಮಹಾದೇವಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

dr-h-c-mahadevappa
ಸಚಿವ ಡಾ.ಹೆಚ್​.ಸಿ.ಮಹಾದೇವಪ್ಪ (ETV Bharat)

By ETV Bharat Karnataka Team

Published : Jun 24, 2024, 7:06 PM IST

ಸಚಿವ ಡಾ.ಹೆಚ್​.ಸಿ.ಮಹಾದೇವಪ್ಪ ಪ್ರತಿಕ್ರಿಯೆ (ETV Bharat)

ಚಾಮರಾಜನಗರ:ಡಿಸಿಎಂ ಹುದ್ದೆಗೆ ದಲಿತರಲ್ಲಿ ಅನೇಕರು ಸಮರ್ಥರಿದ್ದಾರೆ ಎಂದು ಹೇಳುವ ಮೂಲಕ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಪರೋಕ್ಷವಾಗಿ ಮೂವರು ಡಿಸಿಎಂ ಬೇಕೆಂಬ ಕೂಗಿಗೆ ಸಹಮತ ವ್ಯಕ್ತಪಡಿಸಿದರು. ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ. ದಲಿತ ಕೋಟಾ ಆ ಕೋಟಾ ಇಲ್ಲ ಎಂದು ಇದೇ ವೇಳೆ ತಿಳಿಸಿದರು.

ಚಾಮರಾಜನಗರದಲ್ಲಿ ಇಂದು ಈ ಕುರಿತು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ವಿಚಾರವಾಗಿ ಯಾರೂ ಯಾರ ಶಕ್ತಿಯನ್ನೂ ಕುಂದಿಸುವ ಪ್ರಯತ್ನ ಮಾಡುತ್ತಿಲ್ಲ. ಡಿಸಿಎಂ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರು ನನ್ನ ಬಳಿ ಈ ಕುರಿತು ಕೇಳಿದಾಗ ಅಭಿಪ್ರಾಯ ತಿಳಿಸುತ್ತೇನೆ. ಇದು ಪಕ್ಷದ ಆಂತರಿಕ ವಿಚಾರ. ನನ್ನ ಮನಸ್ಸಿನಲ್ಲಿ ಇರುವುದನ್ನು ಮಾಧ್ಯಮದವರೊಂದಿಗೆ ಹೇಳಲು ಸಾಧ್ಯವಿಲ್ಲ ಎಂದರು.

ಪುತ್ರ ಸುನೀಲ್ ಬೋಸ್ ಸಂಸದನಾದ ಬಳಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಕುರಿತ ಪ್ರಶ್ನೆಗೆ, ನಾನು ಈಗಷ್ಟೇ ಆ್ಯಕ್ಟಿವ್ ಆಗಿಲ್ಲ, ಮೊದಲಿನಿಂದಲೂ ಆ್ಯಕ್ಟಿವ್ ಆಗಿದ್ದೇನೆ. ಯಾವತ್ತೂ ಡಲ್ ಆಗಿಲ್ಲ. ಚಾಮರಾಜನಗರ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಜಿಲ್ಲೆ. ಇಲ್ಲಿರುವ ರಸ್ತೆಗಳು ನಾನು ಮಾಡಿದ್ದು. ಆಗ ನಾನೇನೂ ಉಸ್ತುವಾರಿ ಆಗಿರಲಿಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು, ಹಿಂದುಳಿದವರಿದ್ದಾರೆ. ಹಾಗಾಗಿ ನನಗೆ ವಿಶೇಷ ಆಸಕ್ತಿ. ಅದನ್ನು ಬಿಟ್ಟು ಬೇರಾವುದೇ ಪೊಲಿಟಿಕಲ್ ಇಂಟ್ರೆಸ್ಟ್ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ನನಗೂ ಕೆಪಿಸಿಸಿ ಅಧ್ಯಕ್ಷನಾಗಬೇಕೆಂಬ ಆಸೆ ಇದೆ: ಸಚಿವ ಹೆಚ್.ಸಿ.ಮಹದೇವಪ್ಪ - H C Mahadevappa

ABOUT THE AUTHOR

...view details