ಚಾಮರಾಜನಗರ: ಎತ್ತಿನಗಾಡಿ ಓಡಿಸುವಾಗ ಆಯತಪ್ಪಿ ಕೆಳಕ್ಕೆ ಬಿದ್ದ ವ್ಯಕ್ತಿಯ ಮೇಲೆ ಚಕ್ರ ಹರಿದು ಆತ ಮೃತಪಟ್ಟ ಘಟನೆ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆಯಿತು.
ಕಮರವಾಡಿ ಗ್ರಾಮದ ಬಸವ (45) ಮೃತರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಜಾತ್ರೆಗೆ ಕಮರವಾಡಿ ಗ್ರಾಮದಿಂದಲೂ ಬಂಡಿಗಳು ಬಂದಿದ್ದವು. ಪೂಜೆ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದಾಗ ಅವಘಡ ಸಂಭವಿಸಿದೆ.
ಬಂಡಿಯ ನೊಗ ಕಳಚಿಕೊಂಡ ಕಾರಣ ಬಸವ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಬಂಡಿಯ ಚಕ್ರ ಅವರ ಮೈಮೇಲೆ ಹರಿದಿದೆ.