ಕಾರವಾರ:ಅಂಕೋಲಾ ಶಿರೂರು ಗುಡ್ಡ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಭಾರತ್ ಬೆಂಜ್ ಲಾರಿಯ ವೀಲ್ ಜಾಕ್ ಅನ್ನು ಮಂಗಳವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಕಾರ್ಯಾಚರಣೆ ವೇಳೆ ಪತ್ತೆ ಮಾಡಿದ್ದಾರೆ. ನದಿಯಲ್ಲಿ ಎರಡನೇ ಹಂತದ ಕಾರ್ಯಾಚರಣೆಗೆ ಇಳಿದಿದ್ದ ಈಶ್ವರ್ ಮಲ್ಪೆ ಈ ಹಿಂದೆ ಗುರುತಿಸಲಾಗಿದ್ದ ನದಿಯ ಆಳದಲ್ಲಿ ಮುಳುಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ವೀಲ್ ಜಾಕ್ ಹೊರತೆಗೆದಿದ್ದಾರೆ.
ಶಿರೂರು ಗುಡ್ಡ ಕುಸಿದು ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿರುವ ಇನ್ನೂ ಮೂವರನ್ನು ಪತ್ತೆ ಮಾಡುವ ಸಂಬಂಧ ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆಗೆ ಆಗಮಿಸಿತ್ತು. ಮಳೆ ಕಡಿಮೆಯಾದ ಹಿನ್ನಲೆ ಮತ್ತು ನದಿ ನೀರು ತಿಳಿಯಾಗಿದ್ದಲ್ಲದೇ ನೀರಿನ ಹರಿವಿನ ಪ್ರಮಾಣ ಕೂಡ ಕೂಡಕಡಿಮೆಯಾಗಿದ್ದರಿಂದ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಶಾಸಕ ಸತೀಶ್ ಸೈಲ್ ಆಹ್ವಾನದ ಮೇರೆಗೆ ಈ ತಂಡ ಆಗಮಿಸಿತ್ತು.