ಕರ್ನಾಟಕ

karnataka

ETV Bharat / state

ಬಂಟ್ವಾಳ: ಅಪಘಾತದಲ್ಲಿ ಸಹಾಯ ಮಾಡಲು ತೆರಳಿದವರ ಬೈಕ್​ಗಳ​ ಮೇಲೆ ಹರಿದ ಲಾರಿ - ROAD ACCIDENT - ROAD ACCIDENT

ಮಂಗಳೂರಿನ ಹೊರವಲಯದಲ್ಲಿ ಬೈಕ್​ಗಳ ಮೇಲೆ ಲಾರಿ ಹರಿದರೆ, ಚಿಕ್ಕಮಗಳೂರಿನಲ್ಲಿ ಸ್ಕೈ ವಾಕರ್ ಪಿಲ್ಲರ್​ ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ಬೈಕ್​ಗಳ​ ಮೇಲೆ ಹರಿದ ಲಾರಿ
ಬೈಕ್​ಗಳ​ ಮೇಲೆ ಹರಿದ ಲಾರಿ

By ETV Bharat Karnataka Team

Published : Mar 24, 2024, 8:18 PM IST

ಬಂಟ್ವಾಳ (ದಕ್ಷಿಣ ಕನ್ನಡ) : ಮಂಗಳೂರಿನ ಹೊರವಲಯ ಮತ್ತು ಚಿಕ್ಕಮಗಳೂರಿನಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿವೆ. ವಾಹನವೊಂದು ಅಪಘಾತವಾಗಿದ್ದನ್ನು ಕಂಡು ಸಹಾಯ ಮಾಡಲು ತೆರಳಿದವರ ಬೈಕ್​ಗಳ ಮೇಲೆ ಲಾರಿ ಹರಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಬೆಂಜನಪದವು ಸಮೀಪ ಕೊಡ್ಮಾನ್ ಕೋಡಿ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸ್ಕೈ ವಾಕರ್ ಪಿಲ್ಲರ್​ ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗಿದೆ.

ಬೆಂಜನಪದವು ಗುಡ್ಡವೊಂದಕ್ಕೆ ಬಂದಿದ್ದ ಕಾರೊಂದು ಚಾಲಕನ ಎಡವಟ್ಟಿನಿಂದ ಗುಂಡಿಗೆ ಬಿದ್ದಿತ್ತು. ಗುಂಡಿಗೆ ಬಿದ್ದ ಕಾರನ್ನು ಎತ್ತಿ ಮೇಲಕ್ಕೆ ತರುವ ಉದ್ದೇಶದಿಂದ ಚಾಲಕನಿಗೆ ಸಹಾಯ ಮಾಡುವುದಕ್ಕೆ ಎರಡು ಬೈಕ್ ಗಳಲ್ಲಿ ಯುವಕರು ಆಗಮಿಸಿದರು. ರಸ್ತೆಯ ಬದಿಯಲ್ಲಿ ಬೈಕ್​ಗಳನ್ನು ನಿಲ್ಲಿಸಿ ಕಾರು ಎತ್ತಲು ಹೋದ ವೇಳೆ ಬೆಂಜನಪದವು ಕಡೆಯಿಂದ ಮಾರಿಪಳ್ಳ ಕಡೆಗೆ ತೆರಳುತ್ತಿದ್ದ ಲಾರಿ ಹರಿದಿದೆ.

ಪರಿಣಾಮ ಬೈಕ್​ಗಳು ಸಂಪೂರ್ಣ ಜಖಂಗೊಂಡಿವೆ. ಮಣ್ಣು ಸಾಗಾಟ ಮಾಡುವ ತಮಿಳುನಾಡು ಮೂಲದ ಲಾರಿ ಇದಾಗಿದೆ. ಮಣ್ಣು ತುಂಬಿಸಿಕೊಂಡು ಬೆಂಜನಪದವು ಕಡೆಯಿಂದ ಬಿ ಸಿ ರೋಡಿನ ಕೈಕಂಬ ರಸ್ತೆಗೆ ತೆರಳಬೇಕಿತ್ತು. ಚಾಲಕನಿಗೆ ರಸ್ತೆಯ ಅಂದಾಜು ಇಲ್ಲದೆ, ದಾರಿ ತಪ್ಪಿ ಮಾರಿಪಳ್ಳ ರಸ್ತೆಯಲ್ಲಿ ಸಾಗಿದ್ದಾನೆ. ಈ ವೇಳೆ ತಿರುವಿನಲ್ಲಿ ಅಧಿಕ ಲೋಡ್ ಹೊಂದಿದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ.

ಸ್ಕೈ ವಾಕರ್ ಪಿಲ್ಲರ್ ಗೆ ಬಸ್ ಡಿಕ್ಕಿ- (ಪ್ರತ್ಯೇಕ ಅಪಘಾತ) :ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಂಚೆ ಚೋಮನಹಳ್ಳಿ ಬಳಿ ರಸ್ತೆ ಬದಿಯ ಸ್ಕೈ ವಾಕರ್ ಪಿಲ್ಲರ್ ಗೆ ಚಾಲನಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿದ್ದ 5 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಡೂರಿನಿಂದ ಅರಸೀಕೆರೆಗೆ ಬಸ್‌ ತೆರಳುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಕಡೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಭೀಮಾನದಿಯ ದಂಡೆಯ ಮೇಲೆ ಅಪರಿಚಿತ ವ್ಯಕ್ತಿ ಶವ ಪತ್ತೆ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಬಳಿ ಭೀಮಾನದಿಯ ದಂಡೆಯ ಮೇಲೆ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಸುಮಾರು 36 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದೆ. ಮೃತ ವ್ಯಕ್ತಿ ಕೆಂಪು ಬಣ್ಣದ ಬನಿಯನ್‌ ಧರಿಸಿದ್ದು, ಕೈ ಮೇಲೆ ಹಚ್ಚೆಯೊಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಾವು ಸಹಜ ಸಾವೋ ಅಥವಾ ಅಸಹಜ ಸಾವೋ ಎನ್ನುವುದರ ಜೊತೆಗೆ ಗುರುತು ಪತ್ತೆ ಕುರಿತಂತೆ ಪೊಲೀಸ್‌ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಝಳಕಿ ಪಿಎಸ್ಐ ಹೊನ್ನಪ್ಪ ತಳವಾರ, ಸಿಬ್ಬಂದಿ ರವಿ ಪತ್ತಾರ, ಶಿವು ಬಿರಾದಾರ, ಮಹೇಶ ಬೆಳ್ಳೆನವರ, ಎಸ್ ಬಿ ಉಮರಾಣಿ ಸ್ಥಳದಲ್ಲಿದರು.

ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಲಾರಿಗೆ ಕ್ಯಾಂಟರ್ ಡಿಕ್ಕಿ: ಗಾಯಗೊಂಡ ಮೂವರನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ - Road Accident

ABOUT THE AUTHOR

...view details