ಕಾರವಾರ:ಅಂಕೋಲಾದ ಶಿರೂರು ಗುಡ್ಡದ ಸಮೀಪ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಇಂದು ಮೂರನೇ ದಿನದ ಕಾರ್ಯಾಚರಣೆ ವೇಳೆ ಮಣ್ಣಿನಡಿ ಹೂತು ಹೋಗಿದ್ದ ಲಾರಿಯ ಇಂಜಿನ್ ಹಾಗು ಕ್ಯಾಬಿನ್ ಮೇಲೆಕ್ಕೆತ್ತಲಾಯಿತು.
ಗುಡ್ಡ ಕುಸಿದ ಗಂಗಾವಳಿ ನದಿ ತೀರದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇಂದು ಮುಂಜಾನೆಯಿಂದ ಆರಂಭವಾದ ಕಾರ್ಯಾಚರಣೆ ವೇಳೆ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ ಮಾಡಿ ಅದನ್ನು ಕ್ರೇನ್ ಮೂಲಕ ಕಾರ್ಮಿಕರು ಮೇಲಕ್ಕೆತ್ತಿದರು. ಇದು ಗ್ಯಾಸ್ ಟ್ಯಾಂಕರ್ ಇಂಜಿನ್ ಇರಬಹುದೆಂದು ಶಂಕಿಸಲಾಗಿದೆ.
ಶಿರೂರು ಕಾರ್ಯಾಚರಣೆ: ಲಾರಿ ಇಂಜಿನ್, ಕ್ಯಾಬಿನ್ ಪತ್ತೆ (ETV Bharat) ಜುಲೈ 16ರಂದು ಹೆದ್ದಾರಿ ಕುಸಿದು 11 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ 8 ಮಂದಿಯ ಶವ ಸಿಕ್ಕಿದೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ಹಾಗು ಕೇರಳದ ಅರ್ಜುನ್ ಮೃತದೇಹಕ್ಕಾಗಿ ಮತ್ತೆ ಶೋಧ ಕಾರ್ಯ ನಡೆಯುತ್ತಿದೆ. ಅರ್ಜುನ್ ಚಾಲನೆ ಮಾಡುತ್ತಿದ್ದ ಕಟ್ಟಿಗೆ ತುಂಬಿದ ಬೆಂಜ್ ಲಾರಿ ಕೂಡ ಕಾಣೆಯಾಗಿದ್ದು ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ:ಟ್ಯಾಂಕರ್ ಚೆಸ್ಸಿ ಸಿಕ್ಕರೂ ಪತ್ತೆಯಾಗದ ಮೃತದೇಹಗಳು: ಕಾದು ಕುಳಿತ ಕುಟುಂಬಸ್ಥರಿಗೆ ನಿರಾಸೆ - Shiruru Hill Collapse Operation