ಮೈಸೂರು: ಶಿಬಿರಾರ್ಥಿಗಳಿಗೆ ಊಟ ಸಿದ್ಧಪಡಿಸಿದ ಟೆಂಡರ್ ಬಿಲ್ ಬಿಡುಗಡೆಗೆ 50 ಸಾವಿರ ಲಂಚ ಪಡೆಯುತ್ತಿದ್ದ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ ಎಫ್ಡಿಎ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಎಫ್ಡಿಎ ಮಹೇಶ್ ಆರೋಪಿ. ವಿನಾಯಕ ಕ್ಯಾಟರಿಂಗ್ ಪ್ರೊಪರೇಟರ್ ಶಿವನಾಗ ಎಂಬವರು ಮೇಟಗಳ್ಳಿಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಗೆ ಉಟೋಪಚಾರ ಒದಗಿಸಿದ್ದಕ್ಕೆ ಸಂಬಂಧಿಸಿದಂತೆ, ಕೇಂದ್ರದಿಂದ 5,16,000 ರೂ. ಬಿಲ್ ಬಿಡುಗಡೆ ಮಾಡಿದ್ದು, ದೂರುದಾರರ ಅಕೌಂಟಿಗೆ ಪಾವತಿಯಾಗಿದೆ. ಈ ಬಿಲ್ ಮಾಡಿಸಲು ಮಹೇಶ್ 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿವನಾಗ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಹಣ ಪಡೆದುಕೊಳ್ಳುವ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.