ಕರ್ನಾಟಕ

karnataka

ETV Bharat / state

ಕುವೆಂಪು ಏನು ಹೇಳಿದಾರೆ ಗೊತ್ತಾ; ಮನೋಜ್ ಜೈನ್​ಗೆ ಸಿಎಂ ಹೇಳಿದ ಕುವೆಂಪು ಪಾಠ - Siddaramaiah teach to Manoj Jain - SIDDARAMAIAH TEACH TO MANOJ JAIN

ಕಾರ್ಯದರ್ಶಿ ಮನೋಜ್ ಜೈನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಕಿರುಪಾಠ ಮಾಡಿದ್ದಾರೆ. ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್​ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Jul 9, 2024, 7:19 PM IST

ಬೆಂಗಳೂರು :ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್​ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದ್ದಾರೆ ಗೊತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿ - ಸಿಇಒಗಳ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಸಂಗ ನಡೆಯಿತು.

ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು "ಇಂಡೀಕರಣ" ಪದ ಬಳಸಿದರು. ಈ ವೇಳೆ ಮುಖ್ಯಮಂತ್ರಿಗಳು ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ Mutation ಪದವನ್ನೇ ಬಳಸಿ ಎನ್ನುತ್ತಾ, "ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್​ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದ್ದಾರೆ ಗೊತ್ತಾ ಎಂದು ಕಿರು ಪಾಠ ಮಾಡಿದರು.

ವಕ್ಫ್ ಆಸ್ತಿ ಒತ್ತುವರಿ ತೆರವು ತ್ವರಿತಗೊಳಿಸಿ : ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 217 ವಕ್ಫ್‌ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. 22,581 ವಕ್ಫ್‌ ಖಾತೆ ಮ್ಯುಟೇಶನ್‌ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

AC ನೇತೃತ್ವದಲ್ಲಿ ದೌರ್ಜನ್ಯ ತಡೆ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸದಿರುವುದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಸಭೆಯನ್ನೇ ನಡೆಸದ 13 ಉಪ ವಿಭಾಗಗಳ ಬಗ್ಗೆ ಡಿಸಿಗಳನ್ನು ಖಾರವಾಗಿ ಪ್ರಶ್ನಿಸಿದರು. ಸಿಂಧುತ್ವ ಪ್ರಮಾಣಪತ್ರ ವಿಚಾರದಲ್ಲಿ ಅಸಡ್ಡೆ ಬೇಡ. ಅರ್ಹರಾಗಿದ್ದರೆ ತಕ್ಷಣ ಕೊಡಿ, ಅರ್ಹತೆ ಇಲ್ಲದಿದ್ದರೆ ಸ್ಪಷ್ಟವಾಗಿ‌ ತಿಳಿಸಿ, ಸತಾಯಿಸಬೇಡಿ. ದೌರ್ಜನ್ಯ ತಡೆ ಅಧಿನಿಯಮದಡಿ ಕೊಲೆ ಪ್ರಕರಣಗಳಲ್ಲಿ ತಡ ಮಾಡದೇ ಅನುಕಂಪದ ಸರ್ಕಾರಿ ನೌಕರಿ ನೀಡಿ ಎಂದು ಸೂಚಿಸಿದರು.

ದೌರ್ಜನ್ಯ ತಡೆ ಅಧಿನಿಯಮದ ಅಡಿ ದಾಖಲಾಗಿರುವ ಒಟ್ಟು 26 ಕೊಲೆ ಪ್ರಕರಣಗಳಲ್ಲಿ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ನೌಕರಿ ಒದಗಿಸಬೇಕು. ಜಿಲ್ಲೆಯಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಇದನ್ನೂ ಓದಿ :ವ್ಯಾಪಕವಾಗಿ ಹಬ್ಬುತ್ತಿರುವ ಡೆಂಗ್ಯೂ ಬಗ್ಗೆ ಸುದೀರ್ಘ ಚರ್ಚೆ; ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ - CM MEETING

ABOUT THE AUTHOR

...view details