ಮಂಗಳೂರು:ಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವನ್ನು ಇಟ್ಟು ಆರಾಧಿಸುತ್ತಾರೆ. ಇಷ್ಟು ಬಗೆಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸುವುದು ವಿರಳ. ಆದರೆ, ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆಯೊಬ್ಬರು ಈ ಬಾರಿ 116 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.
ಮಂಗಳೂರಿನ ರಥಬೀದಿಯಲ್ಲಿರುವ ಚಂದ್ರಮತಿ ಎಸ್. ರಾವ್‌ರವರೇ ಶ್ರೀಕೃಷ್ಣನಿಗೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. 66 ವರ್ಷದ ಇವರು ಪ್ರತಿವರ್ಷವೂ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಬಡಿಸುತ್ತಾರೆ. ಅದರಂತೆ ಈ ಬಾರಿ ವೈವಿದ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಚಿಪ್ಸ್ ಎಂದು 116 ಬಗೆಯ ನೈವೇದ್ಯಗಳನ್ನು ಬಡಿಸಿದ್ದಾರೆ. ವಾರಗಳಿಂದಲೇ ತಯಾರಿ ಆರಂಭಿಸುವ ಇವರು, ಮಡಿಯಲ್ಲಿದ್ದು, ಶುದ್ಧಾಚರಣೆಯಿಂದಲೇ ಈ ನೈವೇದ್ಯಗಳನ್ನು ತಯಾರಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಚಂದ್ರಮತಿ ಎಸ್ ಅವರು 'ಕೃಷ್ಣನೆಂದರೆ ನನಗೆ ಬಹಳ ಪ್ರೀತಿ. ಹಾಗಾಗಿಯೇ ಪ್ರತೀ ವರ್ಷವೂ ಅಷ್ಟಮಿಗೆ ನಾನು ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸುತ್ತೇನೆ. ಇಷ್ಟೇ ಐಟಂ ಮಾಡಬೇಕೆಂದು ನಾನು ಮಾಡುವುದಲ್ಲ. ಎಷ್ಟು ನನ್ನಲ್ಲಿ ಸಾಧ್ಯವೋ ಅಷ್ಟು ಭಕ್ಷ್ಯಗಳನ್ನು ಮಾಡುತ್ತೇನೆ. ಇದನ್ನು ನಾನು ಮಾಡುವುದಲ್ಲ. ಆ ಶ್ರೀಕೃಷ್ಣನೇ ನನ್ನಿಂದ ಮಾಡಿಸುವುದು' ಎನ್ನುತ್ತಾರೆ.
ಅಷ್ಟಮಿಯ ದಿನ ರಾತ್ರಿ ಕೃಷ್ಣನಿಗೆ ಈ ನೈವೇದ್ಯ ಬಡಿಸುತ್ತಾರೆ. ಹೆಚ್ಚಿನ ಭಕ್ಷ್ಯಗಳನ್ನು ಸ್ವಲ್ಪವೇ ಮಾಡಲಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಅವರು ಅಷ್ಟಮಿಯ ಪ್ರಸಾದ ಹಂಚುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸುಮಾರು ಏಳೆಂಟು ಬಗೆಯ ಭಕ್ಷ್ಯಗಳನ್ನು ಹೆಚ್ಚಿಗೆ ಮಾಡಿ ಅದನ್ನು ಹಂಚುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಬಡಿಸುವ ಚಂದ್ರಮತಿಯವರ ಕೃಷ್ಣಪ್ರೀತಿಗೆ ಮೆಚ್ಚಲೇ ಬೇಕಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ನೈವೇದ್ಯಗಳು
1. ಅವಲಕ್ಕಿ ಉಂಡೆ
2. ಮಿಠಾಯಿ ಉಂಡೆ
3. ತಿರುಪತಿ ಉಂಡೆ
4. ಬೇಸನ್ ಉಂಡೆ
5. ಗೋದಿ ಹಿಟ್ಟಿನ ಚುರುಮುಂಡೆ
6. ತಂಬಿಟ್ಟು ಉಂಡೆ
7. ಎಳ್ಳುಂಡೆ
8. ಕಡಲೆಹಿಟ್ಟಿನ ಬೇಸನ್ ಉಂಡೆ
9. ಗುಂಡಿಟ್ಟ್ ಉಂಡೆ
10. ಮುತ್ತಿನಚೂರು ಉಂಡೆ
11. ಕೊಬ್ಬರಿ ಉಂಡೆ
12. ರವೆ ಉಂಡೆ
13. ರವೆ ಬೇಸನ್ ಉಂಡೆ
14. ಡ್ರೈಫ್ರುಟ್ಸ್ ಉಂಡೆ
15. ನೆಲಕಡ್ಲೆ ಬೀಜದ ಉಂಡೆ
16. ಚಿರೋಟಿ ರವೆ ಉಂಡೆ
17. ಹೆಸರು ಬೇಳೆ ಉಂಡೆ
18. ಪುಟಾಣಿ ತಂಬಿಟ್ಟು ಉಂಡೆ
19. ರಾಗಿ ಹಿಟ್ಟಿನ ಉಂಡೆ
20. ಅರಳು ಉಂಡೆ
21. ಅಷ್ಟಮಿ ಉಂಡೆ
22. ಶೇವು ಉಂಡೆ
23. ನವರತ್ನ ಉಂಡೆ
24. ಕರಿ ಎಳ್ಳು ಗಸಗಸೆ ಉಂಡೆ
25. ಖರ್ಜುರದ ಉಂಡೆ
26. ಗೋಕಾಕ ವಿಶೇಷ ಲಡಗಿ ಉಂಡೆ
27. ಗೇರುಬೀಜದ ಉಂಡೆ
28. ಬುಂದಿ ಕಾಳಿನ ತುಪ್ಪದ ಉಂಡೆ
29. ಸುಕರಂಡೆ
30. ಬಾದಾಮಿ ಉಂಡೆ
31. ಬಿಸ್ಕತ್ ಉಂಡೆ
32. ಚರಮುರಿ ಉಂಡೆ
33. ಗುಲ್ಪವಾಟೆ ಉಂಡೆ
34. ಮನೋಹರ್ ಉಂಡೆ
35. ಮೋಹನಲಾಡು
36. ಗೋವಿಂದ ಲಡ್ಡು
37. ಮಂಡಿಗೆ
38. ಸಕ್ಕರೆ ರೊಟ್ಟಿ
39. ಜಗನಾಥ ಪೂರಿ ಕಾಜ
40. ಕರಜಿ ಕಾಯಿ
41. ಬಾದಾಮ್ ಪೂರಿ
42. ಚಿರೋಟಿ
43. ಶಂಕರಪಾಳಿ
44. ಬಾದುಷಾ
45. ಮಂಗಳೂರ ಸಾಟ
46. ಬಿಸ್ಕತ್ ತುಕುಡಿ
47. ಗುಲಾಬ್ ಜಾಮೂನ್
48. ನೇಂದ್ರ ಬಾಳೆ ಹಲ್ವಾ
49. ಕ್ಯಾರೆಟ್ ಹಲ್ವಾ
50. ಕೇಸರಿಬಾತ್
51. ಧಾರವಾಡ ಪೇಡಾ
52. ಕೇಸರಿ ಮಿಲ್ಕ್ ಪೇಡಾ
53. ರವಾ ಬರ್ಫಿ
54. ನವರತ್ನ ಬರ್ಫಿ
55. ಬಾದಾಮಿ ಬರ್ಫಿ
56. ಪಂಚರತ್ನ ಬರ್ಫಿ