ಬೆಂಗಳೂರು:ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಮಳೆ ನೀರು ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣದೊಳಗೆ ನುಗ್ಗಿದ ಪರಿಣಾಮ ಇಂದು ನಡೆಯಬೇಕಿದ್ದ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್‌ನ ಎರಡು ಪಂದ್ಯಗಳನ್ನ ಮುಂದೂಡಲಾಗಿದೆ.
ಕ್ರೀಡಾಂಗಣದ ಆವರಣದೊಳಗೆ ನೀರು ತುಂಬಿಕೊಂಡಿರುವುದರಿಂದ ಆಟಗಾರರು, ತೀರ್ಪುಗಾರರು, ತರಬೇತುದಾರರು ಸೂಕ್ತ ಸಮಯಕ್ಕೆ ತಲುಪುವುದೇ ದುಸ್ತರವಾಗಿದೆ. ಇದರಿಂದಾಗಿ ಚೈನೀಸ್ ತೈಪೆ - ಇರಾಕ್ ಹಾಗೂ ಫಿಲಿಪೈನ್ಸ್ - ಜಪಾನ್ ನಡುವಿನ ನಡೆಯಬೇಕಿದ್ದ ಇಂದಿನ ಮೊದಲ ಎರಡು ಪಂದ್ಯಗಳನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿಯನ್ನು ಆಯೋಜಕರು ನೀಡಿದ್ದಾರೆ.