ಕೊಪ್ಪಳ: ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಕುರಿ ಮೇಯಿಸುತ್ತಿದ್ದ ಬಾಲಕ ಸಾವಿಗೀಡಾದ ಘಟನೆ ಸೋಮವಾರ ಸಂಜೆ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಜರುಗಿದೆ. ಶ್ರೀನಿವಾಸ ಗೊಲ್ಲರ(16) ಮೃತ ಬಾಲಕ. ಬಾಲಕನ ಜೊತೆಗಿದ್ದ ತಂದೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಜಮೀನಿನಲ್ಲಿ ಸಂಜೆ ಕುರಿ ಮೇಯಿಸುತ್ತಿದ್ದಾಗ ಈ ಘಟನೆ ಜರುಗಿದೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಿಗೆ ಒಂದು ಎತ್ತು, 7 ಕುರಿಗಳು ಬಲಿ:ಕೊಪ್ಪಳ ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಇರಕಲಗಡಾದ ರಾಮಣ್ಣ ಬಿನ್ನಿ ಎಂಬುವವರಿಗೆ ಸೇರಿದ ಎತ್ತು ಮತ್ತು ಮುಕ್ಕುಂಪಿ ಗ್ರಾಮದ ಹನುಮಂತ ಗಿರಿಖಾನ ಎಂಬುವವರಿಗೆ ಸೇರಿದ 7 ಕುರಿಗಳು ಸಾವಿಗೀಡಾದ ಘಟನೆ ಜರುಗಿದೆ.
ಗಂಗಾವತಿಯಲ್ಲೂ ಗುಡುಗು ಸಿಡಿಲು ಮಳೆ: ಸೋಮವಾರ ಸಂಜೆ ಗಂಗಾವತಿ ಸುತ್ತಲೂ ಗುಡುಗು - ಸಿಡಲು ಸಮೇತ ಮಳೆಯಾಗಿದ್ದು, ಹುಲ್ಲು ಮೇಯುತ್ತಿದ್ದ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದು ಏಳು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಗಂಗಾವತಿ ತಾಲೂಕಿನ ಹೇಮಗುಡ್ಡದ ಬಳಿ ಸಂಭವಿಸಿದೆ. ಹೇಮಗುಡ್ಡ ರಾಮಣ್ಣ ಲಿಂಗಪ್ಪ ಬಂಡಿ ಎಂಬ ಕುರಿಗಾಹಿಗೆ ಸೇರಿದ್ದ ಕುರಿಗಳು ಗ್ರಾಮದ ಸೀಮೆಯಲ್ಲಿ ಹುಲ್ಲು ಮೇಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಏಳು ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸುಮಾರು ಎಂಟಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಇದನ್ನೂ ಓದಿ:ಗಂಗಾವತಿ: ಸಿಡಿಲು ಬಡಿದು ದುರ್ಗಾದೇವಿ ದೇವಸ್ಥಾನದ ಗೋಪುರಕ್ಕೆ ಹಾನಿ - temple tower damaged