ಕರ್ನಾಟಕ

karnataka

ETV Bharat / state

Karnataka Live News: ಕರ್ನಾಟಕ Sun Oct 13 2024 ಇತ್ತೀಚಿನ ವರದಿ - KARNATAKA NEWS TODAY SUN OCT 13 2024

Etv Bharat
Etv Bharat (Etv Bharat)

By Karnataka Live News Desk

Published : Oct 13, 2024, 7:15 AM IST

Updated : Oct 13, 2024, 10:51 PM IST

10:48 PM, 13 Oct 2024 (IST)

ಕಿತ್ತೂರು ವಿಜಯೋತ್ಸವಕ್ಕೆ ಕಾರಣಿಕರ್ತ ಅಮಟೂರ ಬಾಳಪ್ಪ: ಮೈನವಿರೇಳಿಸುತ್ತೆ ಈ ವೀರಕೇಸರಿಯ ಕಥೆ

ಕಿತ್ತೂರು ವಿಜಯೋತ್ಸವದ ಪ್ರಮುಖ ರೂವಾರಿ ಅಮಟೂರ ಬಾಳಪ್ಪ. ವಿಪರ್ಯಾಸ ಎಂದರೆ ಬಾಳಪ್ಪನಿಗೆ ಸಿಗಬೇಕಾದ ಸೂಕ್ತ ಗೌರವ ಮತ್ತು ಪ್ರಚಾರ ಸಿಕ್ಕಿಲ್ಲ. ಈ ಕುರಿತ ವರದಿ ಇಲ್ಲಿದೆ. | Read More

ETV Bharat Live Updates - VEERAKESARI AMATURU BALAPPA

10:37 PM, 13 Oct 2024 (IST)

ಮಂಗಳೂರು ದಸರಾ ಸಂಪನ್ನ; ಅದ್ಧೂರಿಯಾಗಿ ನಡೆದ ಶ್ರೀ ಶಾರದೆ, ನವದುರ್ಗೆಯರ ಮೆರವಣಿಗೆ

ಮಂಗಳೂರು ದಸರಾ ಹಿನ್ನೆಲೆ ಭಾನುವಾರ ಶ್ರೀ ಶಾರದೆ ಹಾಗೂ ನವದುರ್ಗೆಯರ ಮೆರವಣಿಗೆ ವೈಭವಯುತವಾಗಿ ಜರುಗಿತು. | Read More

ETV Bharat Live Updates - DASARA

09:07 PM, 13 Oct 2024 (IST)

ಮೈಸೂರು : ಮಳೆಗೆ ಮನೆ ಗೋಡೆ ಕುಸಿತ, ಕೂದಲೆಳೆ ಅಂತರದಲ್ಲಿ ಉಳಿಯಿತು 7 ಜನರ ಜೀವ

ಜಿಟಿ ಜಿಟಿ ಮಳೆಗೆ ಮಣ್ಣಿನ ಗೋಡೆಯ ಮನೆ ಕುಸಿದುಬಿದ್ದು, ಕೂದಲೆಳೆಯ ಅಂತರದಲ್ಲಿ ಬರೋಬ್ಬರಿ 7 ಜನರು ಬದುಕುಳಿದಿರುವ ಘಟನೆ ಮೈಸೂರಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. | Read More

ETV Bharat Live Updates - HOUSE COLLAPSE

08:33 PM, 13 Oct 2024 (IST)

ತುಂಗಾಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿ; ಹಾವೇರಿ ರೈತರ ಕಣ್ಣೀರು

ಹಾವೇರಿ ಸಮೀಪದ ಕನಕಾಪುರ ಗ್ರಾಮದ ಬಳಿಯ ತುಂಗಾಮೇಲ್ಡಂಡೆ ಯೋಜನೆಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಸಾವಿರಾರು ಎಕರೆ ಜಮೀನಿಗೆ ನುಗ್ಗಿದೆ. ಇದರಿಂದ ಬೆಳೆಗಳೆಲ್ಲಾ ನೀರಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. | Read More

ETV Bharat Live Updates - TUNGA UPPER PROJECT CANAL

08:22 PM, 13 Oct 2024 (IST)

ಭವಾನಿ ರೇವಣ್ಣ ಜಾಮೀನು ರದ್ದು ಕೋರಿದ ಎಸ್​ಐಟಿ; ಸುಪ್ರೀಂನಲ್ಲಿ ಸೋಮವಾರ ಅರ್ಜಿ ವಿಚಾರಣೆ

ಭವಾನಿ ರೇವಣ್ಣ ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ನಡೆಯಲಿದೆ. | Read More

ETV Bharat Live Updates - SUPREME COURT

08:01 PM, 13 Oct 2024 (IST)

ಜನರ ಆಶೀರ್ವಾದ ಇರೋವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ: ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

ಜನರ ಅಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ. ನಾವು ನಿಮ್ಮೊಂದಿಗೆ (ಜನರೊಂದಿಗೆ) ಇರ್ತೇವೆ, ನೀವು ನಮ್ಮೊಂದಿಗಿರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. | Read More

ETV Bharat Live Updates - SAVADATTI YALLAMMA DEVI

07:45 PM, 13 Oct 2024 (IST)

ಆನೆಗಳು ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿವೆ, ಅಭಿಮನ್ಯು ಇಸ್ ದ ಬೆಸ್ಟ್: ಡಿಸಿಎಫ್​ ಪ್ರಭುಗೌಡ

ಜಂಬೂಸವಾರಿಯಲ್ಲಿ ಕ್ಯಾಪ್ಟನ್​ ಅಭಿಮನ್ಯು, ಲಕ್ಷ್ಮೀ ಮತ್ತು ಹಿರಣ್ಯ ಸೇರಿದಂತೆ ಎಲ್ಲಾ ಆನೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ ಎಂದು ಡಿಸಿಎಫ್ ಪ್ರಭುಗೌಡ ಶ್ಲಾಘಿಸಿದರು. | Read More

ETV Bharat Live Updates - DASARA ELEPHANTS

07:02 PM, 13 Oct 2024 (IST)

ಕೇಸ್​ಗಳನ್ನು ವಾಪಸ್ ಪಡೆಯಬೇಕಾದ್ರೆ ಡೆಪ್ತ್ ಏನಿದೆ ಅಂತಾ ನೋಡಬೇಕು : ಹೆಚ್ ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿ ಪ್ರಕರಣದ ಕೇಸ್​ಗಳನ್ನ ಹಿಂಪಡೆಯುವ ಸರ್ಕಾರದ ನಿರ್ಧಾರದ ಕುರಿತು ಮಾತನಾಡಿದರು. ಕೇಸ್​ಗಳನ್ನ ವಾಪಸ್ ಪಡೆಯಬೇಕಾದ್ರೆ ಡೆಪ್ತ್​ ಏನಿದೆ ಅಂತಾ ನೋಡಬೇಕು ಎಂದಿದ್ದಾರೆ. | Read More

ETV Bharat Live Updates - HUBBALLI RIOT CASE

06:47 PM, 13 Oct 2024 (IST)

ಮಂಡ್ಯ: ವಿವಾಹೇತರ ಸಂಬಂಧ ಆರೋಪ, ಯುವಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ವ್ಯಕ್ತಿ

ತನ್ನ ಪತ್ನಿ‌ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಯುವಕನ ಮೇಲೆ ಗುಂಡು‌ ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ. | Read More

ETV Bharat Live Updates - SHOOT OUT ON YOUNG MAN

06:39 PM, 13 Oct 2024 (IST)

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ: ರಾಜ್ಯದ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಮತ್ತು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಣಾಮ ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. | Read More

ETV Bharat Live Updates - BENGALURU

05:37 PM, 13 Oct 2024 (IST)

ಯಶಸ್ವಿಯಾಗಿ ಜಂಬೂಸವಾರಿ ಹೊತ್ತ AK47 ಖ್ಯಾತಿಯ ಅಭಿಮನ್ಯು; ಮಾವುತನ ವಿಶೇಷ ಸಂದರ್ಶನ

AK47 ಖ್ಯಾತಿಯ ಅಭಿಮನ್ಯು ಆನೆಯ ಬಗ್ಗೆ ಹಾಗೂ ಜಂಬೂಸವಾರಿ ಪೂರೈಸಿದ ಅನುಭವದ ಬಗ್ಗೆ ಮಾವುತ ವಸಂತ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. | Read More

ETV Bharat Live Updates - ABHIMANYU ELEPHANT

04:33 PM, 13 Oct 2024 (IST)

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ; ಅರವಿಂದ ಬೆಲ್ಲದ್, ಅಮೃತ ದೇಸಾಯಿ ಪೊಲೀಸರ ವಶಕ್ಕೆ

ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಸಿಎಂ ಸಿದ್ದರಾಮಯ್ಯರಿಗೆ ಘೇರಾವ್ ಹಾಕಲು ಬಿಜೆಪಿ ಪ್ಲಾನ್ ಮಾಡಿಕೊಂಡಿತ್ತು. ಹೀಗಾಗಿ 30 ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. | Read More

ETV Bharat Live Updates - ARVIND BELLAD

04:10 PM, 13 Oct 2024 (IST)

ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ

ಸವದತ್ತಿ ಯಲ್ಲಮ್ಮ ದೇವಿನ ದರ್ಶನ ಪಡೆದು ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು, ಶಾಸಕರು ಸಾಥ್ ನೀಡಿದರು. | Read More

ETV Bharat Live Updates - SAVADATTI YALLAMMA

03:47 PM, 13 Oct 2024 (IST)

ರಾಯಚೂರು: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವು

ರಾಯಚೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. | Read More

ETV Bharat Live Updates - RAICHURU

03:28 PM, 13 Oct 2024 (IST)

ಪ್ರಲ್ಹಾದ್​ ಜೋಶಿ ನಿಜವಾದ ಭಯೋತ್ಪಾದಕ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಎಲ್ಲಾ ಸುಳ್ಳು ವಿಚಾರಗಳ ಮೇಲೆಯೇ ಪ್ರತಿಭಟನೆ ಮಾಡುವುದು. ಅವರು ಸಹ ಅನೇಕ ಕೇಸ್‌ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. | Read More

ETV Bharat Live Updates - PRALHAD JOSHI

03:13 PM, 13 Oct 2024 (IST)

ಅಂಬಾರಿ ಕೊಡುವುದು ತಡವಾಯಿತು ಎಂಬ ವಿಚಾರಕ್ಕೆ ಸ್ವತಃ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ದಸರಾ ಅಂಬಾರಿಯನ್ನು ತಡವಾಗಿ ಹಸ್ತಾಂತರಿಸಲಾಯಿತು ಎಂಬ ವಿಷಯದ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates - PRAMODA DEVI WADIYAR LETTER

02:10 PM, 13 Oct 2024 (IST)

5 ಎಕರೆ ಸಿಎ ನಿವೇಶನ KIADBಗೆ ಹಿಂದಿರುಗಿಸಲು ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್ ತೀರ್ಮಾನ

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮಂಜೂರು ಮಾಡಿರುವ 5 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ವಾಪಸ್​​ ಮಾಡಲು ಸಿದ್ದಾರ್ಥ ವಿಹಾರ ಟ್ರಸ್ಟ್‌ ಮುಂದಾಗಿದೆ. ನಿಯಮ‌ ಉಲ್ಲಂಘಿಸಿ ನಿವೇಶನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.‌ | Read More

ETV Bharat Live Updates - KIADB

01:26 PM, 13 Oct 2024 (IST)

ಹುಬ್ಬಳ್ಳಿ ‌ಗಲಭೆ ಕೇಸ್​ ವಾಪಸ್​ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ

ಹಳೇ ಹುಬ್ಬಳ್ಳಿ ‌ಗಲಭೆ ಪ್ರಕರಣ ಹಿಂಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. | Read More

ETV Bharat Live Updates - PROTEST AGAINST GOVERNMENT

01:16 PM, 13 Oct 2024 (IST)

ಧಾರವಾಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಸೇತುವೆ: ಹಗ್ಗವೇ ಜನರಿಗಿಲ್ಲಿ ಆಸರೆ

ಧಾರವಾಡದಲ್ಲಿ ಭಾರಿ ಮಳೆಯಿಂದಾಗಿ ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದ ಸೇತುವೆಯಂದು ಕೊಚ್ಚಿ ಹೋಗಿದೆ. | Read More

ETV Bharat Live Updates - DHARWAD RAIN

12:57 PM, 13 Oct 2024 (IST)

'ಸತೀಶ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ': ಬೆಳಗಾವಿಯಲ್ಲಿ ಕರವೇ ಬ್ಯಾನರ್

ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ ಎಂದು ಬರೆಯಲಾದ ಹೋರ್ಡಿಂಗ್ಸ್ ಅಳವಡಿಸಲಾಗಿದೆ. | Read More

ETV Bharat Live Updates - FUTURE CHIEF MINISTER

12:40 PM, 13 Oct 2024 (IST)

ಬೆಂಗಳೂರು: ನಿಲ್ಲಿಸಿದ್ದ ಸ್ಕೂಟರ್‌ಗೆ ಟಚ್ ಆಗಿ ಬಿದ್ದ ಬಾಲಕ, ಗೂಡ್ಸ್​ ವಾಹನದ ಚಕ್ರಕ್ಕೆ ಸಿಲುಕಿ ಸಾವು

ಬಾಲಕನೋರ್ವ ಆಕಸ್ಮಿಕವಾಗಿ ಗೂಡ್ಸ್​​ ವಾಹನದ ಕೆಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ. | Read More

ETV Bharat Live Updates - BOY DEATH

12:29 PM, 13 Oct 2024 (IST)

'ಬಿಜೆಪಿಯವರು ಆರ್​ಎಸ್​ಎಸ್ ಮೇಲಿನ​ ಕೇಸ್​ ವಾಪಸ್​ ಪಡೆದಿದ್ದರಲ್ಲವೇ?': ಸಿಎಂ ಸಿದ್ದರಾಮಯ್ಯ

ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಅದು ಇನ್ನೂ ಕೋರ್ಟ್​ನಲ್ಲಿ ತೀರ್ಮಾನವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. | Read More

ETV Bharat Live Updates - HUBBALLI RIOT CASE

12:10 PM, 13 Oct 2024 (IST)

ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ

ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಶಿವಮೊಗ್ಗದಿಂದ ಅಭಿಮಾನಿಯೋರ್ವ ಗೊಂಬೆ ವೇಷ ತೊಟ್ಟು ಬಂದಿದ್ದಾನೆ. | Read More

ETV Bharat Live Updates - BALLARI JAIL

11:57 AM, 13 Oct 2024 (IST)

ಬಾಬಾ ಸಿದ್ದಿಕಿ ಕೊಲೆ: 'ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ'- ಡಿ.ಕೆ.ಶಿವಕುಮಾರ್

ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಮುಖಂಡ ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. | Read More

ETV Bharat Live Updates - BABA SIDDIQUE MURDER

11:00 AM, 13 Oct 2024 (IST)

ವಿಜಯನಗರ: ಬೆಲ್ಲದ ಬಂಡಿ ಉತ್ಸವದಲ್ಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ, ಇಬ್ಬರಿಗೆ ಗಾಯ

ವಿಜಯದಶಮಿ ಹಬ್ಬದ ಪ್ರಯುಕ್ತ ವಿಜಯನಗರ ಜಿಲ್ಲೆಯಲ್ಲಿ ಶನಿವಾರ ನಡೆದ ಎತ್ತಿನ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಇಬ್ಬರು ಗಾಯಗೊಂಡರು. | Read More

ETV Bharat Live Updates - VIJAYANAGARA

10:49 AM, 13 Oct 2024 (IST)

ಉತ್ತರ ಕನ್ನಡದಲ್ಲಿ ಮತ್ತೆ ಮರಳುಗಾರಿಕೆ ಬಂದ್​​: ಮನೆ, ಕಟ್ಟಡ ನಿರ್ಮಾಣಕ್ಕೆ ಸಂಕಷ್ಟ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ವ್ಯಕ್ತಿಯೋರ್ವರು ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ಸಿಗದೆ, ಜನರು ಪರದಾಡುವಂತಾಗಿದೆ. ಕಟ್ಟಡ ಸೇರಿದಂತೆ ಸಣ್ಣಪುಟ್ಟ ಮನೆ ಕಟ್ಟುವವರೂ ಮರಳಿಲ್ಲದೇ ತೊಂದರೆಗೀಡಾಗಿದ್ದಾರೆ. | Read More

ETV Bharat Live Updates - UTTARA KANNADA

10:01 AM, 13 Oct 2024 (IST)

ರೋಹಿತ್​​, ವರಲಕ್ಷ್ಮಿ, ದೊಡ್ಡ ಹರವೆ ಲಕ್ಷ್ಮಿ ಆನೆಗಳಿಗೆ ಸಿಗಲಿಲ್ಲ ಜಂಬೂಸವಾರಿಯಲ್ಲಿ ಅವಕಾಶ

ರೋಹಿತ್​, ವರಲಕ್ಷ್ಮಿ, ದೊಡ್ಡ ಹರವೆ ಲಕ್ಷ್ಮಿ ಆನೆಗೆ ಕೆಲವು ಕಾರಣಗಳಿಂದ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. | Read More

ETV Bharat Live Updates - JAMBOO SAVARI

09:18 AM, 13 Oct 2024 (IST)

ಹಾವೇರಿ: ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ; ಪ್ರಸಾದ ಸ್ವೀಕರಿಸಿದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು

ಹಾವೇರಿಯ ಶಾಂತೇಶ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರ ಕುಟುಂಬದವರು ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದ ಮಹಿಳೆಯರಿಗೆ ಸಂತಾನ ಔಷಧಿ ನೀಡುತ್ತಾ ಬಂದಿದ್ದಾರೆ. ಇಲ್ಲಿಯ ಪ್ರಸಾದ ಸೇವಿಸಿದ ಬಳಿಕ ನಮಗೆ ಮಕ್ಕಳಾಗಿವೆ ಎಂದು ಮಹಿಳೆಯರು ತಿಳಿಸಿದ್ದಾರೆ. | Read More

ETV Bharat Live Updates - HAVERI SHANTESHA TEMPLE

07:19 AM, 13 Oct 2024 (IST)

ಮಂಗಳೂರು: ಹುಲಿವೇಷ ಊದುಪೂಜೆಯಲ್ಲಿ ಸಂಜಯ್ ದತ್, 'ಪಿಲಿನಲಿಕೆ'ಯಲ್ಲಿ ಕ್ರಿಕೆಟಿಗ ಶಿವಂ ದುಬೆ ಭಾಗಿ

ಮಂಗಳೂರಿನಲ್ಲಿ ಶನಿವಾರ ಹುಲಿವೇಷ ಕುಣಿತ ಹಾಗೂ ಹುಲಿವೇಷ ಸ್ಪರ್ಧೆಗಳು ನಡೆದವು. ಬಾಲಿವುಡ್​ ನಟ ಸಂಜಯ್​ ದತ್​ ಹಾಗೂ ಕ್ರಿಕೆಟಿಗ ಶಿವಂ ದುಬೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. | Read More

ETV Bharat Live Updates - MANGALURU

07:11 AM, 13 Oct 2024 (IST)

ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ

ಮೈಸೂರು ದಸರಾ ಯಶಸ್ಸಿನಲ್ಲಿ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. | Read More

ETV Bharat Live Updates - MYSURU DASARA

07:05 AM, 13 Oct 2024 (IST)

ಮೈಸೂರು ದಸರಾ: ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್​​

ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ಪಂಚಿನ ಕವಾಯತು ಕಾರ್ಯಕ್ರಮದ ಮೂಲಕ ಶನಿವಾರ ರಾತ್ರಿ ತೆರೆಬಿತ್ತು. ಪುರಾತನ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ಚಿತ್ತಾರ ಮೂಡಿಸಿದ 1,500 ಡ್ರೋನ್‌ಗಳನ್ನು ಕಂಡು ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಂಡರು. | Read More

ETV Bharat Live Updates - THRILLING BIKE STUNTS
Last Updated : Oct 13, 2024, 10:51 PM IST

ABOUT THE AUTHOR

...view details