ETV Bharat / state

Live Updates: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್, ​ಮಹಾರಾಷ್ಟ್ರದಲ್ಲಿ ಮಹಾಯುತಿ, ಜಾರ್ಖಂಡ್​ನಲ್ಲಿ ಜೆಎಂಎಂಗೆ ಗೆಲುವು

Karnataka By-Election Results 2024 Live: Channapatna, Sandur, Shiggaon by-election results
ಉಪಚುನಾವಣೆ ಫಲಿತಾಂಶ (ETV Bharat)
author img

By ETV Bharat Karnataka Team

Published : Nov 23, 2024, 7:12 AM IST

Updated : Nov 23, 2024, 8:17 AM IST

ಎನ್​ಡಿಎ ಹಾಗೂ ಇಂಡಿ ಮೈತ್ರಿಕೂಟಗಳ ನಡುವಿನ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಭಾಗಶಃ ಪೂರ್ಣಗೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದರೆ, ಜಾರ್ಖಂಡ್​ನಲ್ಲಿ ಆಡಳಿತಾರೂಢ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಗೆಲುವು ಕಂಡಿದೆ.

ಜೊತೆಗೆ ಕರ್ನಾಟಕದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕೂಡ ಮುಗಿದ್ದಿದ್ದು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಗೆಲುವಿನ ನಗೆ ಬೀರಿದೆ. ಬೆಳಗ್ಗೆ 8ಗಂಟೆಯಿಂದ ಆರಂಭಗೊಂಡ ಮತ ಎಣಿಕೆ, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಚಿತ್ರಣ ಹೊರಬಿದ್ದಿತು.

ಮಹಾರಾಷ್ಟ್ರದ 288, ಜಾರ್ಖಂಡ್​​ ರಾಜ್ಯದ 81 ವಿಧಾನಸಭೆ ಕ್ಷೇತ್ರಗಳು ಜೊತೆಗೆ ಕರ್ನಾಟಕದ 3 ವಿಧಾನಸಭಾ ಕ್ಷೇತ್ರ ಹಾಗೂ ಕೇರಳದ ವಯನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವೂ ಕೂಡ ಪ್ರಕಟಕೊಂಡಿದೆ. ಯಾರಿಗೆ ವಿಜಯಮಾಲೆ, ಯಾರಿಗೆ ಸೋಲು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

LIVE FEED

1:07 PM, 23 Nov 2024 (IST)

ರಾಜ್ಯದಲ್ಲಿ ಕೈ ಗ್ಯಾರಂಟಿ ಗೆಲುವು

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮತದಾನೋತ್ತರ ಸಮೀಕ್ಷೆಗಳನ್ನು ಹುಸಿಯಾಗಿಸುವಂತ ರಿಸಲ್ಟ್​​ ಬಂದಿದೆ. ಮತದಾರರು ಕಾಂಗ್ರೆಸ್​ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್​ ಬೊಮ್ಮಾಯಿಯನ್ನು ಸೋಲಿಸಿ ಕಾಂಗ್ರೆಸ್​ ಅಭ್ಯರ್ಥಿ ಯಾಸಿರ್​ ಖಾನ್​ ಪಠಾಣ್​ ಜಯಭೇರಿ ಸಾಧಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಸೈನಿಕನಿಗೆ ಮಣೆ ಹಾಕಿರುವ ಮತದಾರರು, ನಿಖಿಲ್​ ಕುಮಾರಸ್ವಾಮಿಯನ್ನು ಸೋಲಿಸಿದ್ದಾರೆ. ಮತ್ತೊಂದೆಡೆ ಸಂಡೂರು ಕ್ಷೇತ್ರದಲ್ಲಿ ಅನ್ನಪೂರ್ಣ ತುಕಾರಾಂಗ ಗೆಲುವಿನ ನಗೆ ಬೀರಿದ್ದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಸ್ವತಃ ಸೋಲಿನ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಗ್ಯಾರಂಟಿ ಕೈ ಹಿಡಿದಿದೆ.

11:54 AM, 23 Nov 2024 (IST)

ಕರ್ನಾಟಕ ಉಪಚುನಾವಣೆ: ಮೂರರಲ್ಲೂ ಭರ್ಜರಿ ಜಯದತ್ತ ಕಾಂಗ್ರೆಸ್

ಶಿಗ್ಗಾಂವಿಯಲ್ಲಿ 16ನೇ ಸುತ್ತಿನಲ್ಲಿ ಕಾಂಗ್ರೆಸ್ 13448 ಮುನ್ನಡೆ ಸಾಧಿಸಿದ್ದು, ಬಹುತೇಕ ಗೆಲುವು ಖಚಿತವಾದಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ 93,234 ಮತ ಪಡೆದರೆ, ಬಿಜೆಪಿಯ ಭರತ್ ಬೊಮ್ಮಾಯಿಗೆ 79,756 ಮತಗಳು ಬಂದಿವೆ.

ಚನ್ನಪಟ್ಟಣದಲ್ಲಿ 19ನೇ ಸುತ್ತಿನ ಮತ ಎಣಿಕೆ ಮುಗಿದಿದೆ. ಜೆಡಿಎಸ್ 82809 ಮತ, ಕಾಂಗ್ರೆಸ್ 109580 ಮತ ಪಡೆದಿದೆ. ಸಿ.ಪಿ.ಯೋಗೇಶ್ವರ್ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ.

ಸಂಡೂರಿನಲ್ಲಿ ಅಂತಿಮ ಹಂತದ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ 93,606 ಮತ್ತು ಬಿಜೆಪಿ 83961 ಮತ ಪಡೆದಿದೆ. ಅನ್ನಪೂರ್ಣ ತುಕಾರಾಂ 9645 ಮುನ್ನಡೆ ಪಡೆದಿದ್ದಾರೆ. ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಈ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು ಪ್ರತಿಕ್ರಿಯೆ ನೀಡಿ, ಸೋಲಿನ ಹೊಣೆ ತಾವೇ ಹೊರುವುದಾಗಿ ಒಪ್ಪಿಕೊಂಡಿದ್ದಾರೆ.

11:02 AM, 23 Nov 2024 (IST)

ಮಹಾರಾಷ್ಟ್ರದಲ್ಲಿ ಮಹಾಯುತಿ ಭರ್ಜರಿ ಲೀಡ್​, ಜಾರ್ಖಂಡ್​ನಲ್ಲಿ ಇಂಡಿ ಕೂಟದ ಕಮಾಲ್​

ಮಹಾರಾಷ್ಟ್ರದಲ್ಲಿ ಎನ್​ಡಿಎ ಮೈತ್ರಿ-215 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿ ಕೂಟ -57 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರರು 16 ಕ್ಷೇತ್ರಗಳಲ್ಲಿ ಲೀಡ್​ ಪಡೆದಿದೆ.

10:44 AM, 23 Nov 2024 (IST)

ಮೂರು ಕ್ಷೇತ್ರಗಳಲ್ಲಿ ಕೈ ಮೇಲುಗೈ

ಮೂರು ಕ್ಷೇತ್ರಗಳಲ್ಲಿ ಕೈ ಮೇಲುಗೈ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್​​ 15,000 ಲೀಡ್ ಪಡೆದಿದ್ದಾರೆ. ಇನ್ನು ಶಿಗ್ಗಾಂವಿಯಲ್ಲಿ 11 ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಯಾಸೀರ್ ಖಾನ್ ಪಠಾಣ್ 12,793 ಮತಗಳಿಂದ ಮುನ್ನಡೆಯಲಿದ್ದಾರೆ. ಸಂಡೂರು ಕ್ಷೇತ್ರದ 14ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 6,973 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

10:19 AM, 23 Nov 2024 (IST)

ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಭರ್ಜರಿ ಮುನ್ನಡೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ ಸಿಕ್ಕಿದೆ. ಮ್ಯಾಜಿಕ್​ ನಂಬರ್​ ದಾಟಿದ್ದು, 216 ಕ್ಷೇತ್ರಗಳಲ್ಲಿ ಲೀಡ್​ ಪಡೆದಿದೆ. ಇತ್ತ ಕಾಂಗ್ರೆಸ್​ ನೇತೃತ್ವದ ಮಹಾ ವಿಕಾಸ ಅಘಾಡಿಗೆ ಭಾರಿ ಆಘಾತ ಉಂಟಾಗಿದ್ದು, ಕೇವಲ 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 12 ಕ್ಷೇತ್ರಗಳಲ್ಲಿ ಲೀಡ್​ ಪಡೆದಿದ್ದಾರೆ.

10:13 AM, 23 Nov 2024 (IST)

ಭರತ್ ಬೊಮ್ಮಾಯಿಗೆ ಹಿನ್ನಡೆ

ಮೂರು ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ: ಈವರೆಗಿನ ಎಣಿಕೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್​​ಗೆ 4742 ಮತಗಳ ಮುನ್ನಡೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 1108 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಮುನ್ನಡೆ. ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್​​ನ ಯಾಸಿರ್ ಪಠಾಣ್​​ಗೆ ಮುನ್ನಡೆ.

ಶಿಗ್ಗಾಂವಿ: 8 ನೇ ಸುತ್ತಿನ ಮತ ಎಣಿಕೆಯಲ್ಲಿ ಭರತ್ ಬೊಮ್ಮಾಯಿ 43,202 ಮತ ಪಡೆದರೆ ಯಾಸೀರ್ ಖಾನ್ ಪಠಾಣ್ 43,719 ಮತ ಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪಠಾಣ್​ 517 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

10:01 AM, 23 Nov 2024 (IST)

ಸಿಪಿವೈ ಮುನ್ನಡೆ

ಶಿಗ್ಗಾಂವಿ: 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಭರತ್ ಬೊಮ್ಮಾಯಿ - 38607, ಯಾಸೀರ್ ಖಾನ್ ಪಠಾಣ್ - 37609 ಮತ. 998 ಮತ ಮುನ್ನಡೆ ಪಡೆದ ಭರತ್ ಬೊಮ್ಮಾಯಿ.

ಸಂಡೂರು: 8ನೇ ಸುತ್ತಿನಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ 33 ಮತಗಳ ಮುನ್ನಡೆ.

ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 3663 ಮತಗಳಿಂದ ಮುನ್ನಡೆ. 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ ಆಗಿದ್ದು, ನಿಖಿಲ್ ಕುಮಾರಸ್ವಾಮಿ 33,628 ಮತ ಪಡೆದರೆ, ಸಿ ಪಿ ಯೋಗೇಶ್ವರ್ ಅವರು 37,587 ಮತ ಪಡೆದಿದ್ದಾರೆ.

9:43 AM, 23 Nov 2024 (IST)

ಮಹಾರಾಷ್ಟ್ರದಲ್ಲಿ ಎನ್​ಡಿಎ ಮೈತ್ರಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಎನ್​ಡಿಎ ಮೈತ್ರಿಕೂಟ ಮಹಾಯುತಿ 157 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್​ ನೇತೃತ್ವದ ಮಹಾ ವಿಕಾಸ ಅಘಾಡಿ ಕೂಟ 125 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜಾರ್ಖಂಡ್​ನಲ್ಲಿ ಜೆಎಂಎಂ 38 ಕ್ಷೇತ್ರ ಮತ್ತು ಬಿಜೆಪಿ 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

9:38 AM, 23 Nov 2024 (IST)

ಶಿಗ್ಗಾಂವಿಯಲ್ಲಿ ಭರತ್​ ಬೊಮ್ಮಾಯಿ ಲೀಡ್​, ಯಾಸೀರ್​ ಪಠಾಣ್​ಗೆ ಹಿನ್ನಡೆ

ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯ 5ನೇ ಸುತ್ತು ಮುಕ್ತಾಯವಾಗಿದ್ದು ಭರತ್ ಬೊಮ್ಮಾಯಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ ಇಂತಿದೆ..

  • ಭರತ್ ಬೊಮ್ಮಾಯಿ- 27432
  • ಯಾಸೀರ್ ಖಾನ್ ಪಠಾಣ್- 25597

ಭರತ್ ಬೊಮ್ಮಾಯಿಗೆ 1835 ಮತಗಳ ಮುನ್ನಡೆ

9:20 AM, 23 Nov 2024 (IST)

ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಭಾರಿ ಮುನ್ನಡೆ; ಜಾರ್ಖಂಡ್​ನಲ್ಲೂ ಬಿಜೆಪಿ ಕಮಾಲ್​

ಮಹಾರಾಷ್ಟ್ರದಲ್ಲಿ ಎನ್​ಡಿಎ ಮೈತ್ರಿಕೂಟ ಮಹಾಯುತಿ ಭರ್ಜರಿ ಮುನ್ನಡೆ ಸಾಧಿಸಿದೆ. 142 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಕಾಂಗ್ರೆಸ್​ ನೇತೃತ್ವದ ಮಹಾ ವಿಕಾಸ ಅಘಾಡಿ ಕೂಟ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 8 ಕ್ಷೇತ್ರಗಳಲ್ಲಿ ಲೀಡ್​ ಪಡೆದುಕೊಂಡಿದ್ದಾರೆ. ಜಾರ್ಖಂಡ್​ನಲ್ಲಿ ಜೆಎಂಎಂ 11 ಕ್ಷೇತ್ರ ಮತ್ತು ಬಿಜೆಪಿ-12 ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

9:02 AM, 23 Nov 2024 (IST)

ಚನ್ನಪಟ್ಟಣದಲ್ಲಿ ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಮುನ್ನಡೆ

ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣ ಉಪಚುನಾವಣೆಯ ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್​ ಕುಮಾರಸ್ವಾಮಿ 128 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಂಡೂರ್​ನಲ್ಲಿ ಆರಂಭದಿಂದಲೂ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮುನ್ನಡೆಯಲ್ಲಿದ್ದಾರೆ. ಮತ್ತೊಂದೆಡೆ ಭರತ್​ ಬೊಮ್ಮಾಯಿ ಲೀಡ್​ನಲ್ಲಿದ್ದಾರೆ.

8:55 AM, 23 Nov 2024 (IST)

ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿಗೆ ಮುನ್ನಡೆ

ಈ ಹಿಂದೆ ಸಹೋದರ ರಾಹುಲ್​ ಗಾಂಧಿ ಅವರ ಕ್ಷೇತ್ರವಾಗಿದ್ದ ವಯನಾಡು ಲೋಕಸಭಾ ಅಖಾಡದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾರಿ ಮುನ್ನಡೆ ಸಾಧಿಸಿದ್ದಾರೆ. ಅಲ್ಪಸಂಖ್ಯಾತ ಮತಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಿಪಿಎಂ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಿನ್ನಡೆ ಅನುಭವಿಸಿದ್ದಾರೆ.

8:47 AM, 23 Nov 2024 (IST)

ಮಹಾರಾಷ್ಟ್ರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಮುನ್ನಡೆ

ಮಹಾರಾಷ್ಟ್ರದ ಮಹಾಕದನದಲ್ಲಿ ಮಹಾಯುತಿ 52 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿ ಕೂಟ 21 ಕ್ಷೇತ್ರಗಳಲ್ಲಿ ಲೀಡ್​ನಲ್ಲಿದೆ. ಜಾರ್ಖಂರ್ಡ್​ನಲ್ಲಿ ಜೆಎಂಎಂ 3 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

8:39 AM, 23 Nov 2024 (IST)

ಚನ್ನಪಟ್ಟಣದಲ್ಲಿ ಯೋಗೇಶ್ವರ್​ಗೆ ಮುನ್ನಡೆ, ಶಿಗ್ಗಾಂವಿಯಲ್ಲಿ ಭರತ್​ ಬೊಮ್ಮಾಯಿಗೆ ಲೀಡ್​

ಉಪಚುನಾವಣೆಯ ಫಲಿತಾಂಶದ ಮೊದಲ ಸುತ್ತಿನಲ್ಲಿ ಚನ್ನಪಟ್ಟಣದ ಕಾಂಗ್ರೆಸ್​ ಅಭ್ಯರ್ಥಿ ಸಿ‌ ಪಿ ಯೋಗೇಶ್ವರ್ 358 ಮತಗಳ ಮುನ್ನಡೆ ಸಾಧಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 324 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಂಡೂರ್​ನಲ್ಲಿ ಅನ್ನಪೂರ್ಣ ಮುನ್ನಡೆಯಲ್ಲಿದ್ದಾರೆ.

8:36 AM, 23 Nov 2024 (IST)

ಕಾಂಗ್ರೆಸ್ ಮುನ್ನಡೆ

ಸಂಡೂರು ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 2586 ಮತಗಳ ಮುನ್ನಡೆ

ಕಾಂಗ್ರೆಸ್ - 6959

ಬಿಜೆಪಿ - 4373

8:12 AM, 23 Nov 2024 (IST)

ಮತ ಎಣಿಕೆ ಆರಂಭ

ಹಾವೇರಿ, ರಾಮನಗರ ಮತ್ತು ಬಳ್ಳಾರಿಯಲ್ಲಿ ಮತ ಎಣಿಕೆ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮೊದಲಿಗೆ ಅಂಚೆ ಮತ ಎಣಿಕೆ ಮಾಡಲಾಗಿದೆ. ಚನ್ನಪಟ್ಟಣ ಕ್ಷೇತ್ರದ ಅಂಚೆ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.

ಸಂಡೂರು ಕ್ಷೇತ್ರದ ಅಂಚೆ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ ಸಾಧಿಸಿದ್ದಾರೆ.

7:24 AM, 23 Nov 2024 (IST)

ಸ್ಟ್ರಾಂಗ್ ರೂಂ ಓಪನ್

ಹಾವೇರಿಯ ದೇವಗಿರಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ್ ಆಗಮನ. ಬೆ. 7.30 ಕ್ಕೆ ಮೂರು ಕ್ಷೇತ್ರಗಳಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದ್ದು, ಅಂಚೆ ಮತಗಳ ಎಣಿಕೆ ಆರಂಭವಾಗಿದೆ. 8 ಗಂಟೆಯಿಂದ ಇವಿಎಂ ಮತ ಎಣಿಕೆ ಶುರು.

ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಕೇಂದ್ರದ ಬಳಿ ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಆಗಮನ. ಸಂಡೂರು ಕ್ಷೇತ್ರದಲ್ಲಿ ಜನರು ಈ ಬಾರಿ ಬದಲಾವಣೆ ಬಯಸಿದ್ದು, ಬಿಜೆಪಿ ಗೆಲ್ಲಲಿದೆ. 14 ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಜಿಲ್ಲೆಗೆ ಬಂದಿರುವುದು ಪಕ್ಷಕ್ಕೆ ಅನುಕೂಲ ಆಗಿದೆ. ಜೊತೆಗೆ ಎಲ್ಲ ನಾಯಕರ ಒಗ್ಗಟ್ಟಿನ ಪ್ರಚಾರದಿಂದ ಪಕ್ಷ ಭರ್ಜರಿ ಜಯ ಸಾಧಿಸಲಿದೆ ಎಂದು ಬಂಗಾರು ಹನುಮಂತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟು 14 ಟೇಬಲ್​ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

Last Updated : Nov 23, 2024, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.