ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೈಜ ವರದಿ ಸಂಗ್ರಹಿಸಲು ಬಿಜೆಪಿ ಮೂರು ತಂಡಗಳನ್ನ ರಚನೆ ಮಾಡಿದೆ. | Read More
Breaking News Karnataka Live: Sat Fri Nov 15 2024 ಕರ್ನಾಟಕ ಇತ್ತೀಚಿನ ವರದಿ - KARNATAKA NEWS TODAY FRI NOV 15 2024
Published : Nov 15, 2024, 8:10 AM IST
|Updated : Nov 15, 2024, 10:36 PM IST
ವಕ್ಫ್ ಆಸ್ತಿ ವಿವಾದ: ನೈಜ ವರದಿ ಸಂಗ್ರಹಕ್ಕೆ ಬಿಜೆಪಿಯಿಂದ ಮೂರು ತಂಡಗಳ ರಚನೆ
ಕೃಷಿ ಮೇಳ 2024: ನೆಲಗಡಲೆ ಬಿತ್ತನೆಗೆ ಬಂತು 'ಕೃಷಿಬಾಟ್' ಯಂತ್ರ; ಏನಿದರ ವಿಶೇಷ?
ಕುಳಿತಲ್ಲಿಂದಲೇ ಕಡಲೆಬೀಜ ಬಿತ್ತನೆ ಮಾಡಬಹುದು. ಕೂಲಿಕಾರರ ಅಗತ್ಯವಿಲ್ಲ, ಶ್ರಮ ಪಡಬೇಕಿಲ್ಲ. ಅಂತಹ ವಿಶಿಷ್ಟ ರೀತಿಯ ಕಡಲೆಕಾಯಿ ಬಿತ್ತನೆ ಬೀಜ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಈ ಯಂತ್ರದ ವೈಶಿಷ್ಟ್ಯತೆ ಕುರಿತ ಮಾಹಿತಿ ಇಲ್ಲಿದೆ. | Read More
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಸಾವು: ತನಿಖಾ ತಂಡ ರಚಿಸಿದ ಸರ್ಕಾರ, ಶಾಸಕರು ಹೇಳಿದ್ದಿಷ್ಟು!
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ ಮೂವರು ಬಾಣಂತಿಯರು ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ತನಿಖಾ ತಂಡ ರಚಿಸಿದೆ. | Read More
ನನ್ನನ್ನು ಮುಟ್ಟಿದರೆ ಸಮ್ಮನೆ ಇರಲ್ಲ ಎಂಬ ಸಿಎಂ ಹೇಳಿಕೆ ನಮಗಲ್ಲ, ಡಿಕೆಶಿಗೆ ಹೇಳಿರುವುದು ಎಂದ ಯತ್ನಾಳ್
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಬಂದವರು ಯಾರು ಎಂಬ ವಿಚಾರದಲ್ಲಿ ದಾಖಲೆ ಕೊಟ್ಟು ಮಾತನಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. | Read More
ಹೊಲದಲ್ಲಿ ಚಿನ್ನದ ಬಿಸ್ಕತ್ ಸಿಕ್ಕಿದೆ ಎಂದು ನಂಬಿಸಿ ಕೂಲಿ ಕಾರ್ಮಿಕನಿಗೆ ₹4 ಲಕ್ಷ ವಂಚನೆ
ನಕಲಿ ಚಿನ್ನ ಕೊಟ್ಟು, 4 ಲಕ್ಷ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | Read More
ಕೃಷಿ ಮೇಳ 2024 : ಜನರ ಗಮನ ಸೆಳೆಯುತ್ತಿರುವ ಬಣ್ಣದ ಬ್ರಾಯ್ಲರ್ ಕೋಳಿಗಳು; ಏನಿದರ ವಿಶೇಷತೆಗಳು?
ಜಿಕೆವಿಕೆ ಕೃಷಿ ಮೇಳದಲ್ಲಿ ಬಣ್ಣದ ಬ್ರಾಯ್ಲರ್ (Broiler -ಮಾಂಸದ ಕೋಳಿ) ಕೋಳಿಗಳು ಜನರ ಗಮನ ಸೆಳೆದಿವೆ. | Read More
ಬಳ್ಳಾರಿ ವಿಮ್ಸ್ನಲ್ಲಿ ಬಾಣಂತಿಯರು ಸಾವು: ತನಿಖಾ ತಂಡ ರಚಿಸಿದ ಸರ್ಕಾರ
ಬಳ್ಳಾರಿ ವಿಮ್ಸ್ನಲ್ಲಿ ಎರಡು ದಿನಗಳಲ್ಲಿ ಮೂವರು ಬಾಣಂತಿಯರು ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ತನಿಖಾ ತಂಡ ರಚಿಸಿದೆ. | Read More
ನಾಳೆ ಕೆಎಲ್ಇ ತಾಂತ್ರಿಕ ವಿವಿ ಘಟಿಕೋತ್ಸವ: ಮುರಗೇಶ ನಿರಾಣಿ ಹಾಗೂ ಅರವಿಂದ ಮೆಳ್ಳಿಗೇರಿಗೆ ಗೌರವ ಡಾಕ್ಟರೇಟ್
ನಾಳೆ ನಡೆಯುವ 6ನೇ ಘಟಿಕೋತ್ಸವದಲ್ಲಿ 1,677 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ನೀಡಲಾಗುತ್ತಿದೆ. | Read More
ಮುಸ್ಲಿಂ ದಂಪತಿಗೆ ವಕ್ಫ್ ಬೋರ್ಡ್ನಿಂದ ವಿವಾಹ ನೋಂದಣಿ ಪತ್ರ: ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮುಸ್ಲಿಂ ದಂಪತಿಗೆ ವಕ್ಫ್ ಬೋರ್ಡ್ನಿಂದ ವಿವಾಹ ನೋಂದಣಿ ಪತ್ರ ವಿತರಣೆ ಆದೇಶ ಸಂಬಂಧ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. | Read More
ಸಾರಿಗೆ ಸಂಸ್ಥೆಯಿಂದ 9 ಸಾವಿರ ಸಿಬ್ಬಂದಿ ನೇಮಕ: ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಿಬ್ಬಂದಿ ನೇಮಕಾತಿ ಕುರಿತು ಮಾತನಾಡಿದ್ದಾರೆ. 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. | Read More
ಭಾರತೀಯರು ಲಿಬಿಯಾಗೆ ತೆರಳಲು ನಿರ್ಬಂಧ ಸಡಿಲಿಕೆ: ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ
ರಾಜ್ಯದ ಮನವಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರಯಾಣ ನಿರ್ಬಂಧವನ್ನು ಅಲ್ಪ ಪ್ರಮಾಣದಲ್ಲಿ ಸಡಿಲಗೊಳಿಸಿದ್ದಲ್ಲದೇ ಲಿಬಿಯಾಗೆ ತೆರಳುವ ಭಾರತೀಯರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದಲ್ಲಿರುವಂತೆ ಆದೇಶಿಸಿದೆ. | Read More
ಕೃಷಿಮೇಳದಲ್ಲಿ ಗಮನಸೆಳೆದ ಕಾಲಿನಿಂದ ತೆಂಗಿನಕಾಯಿ ಸುಲಿಯುವ ಯಂತ್ರ
ಬೆಂಗಳೂರಿನ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕಾಲಿನಿಂದ ತೆಂಗಿನಕಾಯಿ ಸುಲಿಯುವ ಯಂತ್ರ ಜನರ ಗಮನ ಸೆಳೆಯುತ್ತಿದೆ. | Read More
ಕೇಂದ್ರ ಸರ್ಕಾರದ ಸೇವೆಗೆ ಐಎಎಸ್ ಅಧಿಕಾರಿ ಸಿ.ಶಿಖಾ
ಐಎಎಸ್ ಅಧಿಕಾರಿ ಸಿ.ಶಿಖಾ ಅವರನ್ನು ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. | Read More
ಬುಡಕಟ್ಟು ಜನರಿಗಾಗಿ ಪ್ರಧಾನಿಯಿಂದ 6 ಸಾವಿರ ಕೋಟಿ ರೂ.ಗಳ ಕಾರ್ಯಕ್ರಮ ಘೋಷಣೆ: ಸಚಿವ ಹೆಚ್ಡಿಕೆ ಹೇಳಿಕೆ
ಭಗವಾನ್ ಬಿರ್ಸಾ ಮುಂಡಾ ಜಯಂತಿ, ಜನಜಾತಿಯ ಗೌರವ ದಿನದ ನಿಮಿತ್ತ ಸುಮಾರು ₹6,650 ಕೋಟಿ ಮೊತ್ತದ ಕಾರ್ಯಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಘೋಷಣೆ ಮಾಡಿದ್ದಾರೆ ಎಂದು ಹೆಚ್ಡಿಕೆ ತಿಳಿಸಿದ್ದಾರೆ. | Read More
ಹುಬ್ಬಳ್ಳಿ - ಧಾರವಾಡ ನಡುವೆ ಎಲ್‌ಆರ್‌ಟಿ ಸಾಧಕ - ಬಾಧಕ ಚರ್ಚಿಸಿ ಮುಂದಿನ ಕ್ರಮ - ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್ ಅವರು ಎಲ್‌ಆರ್‌ಟಿ ಕುರಿತು ಮಾತನಾಡಿದ್ದಾರೆ. ಅದರ ಸಾಧಕ - ಬಾಧಕದ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. | Read More
ತಮ್ಮ ಜಮೀನಿಗೆ ಓಡಾಡಲು ನುಗು ಅಭಯಾರಣ್ಯದ ದಾರಿ ಬಳಕೆಗೆ ಅನುಮತಿ ನೀಡಿ; ಸಚಿವ ಜಾರ್ಜ್ ಪುತ್ರನಿಂದ ಹೈಕೋರ್ಟ್‌ಗೆ ಅರ್ಜಿ
ಜಮೀನಿಗೆ ಪ್ರವೇಶಿಸಲು ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ ಮಾರ್ಗವನ್ನು ಬಳಕೆ ಮಾಡದಂತೆ ನಿರ್ಬಂಧಿಸಿರುವ ಆದೇಶ ರದ್ದು ಮಾಡುವಂತೆ ಕೋರಲಾಗಿದೆ. | Read More
ಮೈಸೂರು: ವಿದ್ಯುತ್ ತಂತಿ ತುಳಿದು ರೈತ ಮೃತ: ಎರಡು ಜಾನುವಾರುಗಳು ಸಾವು
ಮೈಸೂರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಹಾಗೂ 2 ರಾಸುಗಳು ಸಾವನ್ನಪ್ಪಿವೆ. | Read More
ಕಾಂಗ್ರೆಸ್ ಘಟಾನುಘಟಿಗಳಿಂದ ತಮ್ಮದೇ ಪಕ್ಷದ ಶಾಸಕರ ಖರೀದಿಗೆ ಪ್ರಯತ್ನ: ಬಿ.ವೈ. ವಿಜಯೇಂದ್ರ
ಸಿದ್ದರಾಮಯ್ಯನವರೇ, ನಿಮ್ಮ ಅಕ್ಕಪಕ್ಕ ಇರುವ ಹಿರಿಯ ಸಚಿವರಿಗೆ ತಾವು ಭಯ ಪಡಬೇಕಿದೆ. ಬಿಜೆಪಿ ಬಗ್ಗೆ ಆತಂಕ ಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. | Read More
ಪ್ರಚೋದನಕಾರಿ ಹೇಳಿಕೆ: ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. | Read More
ಬಿಎಂಟಿಸಿ 928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ
ಬಿಎಂಟಿಸಿ ಬಸ್‌ಗಳಲ್ಲಿ ವಿಕಲಚೇತನರು ಮತ್ತು ದೃಷ್ಟಿದೋಷವುಳ್ಳವರ ನೆರವಿಗಾಗಿ ಧ್ವನಿ ಪ್ರಕಟಣೆ ವ್ಯವಸ್ಥೆ ಅಳವಡಿಕೆ ಕುರಿತಂತೆ ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ. | Read More
ವಕ್ಫ್ ಬೋರ್ಡ್ನಿಂದ ರೈತರ ಜಮೀನಿಗೆ ನೋಟಿಸ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಬೀದರ್ ಜಿಲ್ಲೆಯಿಂದ ಅಭಿಯಾನ ಪ್ರಾರಂಭವಾಗಿ ಕಲಬುರಗಿ, ಯಾದಗಿರಿ, ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮೂಲಕ ಸಾಗಲಿದೆ. | Read More
ಮೈಸೂರಲ್ಲಿ ಹಿಟ್ ಅಂಡ್ ರನ್ಗೆ ಮಹಿಳೆ ಬಲಿ: ಐವರಿಗೆ ಗಂಭೀರ ಗಾಯ
ಅಪರಿಚಿತ ಕಾರೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕುಟುಂಬದ ಸದಸ್ಯರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿ ಐವರಿಗೆ ಗಂಭೀರ ಗಾಯಗಳಾಗಿದೆ. | Read More
ಫೋಟೋ ಫಿನಿಷ್ ರಿಸಲ್ಟ್ ಬರುತ್ತೆ, ಗೆಲ್ಲುವ ವಿಶ್ವಾಸ ಇದೆ: ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್
ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿದ್ದಾರೆ. ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. | Read More
ಕಾಲೇಜುಗಳ ಶುಲ್ಕ ಹೆಚ್ಚಳ ಖಂಡಿಸಿ ಮಂಗಳೂರು ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಮಂಗಳೂರು ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳಿಗೆ ಉಪಕುಲಪತಿ ಪಿ.ಎಲ್.ಧರ್ಮ ಅವರು, ಇದೇ ಶನಿವಾರ ವಿವಿ ರಿಜಿಸ್ಟ್ರಾರ್ ಅನ್ನು ಬೆಂಗಳೂರಿಗೆ ಕಳುಹಿಸಿಕೊಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿದೆ. | Read More
ಸ್ವೀಕರಿಸುವವರಿಲ್ಲದೇ ಮರಳಿದ ಕೊರಿಯರ್‌ನಿಂದ ಕಳ್ಳತನ ಜಾಲ ಬಯಲು: ₹10.50 ಲಕ್ಷ ಮೌಲ್ಯದ ಮೊಬೈಲ್ ಜಪ್ತಿ
ಮೊಬೈಲ್ ಫೋನ್ ಕದ್ದು ಅನ್ಯ ರಾಜ್ಯಕ್ಕೆ ಕೊರಿಯರ್ ಮೂಲಕ ಕಳುಹಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. | Read More
ಜೀವ ಕಳೆದುಕೊಳ್ಳಬೇಡಿ, ನಾನಿದ್ದೇನೆ: ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ
ಸಮಾಜದಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವರು ಮಾನಕ್ಕೆ ಅಂಜಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಂದೇ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. | Read More
ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆ ತೆರೆಸಿ ಸೈಬರ್ ವಂಚನೆಗೆ ಬಳಕೆ: ರಾಜಸ್ಥಾನ ಮೂಲದ ನಾಲ್ವರ ಬಂಧನ
ಹಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ರಾಜಸ್ಥಾನದ ಉದಯ್ ಪುರದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಪಿಜಿಯಲ್ಲಿ ತಂಗಿದ್ದ ಇಬ್ಬರ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. | Read More
ಚಾಮರಾಜನಗರ: 'ಹಸಿರು ಮಲೆ ಮಹದೇಶ್ವರ ಬೆಟ್ಟ' ನೂತನ ಯೋಜನೆಗೆ ತ್ರಿಪಕ್ಷೀಯ ಒಡಂಬಡಿಕೆ
ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಉದ್ದೇಶದ ಸಲುವಾಗಿ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. | Read More
ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ: ರಸ್ತೆಗಳ ಗುಂಡಿ ಮುಚ್ಚಲು ಬಂತು ಮತ್ತೊಂದು ನಾವೀನ್ಯ ಕಾಯಕಲ್ಪ
ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ವಿದ್ಯಾರ್ಥಿಗಳು 'ಕೋಲ್ಡ್ ಪಾಟ್ ಹೋಲ್ ಮಿಕ್ಸ್' ಎಂಬ ಹೊಸ ತಂತ್ರ ಆವಿಷ್ಕರಿಸಿದ್ದು, ಅನುಕೂಲತೆಗಳ ಕುರಿತು 'ಈಟಿವಿ ಭಾರತ್' ಶಿವಮೊಗ್ಗ ಪ್ರತಿನಿಧಿ ಕಿರಣ್ ಕುಮಾರ್ ನೀಡಿದ ವಿಶೇಷ ವರದಿ ಇಲ್ಲಿದೆ. | Read More
7 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯಾರು, ಎಲ್ಲಿಗೆ? ಇಲ್ಲಿದೆ ಪಟ್ಟಿ
ಲಕ್ಷ್ಮಣ್ ನಿಂಬರಗಿ, ಜಿ.ಸಂಗೀತಾ, ಚೆನ್ನಬಸವಣ್ಣ ಲಂಗೋಟಿ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. | Read More
ಚನ್ನಪಟ್ಟಣ ಜನತೆಯ ಆಶೀರ್ವಾದ ನಿಖಿಲ್‌ಗೆ: ಹೆಚ್.ಡಿ.ಕುಮಾರಸ್ವಾಮಿ
ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. | Read More
ಬಸ್‌ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಪ್ರಸ್ತಾವನೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ
ಬಸ್‌ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. | Read More
ಬೆಳಗಾವಿ: SP ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ದುಡ್ಡು ಕೇಳುತ್ತಿದ್ದ ಇಬ್ಬರು ವಶಕ್ಕೆ
ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣ ಕೇಳುತ್ತಿದ್ದ ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. | Read More
ದರ್ಶನ್ ಮಧ್ಯಂತರ ಜಾಮೀನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ: ಪೊಲೀಸ್ ಆಯುಕ್ತ
ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದರು. | Read More
ನಿರ್ಮಾಣ ಹಂತದ ಶಾಲೆಯಲ್ಲೇ ಮಕ್ಕಳಿಗೆ ಪಾಠ! ಕಟ್ಟಡಕ್ಕಿಲ್ಲ ಕಿಟಕಿ, ಬಾಗಿಲು, ಶೌಚಾಲಯ
ದಾವಣಗೆರೆಯ ನಿರ್ಮಾಣ ಹಂತದ ಮೌಲಾನಾ ಆಜಾದ್ ಮಾಡ್ರನ್ ಶಾಲೆಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಕುರಿತು 'ಈಟಿವಿ ಭಾರತ್' ದಾವಣಗೆರೆ ಪ್ರತಿನಿಧಿ ನೂರುಲ್ಲಾ ನೀಡಿರುವ ವರದಿ ಇಲ್ಲಿದೆ. | Read More
ಹಳೆ ವಿದ್ಯಾರ್ಥಿಗಳ ಛಲ: ಹುಬ್ಬಳ್ಳಿ ಬ್ರಾಡ್‌ವೇ ರಸ್ತೆಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಗೆ ಅಭಿವೃದ್ಧಿ ಯೋಗ
ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಹಣ ಹಾಕಿ ಸರಕಾರಿ ಶಾಲೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ್' ಹುಬ್ಬಳ್ಳಿ ಪ್ರತಿನಿಧಿ ಹೆಚ್.ಬಿ.ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ. | Read More
ರಾಜ್ಯದಲ್ಲಿ 78 ಲಕ್ಷ ರೈತರು, 125 ಲಕ್ಷ ಕೃಷಿ ಕಾರ್ಮಿಕರಿದ್ದಾರೆ: ಸಚಿವ ಚಲುವನಾರಾಯಣಸ್ವಾಮಿ
ರಾಜ್ಯದಲ್ಲಿ ಸುಮಾರು 78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 125 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ಮಿಕರಿದ್ದಾರೆ ಎಂದು ಕೃಷಿ ಸಚಿವ ಚಲುವನಾರಾಯಣಸ್ವಾಮಿ ತಿಳಿಸಿದ್ದಾರೆ. | Read More
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್: ಸಿಬಿಐ ತನಿಖೆಗೆ ಪತ್ನಿ ಅರ್ಜಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್
ಕೋಲಾರದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ್ದ ಅರ್ಜಿಯ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. | Read More
ಬೆಂಗಳೂರು: ಲಾಡ್ಜ್ನಲ್ಲಿ ಮಾಲ್ಡೀವ್ಸ್ ಪ್ರಜೆಯ ಶವ ಪತ್ತೆ
ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಮಾಲ್ಡೀವ್ಸ್ ಪ್ರಜೆ ಶವವಾಗಿ ಪತ್ತೆಯಾಗಿದ್ದಾರೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | Read More
ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಮೆಟ್ರೋ: ಟೆಂಡರ್ ಕರೆದ ಬಿಎಂಆರ್‌ಸಿಎಲ್
ನಮ್ಮ ಮೆಟ್ರೋದ ಡಬಲ್ ಡೆಕ್ಕರ್ ಯೋಜನೆಗಾಗಿ ಜಿಯೋಟೆಕ್ನಿಕಲ್ ಸರ್ವೇ ಕಾರ್ಯ ನಡೆಯುತ್ತಿದ್ದು, ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. | Read More