ಕರ್ನಾಟಕ

karnataka

ETV Bharat / state

ಸತತ ಮಳೆಯಿಂದ ಜಲಾಶಯಗಳ ನೀರಿನ ಮಟ್ಟ ಏರಿಕೆ: ತುಂಬಿದ ಭದ್ರಾ ಅಣೆಕಟ್ಟೆ ಸುತ್ತ 30 ದಿನಗಳ ನಿಷೇಧಾಜ್ಞೆ - Dams Water Level - DAMS WATER LEVEL

ಕರಾವಳಿ, ಮಲೆನಾಡು ಹಾಗೂ ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ.

DAMS WATER LEVEL
ಭದ್ರಾ ಅಣೆಕಟ್ಟೆ (ETV Bharat)

By ETV Bharat Karnataka Team

Published : Aug 2, 2024, 12:39 PM IST

ಬೆಂಗಳೂರು: ಸತತ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನಮಟ್ಟದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕೆಆರ್‌ಎಸ್, ಕಬಿನಿ, ಭದ್ರಾ, ಆಲಮಟ್ಟಿ, ನಾರಾಯಣಪುರ, ಜಲಾಶಯಗಳು ಭಾಗಶಃ ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಯಾವ ಯಾವ ಜಲಾಶಯಗಳು ಎಷ್ಟು ಪ್ರಮಾಣದ ನೀರಿನ ಸಾಮರ್ಥ್ಯ ಹೊಂದಿವೆ, ಯಾವ ಜಲಾಶಯಗಳು ಎಷ್ಟು ಪ್ರಮಾಣದ ಒಳ ಮತ್ತು ಹೊರ ಹರಿವು ಇದೆ ಎಂಬ ಮಾಹಿತಿ ಇಲ್ಲಿದೆ.

ಆದೇಶ ಪ್ರತಿ (ETV Bharat)

ಕೆಆರ್​ಎಸ್​ ಜಲಾಶಯ:

  • ಗರಿಷ್ಠ ಮಟ್ಟ : 124 ಅಡಿ (ft)
  • ಇಂದಿನ ಮಟ್ಟ : 122.30 ಅಡಿ (ft)
  • ಒಳ ಹರಿವು : 98,910 ಕ್ಯೂಸೆಕ್​​
  • ಹೊರ ಹರಿವು : 99,018 ಕ್ಯೂಸೆಕ್​​

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ : 2284 ಅಡಿ (ft)
  • ಇಂದಿನ ಮಟ್ಟ : 2281.00 ಅಡಿ (ft)
  • ಒಳಹರಿವು : 45,260 ಕ್ಯೂಸೆಕ್​​
  • ಹೊರ ಹರಿವು : 47,917 ಕ್ಯೂಸೆಕ್​​

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ

  • ಗರಿಷ್ಠ ಮಟ್ಟ : 2079.50 ಅಡಿ
  • ಒಟ್ಟು ಸಾಮರ್ಥ್ಯ : 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ : 32.990 ಟಿಎಂಸಿ (2076 ಅಡಿ)
  • ಒಳ ಹರಿವು : 19,175 ಕ್ಯೂಸೆಕ್
  • ಹೊರ ಹರಿವು : 16,594 ಸಾವಿರ ಕ್ಯೂಸೆಕ್

ಘಟಪ್ರಭಾ ನದಿ, ರಾಜಾಲಖಮಗೌಡ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175 ಅಡಿ
  • ಒಟ್ಟು ಸಾಮರ್ಥ್ಯ : 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ : 47.595 ಟಿಎಂಸಿ (2170.633 ಅಡಿ)
  • ಒಳಹರಿವು : 34,031 ಕ್ಯೂಸೆಕ್
  • ಹೊರ ಹರಿವು : 36,193 ಕ್ಯೂಸೆಕ್

ತುಂಗಾ ಜಲಾಶಯ:

  • ಒಟ್ಟು ಎತ್ತರ : 588.24 ಮೀಟರ್
  • ಒಳ ಹರಿವು : 49,871 ಕ್ಯೂಸೆಕ್
  • ಹೊರ ಹರಿವು : 40,960 ಸಾವಿರ ಕ್ಯೂಸೆಕ್
    ತುಂಬಿದ ಭದ್ರಾ ಅಣೆಕಟ್ಟೆ (ETV Bharat)
    ಆದೇಶ ಪ್ರತಿ (ETV Bharat)

ಭದ್ರಾ ಜಲಾಶಯ:

  • ಒಟ್ಟು ಎತ್ತರ : 186 ಅಡಿ
  • ಇಂದಿನ ನೀರಿನ ಮಟ್ಟ : 182.7 ಅಡಿ
  • ಒಳ ಹರಿವು : 38,870 ಕ್ಯೂಸೆಕ್
  • ಹೊರ ಹರಿವು : 56,636 ಕ್ಯೂಸೆಕ್
    ತುಂಬಿದ ಭದ್ರಾ ಅಣೆಕಟ್ಟೆ (ETV Bharat)

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ : 1819
  • ಇಂದಿನ ನೀರಿನ ಮಟ್ಟ : 1815 ಅಡಿ
  • ಒಳ ಹರಿವು : 51,961 ಕ್ಯೂಸೆಕ್
  • ಹೊರ ಹರಿವು : 16,913 ಕ್ಯೂಸೆಕ್

ತುಂಬಿದ ಭದ್ರಾ ಅಣೆಕಟ್ಟೆ ಸುತ್ತ 30 ದಿನ ನಿಷೇಧಾಜ್ಞೆ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಭದ್ರಾ ಅಣೆಕಟ್ಟೆಯ ಸುತ್ತ 30 ದಿನ ನಿಷೇಧಾಜ್ಞೆ ಹೊರಡಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ನೀಡಿದ್ದಾರೆ. ಈಗಾಗಲೇ ಡ್ಯಾಂ ತುಂಬಿ ಹರಿಯುತ್ತಿರುವುದರಿಂದ ಅಣೆಕಟ್ಟೆ ಭದ್ರತೆಯ ದೃಷ್ಟಿಯಿಂದ ಹಾಗೂ ಅಣೆಕಟ್ಟೆ ವೀಕ್ಷಿಸಲು ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಅಲ್ಲದೇ, ರೈತರು ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ. ಇದರಿಂದ ಅಣೆಕಟ್ಟೆಯ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಕರವಾಗಿದೆ. ಹಾಗಾಗಿ ಅಣೆಕಟ್ಟೆಯ ಸುತ್ತ 144 ಸೆಕ್ಷನ್ ಜಾರಿ ಮಾಡುವಂತೆ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಮನವಿ ಪುರಸ್ಕರಿಸುವ ಜಿಲ್ಲಾಧಿಕಾರಿಗಳು ಈಗಾಗಲೇ ಮಳೆಯ ಕುರಿತು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಗಸ್ಟ್ 1 ರಿಂದ ಆಗಸ್ಟ್ 31ರ ವರೆಗೂ ಭದ್ರಾ ಜಲಾಶಯದ ಪ್ರದೇಶದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 165 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಮಾಡಿದ್ದಾರೆ.

ಅದರಂತೆ, ಅಣೆಕಟ್ಟೆಯ ಸುತ್ತ 5 ಜನಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ, ಭದ್ರಾ ನದಿಯ ಎಡ ಮತ್ತು ಬಲ ದಂಡೆಯಲ್ಲಿ ನೀರಿಗೆ ಇಳಿದು ಪೋಟೊ ತೆಗೆದುಕೊಳ್ಳುವಂತಿಲ್ಲ, ಅಣೆಕಟ್ಟೆಯ ಗೇಟ್​​ನಲ್ಲಿ ಗುಂಪುಗೂಡುವುದು ಹಾಗೂ ಡ್ಯಾಂ ಮೇಲೆ ಹೋಗುವಂತಿಲ್ಲ, ಅಣೆಕಟ್ಟೆಯ ಸೆಕ್ಯೂರಿಟಿ, ಸಿಬ್ಬಂದಿಗೆ ಯಾವುದೇ ತೊಂದರೆ ಕೊಡುವಂತಿಲ್ಲ, ಬಾಗಿನ ನೀಡಲು ಬರುವವರು ನೀರಿನಲ್ಲಿ ಇಳಿಯುವಂತಿಲ್ಲ, ಈಜುವಂತಿಲ್ಲ, ನಿಷೇಧಾಜ್ಞೆ ಸಯಮದಲ್ಲಿ ಆಯುಧ, ಶಸ್ತ್ತಾಸ್ತ್ರ ಹಾಗೂ ಮಾರಾಕಾಸ್ತ್ರ ಹಿಡಿದು ಓಡಾಡುವಂತಿಲ್ಲ, ಸಾರ್ವಜನಿಕರ ಅಸ್ತಿ ಪಾಸ್ತಿಗೆ ಹಾನಿಯನ್ನುಂಟು ಮಾಡುವಂತಿಲ್ಲ, ಕಾನೂನು ಸುವಸ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ: ಮನೆ, ಕೃಷಿ ಜಮೀನುಗಳು ಜಲಾವೃತ - Heavy rain in Udupi district

ABOUT THE AUTHOR

...view details