ಕರ್ನಾಟಕ

karnataka

ETV Bharat / state

ಕಲಬುರಗಿ ಸೆಂಟ್ರಲ್​ ಜೈಲು ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ ಕರೆ

ಬೆದರಿಕೆ ಕರೆ ಬಂದಿರುವ ಹಿನ್ನೆಲೆ ಮುಖ್ಯ ಅಧೀಕ್ಷಕಿ ಅವರ ಕಾರನ್ನು ಸಿಸಿಟಿವಿ ಕಣ್ಗಾವಲು ಇರುವಲ್ಲಿಯೇ ಪಾರ್ಕ್​ ಮಾಡುವಂತೆ ಚಾಲಕನಿಗೆ ಸೂಚನೆ ನೀಡಲಾಗಿದೆ.

Central Jail and Chief Superintendent Anita
ಕೇಂದ್ರ ಕಾರಾಗೃಹ ಹಾಗೂ ಮುಖ್ಯ ಅಧೀಕ್ಷಕಿ ಅನಿತಾ (ETV Bharat)

By ETV Bharat Karnataka Team

Published : 4 hours ago

Updated : 3 hours ago

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟ ಮಾಡುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.

ಅನಾಮಧೇಯ ವ್ಯಕ್ಯಿಯಿಂದ ಕಲಬುರಗಿ ನಗರದ ಪೊಲೀಸ್​ ಇನ್ಸ್​​​ಪೆಕ್ಟರ್​​ ಮೊಬೈಲ್​ಗೆ ಆಡಿಯೋ ಸಂದೇಶ ಬಂದಿರುವುದಾಗಿ ಮುಖ್ಯ ಅಧೀಕ್ಷಕಿ ಅನಿತಾ ಅವರು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸ್​ ಇನ್ಸ್​​ಪೆಕ್ಟರ್​ ಆಡಿಯೋ ಮಾಹಿತಿಯನ್ನು ಮುಖ್ಯ ಅಧೀಕ್ಷಕಿ ಗಮನಕ್ಕೆ ತಂದಿದ್ದು, ಅನಿತಾ ಅವರು ಅಲರ್ಟ್​ ಆಗಿದ್ದಾರೆ. ಜೈಲು ಬಳಿ ಸೇರಿದಂತೆ, ಯಾವುದೇ ಸ್ಥಳದಲ್ಲಿ ಸಿಸಿಟಿವಿ ಕಣ್ಗಾವಲು ಇರುವ ಕಡೆ ಕಾರು ಪಾರ್ಕಿಂಗ್​ ಮಾಡುವಂತೆ ಅಧೀಕ್ಷಕಿ ಕಾರು ಚಾಲಕನಿಗೆ ಸೂಚಿಸಲಾಗಿದೆ.

ಮುಖ್ಯ ಅಧೀಕ್ಷಕಿ ಅನಿತಾ (ETV Bharat)

ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಅವರು ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದರು. ಅನಿತಾ ಅವರು ಸೆಂಟ್ರಲ್ ಜೈಲಿನಲ್ಲಿ ಚಾರ್ಜ್ ತೆಗೆದುಕೊಂಡ ದಿನವೇ ಕೈದಿಗಳ ಹೈಫೈ ಲೈಫ್ ಅನಾವರಣ ಆಗಿತ್ತು. ಕೈದಿಗಳ ಹೈಫೈ ಲೈಫ್ ಅನಾವರಣವನ್ನು ಕಾರಾಗೃಹ ಇಲಾಖೆ‌ ಗಂಭೀರವಾಗಿ ತೆಗೆದುಕೊಂಡಿತ್ತು. ಬಳಿಕ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ಅನಿತಾ‌ ಮುಂದಾಗಿದ್ದರು. ನಿನ್ನೆಯಷ್ಟೇ ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನಿತಾ ಅವರ ವಿರುದ್ಧ ಕೈದಿಗಳು ಪ್ರತಿಭಟನೆ ಮಾಡಿದ್ದರು.

ಇದನ್ನೂ ಓದಿ:ಆರ್​ಬಿಐಗೆ ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆ ಹೆಸರಲ್ಲಿ ಬಾಂಬ್​ ದಾಳಿ ಬೆದರಿಕೆ

Last Updated : 3 hours ago

ABOUT THE AUTHOR

...view details