ಮೈಸೂರು:ತೀವ್ರ ಬರಗಾಲದಲ್ಲಿ ವರುಣ ಕೃಪೆ ತೋರಿದ್ದಾನೆ. ವರುಣಾ ಕ್ಷೇತ್ರದಲ್ಲಿ ವರುಣನ ಪ್ರವೇಶಕ್ಕೆ ಜನರಲ್ಲಿ ಸಂತಸ ಮಾಡಿದೆ. ನಂಜನಗೂಡು ತಾಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಕಾಡುಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ರೈತರು ಅನ್ನದಾಸೋಹ ನೆರವೇರಿಸಿ ಗ್ರಾಮದಲ್ಲಿ ಹಬ್ಬದಂತೆ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಮೈಸೂರು: ಬರಗಾಲದಲ್ಲಿ ವರವಾಗಿ ಬಂದ ವರುಣ, ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ - heavy rain - HEAVY RAIN
ಧಾರಾಕಾರ ಮಳೆ ಸುರಿದ ಹಿನ್ನೆಲೆ ನಂಜನಗೂಡು ತಾಲೂಕಿನ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಕಾಡುಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಬರಗಾಲದಲ್ಲಿ ವರವಾಗಿ ಬಂದ ವರುಣ: ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ (ETV Bharat)
Published : May 11, 2024, 10:19 AM IST
ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನ ಹಾಗೂ ಜಾನುವಾರುಗಳಿಗೆ ಮಳೆರಾಯ ಕೃಪೆ ತೋರಿ ತಂಪೆರೆದಿದ್ದಾನೆ. ಸಂಕಷ್ಟದಲ್ಲಿದ್ದ ರೈತರಿಗೆ ವರವಾಗಿ ಬಂದ ವರುಣನ ಅಬ್ಬರಕ್ಕೆ ಗ್ರಾಮಸ್ಥರು ಮತ್ತು ರೈತರು ಖುಷಿಯಾಗಿದ್ದಾರೆ. ಈಶ್ವರಗೌಡನಹಳ್ಳಿ, ಬೀರಿಹುಂಡಿ, ಕೊಟ್ಟರಾಯನ ಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು 10 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿ ಸಂಭ್ರಮಿಸಿದ್ದಾರೆ. ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.