ಹೆಚ್.ಡಿ. ರೇವಣ್ಣ (ETV Bharat) ಬೆಂಗಳೂರು: ಜೈಲಿನಿಂದ ಬಿಡುಗಡೆಗೊಂಡ ನಂತರ ನೇರವಾಗಿ ತಂದೆ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಟೆಂಪಲ್ ರನ್ ಶುರು ಮಾಡಿದರು. ದೇವೇಗೌಡರ ನಿವಾಸದಿಂದ ನೇರವಾಗಿ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ನ್ಯಾಯಾಂಗದ ಮೇಲೆ ಅಪಾರವಾದ ಗೌರವವಿದೆ. ಕಳೆದ ಹನ್ನೊಂದು ದಿನ ಕಾನೂನು ಪಾಲಿಸಿದ್ದೇನೆ. ಹೆಚ್ಚಿಗೆ ಮಾತನಾಡಲ್ಲ, ದೇವರ ಮೇಲೆ ನಂಬಿಕೆ ಇದೆ. ಈ ಆಪಾದನೆಯಿಂದ ಹೊರಬರ್ತಿನಿ ಎಂಬ ವಿಶ್ವಾದ ಇದೆ. ನ್ಯಾಯಾಂಗದ ಆದೇಶಗಳನ್ನ ಪಾಲಿಸುತ್ತೇನೆ ಎಂದರು.
ಇದಕ್ಕೂ ಮುನ್ನ ದೇವೇಗೌಡರ ನಿವಾಸದ ಬಳಿ ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ರೇವಣ್ಣ ಅವರನ್ನು ಬಂಧಿಸಿದ ದಿನದಿಂದ ತಾನು ಇದೊಂದು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾ ಬಂದಿರುವೆ. ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಅನ್ನೋದು ರಾಜ್ಯದ ಜನತೆಗೂ ಈಗ ಸ್ಪಷ್ಟವಾಗಿದೆ. ಮಾಧ್ಯಮಗಳಲ್ಲಿ ದಿನಕ್ಕೊಂದು ಬಗೆಯ ಚರ್ಚೆಯನ್ನು ಜನ ನೋಡುತ್ತಿದ್ದಾರೆ. ಸರ್ಕಾರದ ಮುಂದಿನ ಯೋಜನೆ ಏನಾಗಬಹುದು ಅನ್ನೋದು ಸಹ ಚರ್ಚೆಯಾಗುತ್ತಿದೆ. ಮಹಿಳೆಯೊಬ್ಬರ ಅಪಹರಣದ ಆರೋಪದಲ್ಲಿ ರೇವಣ್ಣ ಅವರನ್ನು ಸಿಲುಕಿಸಿದ್ದು, ಒಂದು ರಾಜಕೀಯ ಪಿತೂರಿ ಅಂತ ನಿಷ್ಠಾವಂತ ಪೊಲೀಸರು ಸಹ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಜೈಲಿನಿಂದ ನೇರವಾಗಿ ದೇವೇಗೌಡರ ನಿವಾಸಕ್ಕೆ ಬಂದ ರೇವಣ್ಣ: ಕಾರ್ಯಕರ್ತರ ಕಂಡು ಕಣ್ಣೀರು - HD Revanna