ವಿಜಯಪುರ: ಕೊಲೆ ಪ್ರಕರಣಗಳಿಂದ ಸುದ್ದಿಯಾಗುವ ಭೀಮಾ ತೀರದಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ಭೀಮಾ ತೀರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಪಟ್ಟಣ ಪಂಚಾಯತ್ ಸದಸ್ಯೆಯ ಪತಿ ಕೊಲೆಗೀಡಾಗಿರುವ ಘಟನೆ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ನಡೆದಿದೆ. ಅಶೋಕ್ ಮಲ್ಲಪ್ಪ ಗಂಟಗಲ್ಲಿ ಹತ್ಯೆಗೀಡಾದ ಪಟ್ಟಣ ಪಂಚಾಯತ್ ಸದಸ್ಯೆಯ ಪತಿ.
ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಪಟ್ಟಣ ಪಂಚಾಯತ್ ಸದಸ್ಯೆ ಪತಿಯ ಭೀಕರ ಕೊಲೆ - MURDER CASE - MURDER CASE
ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಪಟ್ಟಣ ಪಂಚಾಯತ್ ಸದಸ್ಯೆ ಪತಿ ಮೃತಪಟ್ಟಿರುವ ಘಟನೆ ಚಡಚಣ ಪಟ್ಟಣದಲ್ಲಿ ನಡೆದಿದೆ.
Published : Jun 16, 2024, 4:30 PM IST
ಗುಂಡಿನ ದಾಳಿಯಲ್ಲಿ ಅಶೋಕ್ಗೆ ಮೂರಕ್ಕೂ ಹೆಚ್ಚು ಗುಂಡುಗಳು ತಗುಲಿವೆ. ಗುಂಡಿನ ದಾಳಿಯಿಂದ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಕೊಲೆಗೀಡಾದ ರೌಡಿಶೀಟರ್ ಅಶೋಕ್ ಪತ್ನಿ ಚಡಚಣ ಪಟ್ಟಣ ಪಂಚಾಯತ್ ಸದಸ್ಯೆಯಾಗಿದ್ದಾರೆ. ಇತ್ತೀಚೆಗೆ ಪೆರೋಲ್ ಮೇಲೆ ಮೃತ ಅಶೋಕ್ ಜೈಲಿನಿಂದ ಹೊರಬಂದಿದ್ದರು. ಈತ ಕೊಲೆ ಹಾಗೂ ಇತರೆ ಕೇಸ್ಗಳಲ್ಲಿ ಅಪರಾಧಿಯಾಗಿದ್ದರು. ಇದೀಗ ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್ ಅಶೋಕ್ನನ್ನು ಕೊಲೆ ನಡೆದಿದೆ. ಸ್ಥಳಕ್ಕೆ ಚಡಚಣ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ತಾಯಿಗೆ ಬೈದ ವ್ಯಕ್ತಿಯ ಕೊಲೆಗೈದ ಪುತ್ರ - Murder Case