ಬೆಂಗಳೂರು: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಗುರುವಾರವೂ ವರುಣ ಅಬ್ಬರ ಜೋರಾಗಿತ್ತು. ಸಂಜೆಯಿಂದ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಭಾಷ್ಯಂ ಸರ್ಕಲ್, ಇಂದಿರಾ ನಗರ, ಕೋರಮಂಗಲ, ವಿಧಾನಸೌಧ, ಕೆ.ಆರ್. ಸರ್ಕಲ್, ಹೆಬ್ಬಾಳ, ಟೌನ್ ಹಾಲ್, ಬಸವನಗುಡಿ, ಯಶವಂತಪುರ, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಹಲವೆಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೆಬ್ಬಾಳ ಮೇಲ್ಸೇತುವೆ, ವೀರಣ್ಣಪಾಳ್ಯ, ಮಹಾರಾಣಿ ಕೆಳಸೇತುವೆ, ಸುಮ್ಮನಹಳ್ಳಿ, ವಡ್ಡರಪಾಳ್ಯ ಸಿಗ್ನಲ್, ನಾಗವಾರ, ಹೆಬ್ಬಾಳ ರೈಲು ನಿಲ್ದಾಣ, ಕಾಮಾಕ್ಷಿಪಾಳ್ಯ, ಶಿವಾನಂದ ಸರ್ಕಲ್ ಸೇರಿದಂತೆ ಹಲವು ಭಾಗಗಳು ಜಲಾವೃತವಾಗಿದೆ. ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್ ಮತ್ತು ಓಲ್ಡ್ ಉದಯ ಟಿವಿ- ರೈಲ್ವೆ ಅಂಡರ್ ಪಾಸ್ ಬಳಿ ಮಳೆ ನೀರು ಬಂದು ನೀರು ನಿಂತು ವಾಟರ್ ಲಾಗಿಂಗ್ ಆಗಿದ್ದು, ವಾಹನ ಸವಾರರು ಕಿರಿಕಿರಿ ಉಂಟಾಗಿದೆ.
ಮೆಜೆಸ್ಟಿಕ್‌ನ ರಸ್ತೆಗಳಲ್ಲಿ ತುಂಬಿ ಹರಿದ ಮಳೆ ನೀರು ವಾಹನ ಸವಾರರಿಗೆ ಸವಾಲಾಗಿದೆ. ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಾಲಿಕೆಯಿಂದ ಸಹಾಯವಾಣಿ:ಬಿಬಿಎಂಪಿಯು ಮಳೆ ಅವಾಂತರಗಳ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ವಿಪತ್ತು ನಿರ್ವಹಣಾ ಸಹಾಯವಾಣಿ ನಂಬರ್ 1533 ತೆರೆದಿದೆ. ಬೆಂಗಳೂರಿನ 8 ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಓಪನ್ ಮಾಡಿದ್ದು, ಕರೆ ಮಾಡಿದ ತಕ್ಷಣ ಹೋಗಿ ಅಲ್ಲಿಯ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಪಾಲಿಕೆ ಮಾಡುತ್ತಿದೆ. ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಳೆ ಸಂದರ್ಭದಲ್ಲಿ ವಲಯವಾರು ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.
ಸಹಾಯವಾಣಿ ಸಂಖ್ಯೆಗಳು:
ಬೊಮ್ಮನಹಳ್ಳಿ ವಲಯ: 080-25732447, 25735642, 9480685707
ದಾಸರಹಳ್ಳಿ ವಲಯ: 080-28394909, 9480685709