ಬೆಂಗಳೂರು: ಈ ಸರ್ಕಾರ ರಾಜ್ಯವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದೆಂತದ್ದೋ ಬಿಲ್ ಬೇರೆ ಪಾಸ್ ಮಾಡುತ್ತಿದ್ದೀರಾ ನಾಚಿಕೆ ಆಗಬೇಕು ನಿಮಗೆ. ಕರ್ನಾಟಕ ಸಂಪದ್ಬಿರತ ರಾಜ್ಯ, ಹಣದ ಕೊರತೆಯಿಲ್ಲ. ರೋಡ್ ಟ್ಯಾಕ್ಸ್ ರೆವೆನ್ಯೂನಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಸ್ವಂತ ಟ್ಯಾಕ್ಸ್ ಕಲೆಕ್ಟ್ ಮಾಡೋದ್ರಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ, ಹಣದ ಕೊರತೆಯಿಲ್ಲ. ನಿಮ್ಮ ಲೂಟಿಯ ದಾಹಕ್ಕೆ ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದರು.
ಗ್ಯಾರಂಟಿಯಿಂದ ಖಜಾನೆ ಖಾಲಿಯಾಗಲ್ಲ, ನಿಮ್ಮ ಸ್ವೇಚ್ಚಾಚಾರದಿಂದ ಖಾಲಿಯಾಗ್ತಿದೆ. ಕೇಂದ್ರ ಸರ್ಕಾರದ ಮುಂದೆ ಪದೇ ಪದೆ ಕೆದುಕೊಂಡು ಹೋಗ್ತಾ ಇದ್ದೀರಿ. ವಿಧಾನಸಭೆ ಕಲಾಪದಲ್ಲಿ ಅಮ್ಮ ತಾಯಿ ಕೊಡು ತಾಯಿ 6 ಸಾವಿರ ಕೋಟಿ ಅಂತಾ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದೀರಿ. ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸಿಎಂ ವಿಧಾನಪರಿಷತ್ನಲ್ಲಿ ಅಮ್ಮ ತಾಯಿ 6 ಸಾವಿರ ಕೋಟಿ ರೂ. ಕೊಡು ತಾಯಿ ಅಂತ ಬೇಡುವ ಮಾದರಿಯಲ್ಲಿ ಆ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ. ಬಡವರು ಹಸಿವಿನಿಂದ ಮನೆಗಳ ಮುಂದೆ ರಾತ್ರಿ ಊಟ ಆಗಿ ಉಳಿದಿರೋದನ್ನು ಪಡೆಯೋದಕ್ಕೆ ಹೋಗುವ ಜನರಿಗೆ ಬಿಕ್ಷೆ ಹಾಕ್ತಾರಲ್ಲ ಆ ತರ ಕೇಳ್ತಿದ್ದಾರೆ. ಹಸಿವನ್ನು ನೀಗಿಸಲು ಹೋಗುವ ಜನ ಅಮ್ಮ ತಾಯಿ ಕೊಡಿ ಅಂತಾ ಕೇಳ್ತಾರೆ. ರಾಜ್ಯದ ಮುಖ್ಯಮಂತ್ರಿ ಅಮ್ಮ ತಾಯಿ ಅಂಥ ದಯನೀಯ ಸ್ಥಿತಿಯಲ್ಲಿ ಬೇಡುವಂಥ ಸನ್ನಿವೇಶ ಉದ್ಬವವಾಗಿದೆ. ಇಂಥ ಪರಿಸ್ಥಿತಿಯನ್ನು ಏತಕ್ಕೆ ತಂದುಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಅಮಿತ್ ಶಾ ಜೊತೆ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು , ಯಾವುದೇ ರೀತಿಯಲ್ಲಿ ಅಲಯನ್ಸ್ ಹಾಗೂ ಸೀಟು ಶೇರಿಂಗ್ ನಲ್ಲಿ ಸಮಸ್ಯೆ ಇಲ್ಲ. ನಮ್ಮ ಉದ್ದೇಶ ಇರೋದು ಕೆಟ್ಟ ಸರ್ಕಾರ, ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗ್ತಾರೆ ಎನ್ನುವ ಆತಂಕ ಇದೆ. ನಾವು 28 ಸ್ಥಾನ ಗೆಲ್ಲಬೇಕು ಇದು ನಮ್ಮ ಉದ್ದೇಶ. ನಾನು ವಿಧಾನಸಭಾ ಕಲಾಪದಲ್ಲಿ ಭಾಗವಹಿಸಿಲ್ಲ ವಾಯ್ಸ್ ಸಮಸ್ಯೆ ಇದೆ. ರೆಸ್ಟ್ ಬೇಕು ಮತಾಡಬೇಡಿ ಅಂತಾ ಡಾಕ್ಟರ್ ಹೇಳಿದ್ದಾರೆ, ಹಾಗಾಗಿ ಸದನಕ್ಕೆ ಹೋಗಿಲ್ಲ ಎಂದರು.
ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೇ ನಿರ್ಣಯ ಮಂಡಿಸಿ ಬಿಜೆಪಿ - ಜೆಡಿಎಸ್ ತಿರುಗೇಟು