ಕರ್ನಾಟಕ

karnataka

ETV Bharat / state

ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ: ಹೆಚ್.ವಿಶ್ವನಾಥ್ - H Vishwanath - H VISHWANATH

ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ವಿಧಾನ ಪರಿಷತ್ ಸದಸ್ಯ ಹೆಚ್​.ವಿಶ್ವನಾಥ್ ಮಾತನಾಡಿದ್ದಾರೆ. ಮೂರು ಪಕ್ಷಗಳ ನಾಯಕರ ಪರಸ್ಪರ ಕೆಸರೆರಚಾಟ, ಮಾತಿನ ಪ್ರಯೋಗಗಳು ಅಸಹ್ಯ ಹುಟ್ಟಿಸುತ್ತಿವೆ ಎಂದು ಟೀಕಿಸಿದರು.

h-vishwanath
ವಿಧಾನ ಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್‌ (ETV Bharat)

By ETV Bharat Karnataka Team

Published : Aug 5, 2024, 6:01 PM IST

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸುದ್ದಿಗೋಷ್ಟಿ (ETV Bharat)

ಮೈಸೂರು:ಈಗ ಎರಡು ಯಾತ್ರೆಗಳು ನಡೆಯುತ್ತಿವೆ. ಒಂದು ಕಾಂಗ್ರೆಸ್​ನ ಜನಾಂದೋಲನ ಮತ್ತೊಂದು ಬಿಜೆಪಿ-ಜೆಡಿಎಸ್ ಪಾದಯಾತ್ರೆ. ಇದನ್ನೆಲ್ಲಾ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಮಾತಿನ ಪ್ರಯೋಗಗಳು ಅಸಹ್ಯ ಹುಟ್ಟಿಸುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್‌ ಟೀಕಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಹೆಚ್.ಡಿ.ಕುಮಾರಸ್ವಾಮಿ,‌ ಡಿಸಿಎಂ‌ ಡಿ.ಕೆ.ಶಿವಕುಮಾರ್ ಪರಸ್ಪರ ಏಕವಚನದಲ್ಲಿ ಕಿತ್ತಾಡುತ್ತಿರುವುದು ನೋಡಿದರೆ ಥೂ...ಛೀ...ಎನಿಸುತ್ತಿದೆ. ನಮ್ಮ ಕನ್ನಡ ಚಳುವಳಿಗಾರರು ಈಗ ಸಿಡಿದೇಳಬೇಕು ಎಂದರು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆಯ ಅತ್ಯಾಚಾರ ಆಗುತ್ತಿದೆ. ಇವರು ಜನರೆದುರು ಬೆತ್ತಲಾಗುತ್ತಿದ್ದಾರೆ ಎಂದು‌ ಕಿಡಿಕಾರಿದರು.

ಏಕವಚನದ ರುವಾರಿ ನಮ್ಮ ಸಿದ್ದರಾಮಯ್ಯ, ಹೇ...ಹೇ... ಎಂದು ಮಾತನಾಡುತ್ತಾ ಎಲ್ಲರಿಗೂ ದಾರಿ ಮಾಡಿಕೊಟ್ಟಿದ್ದಾರೆ. ಇನ್ನು ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ತಮ್ಮ ಮಕ್ಕಳನ್ನು ಮುಂದೆ ತರಬೇಕು ಅಂತ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ಕೌಟುಂಬಿಕ ಹಿತಾಸಕ್ತಿಯೇ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡದೇ ಇವರ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ನೀನು ಕಳ್ಳ, ನಿಮ್ಮಪ್ಪ ಕಳ್ಳ ಅಂತ ಮೂರು ಪಕ್ಷದವರೂ ಹೊಡೆದಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ನಿವೇಶನಗಳನ್ನು ವಾಪಸ್​ ನೀಡಲಿ: ಹೆಚ್​ ವಿಶ್ವನಾಥ್​ ಒತ್ತಾಯ - H Vishwanath slams byrathi suresh

For All Latest Updates

ABOUT THE AUTHOR

...view details