ಕರ್ನಾಟಕ

karnataka

ETV Bharat / state

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ - BDA FLAT FAIR - BDA FLAT FAIR

ಬಿಡಿಎ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

flat fair
ಫ್ಲಾಟ್ ಮೇಳ (ETV Bharat)

By ETV Bharat Karnataka Team

Published : Jun 16, 2024, 10:22 PM IST

Updated : Jun 16, 2024, 10:58 PM IST

ಸಾರ್ವಜನಿಕರಿಂದ ಪ್ರತಿಕ್ರಿಯೆ (ETV Bharat)

ಬೆಂಗಳೂರು : ಕೋನದಾಸಪುರ ವಸತಿ ಸಮುಚ್ಚಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಬಿ.ಡಿ.ಎ ಹೇಳಿದೆ.

ಈ ಮೇಳದಲ್ಲಿ ನಾಗರಬಾವಿ ಚಂದ್ರಾ ಬಡಾವಣೆಯಲ್ಲಿ 3 ಬಿ.ಹೆಚ್.ಕೆ ಫ್ಲಾಟ್​ಗಳಲ್ಲಿ ಕೆಲವು ಫ್ಲಾಟ್​ಗಳು ಮಾತ್ರ ಹಂಚಿಕೆಗೆ ಲಭ್ಯವಿದ್ದವು. ಉಳಿದ ಫ್ಲಾಟ್​ಗಳು ಮಾರಾಟವಾದವು. ಕಣಿಮಿಣಿಕೆಯಲ್ಲಿ 2 ಬಿ.ಹೆಚ್.ಕೆ ಫ್ಲಾಟ್​ಗಳು ಮತ್ತು ಕೋನದಾಸಪುರ ಹಂತ-2ರ (2 ಬಿ.ಹೆಚ್.ಕೆ) ‘ಎಫ್’ ಬ್ಲಾಕ್ ಹಂಚಿಕೆಗೆ ಲಭ್ಯವಿತ್ತು. ಇವನ್ನೆಲ್ಲ ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ ಎಂದಿದೆ.

ಫ್ಲಾಟ್ ಮೇಳ (ETV Bharat)

ಶನಿವಾರ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ನಡೆಸಲಾಗುತ್ತಿದ್ದು, ಪೂರ್ವಾಹ್ನದಲ್ಲಿಯೇ ಅತಿ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಫ್ಲಾಟ್ ಮೇಳದಲ್ಲಿ ಒಟ್ಟಾರೆಯಾಗಿ 150 ಫ್ಲಾಟ್​ಗಳು ಸ್ಥಳದಲ್ಲಿಯೇ ಮಾರಾಟವಾಗಿ 75 ಫ್ಲಾಟ್ ಹಂಚಿಕೆದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ.

ಬಾಕಿ 75 ಫ್ಲಾಟ್​ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್​ಲೈನ್ ಮೂಲಕ ಫ್ಲಾಟ್ ಮೊತ್ತವನ್ನು ಪಾವತಿಸಲಾಗದೇ ಚೆಕ್ ಅನ್ನು ನೀಡಿದ್ದಾರೆ. ಮುಂದಿನ ವಾರದ ಕಚೇರಿ ಸಮಯದಲ್ಲಿ ಆನ್​ಲೈನ್ ಮೂಲಕ ಹಣ ಪಾವತಿಸಿದ ನಂತರ ಚೆಕ್ ಅನ್ನು ಹಿಂತಿರುಗಿಸಿ ಹಂಚಿಕೆ ಪತ್ರವನ್ನು ನೀಡಲಾಗುವುದು ಎಂದು ಬಿಡಿಎ ಮಾಹಿತಿ ನೀಡಿದೆ.

ಫ್ಲಾಟ್ ಮೇಳ (ETV Bharat)

ಈ ಫ್ಲಾಟ್ ಮೇಳದಲ್ಲಿ ಸುಮಾರು 8 ಬ್ಯಾಂಕ್​ಗಳು ಭಾಗವಹಿಸಿದ್ದವು. ಪ್ರತಿ ಬ್ಯಾಂಕ್​ಗಳಿಗೆ ಸಾಲ ಸೌಲಭ್ಯಕ್ಕಾಗಿ 10 ರಿಂದ 15 ಅರ್ಜಿಗಳು ಸ್ವೀಕೃತಗೊಂಡಿವೆ. ಫೆಬ್ರವರಿ ತಿಂಗಳ ಫ್ಲಾಟ್ ಮೇಳದಲ್ಲಿ ಮಾರಾಟವಾದ 50 ಫ್ಲಾಟ್​ಗಳಿಗೆ ಈಗಾಗಲೇ ಶುದ್ಧ ಕ್ರಯಪತ್ರವನ್ನು ನೀಡಿ ನೋಂದಾಯಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :ದಕ್ಷಿಣ ಭಾರತ ಉತ್ಸವದಲ್ಲಿ 4,200 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆ: ಸಚಿವ ಹೆಚ್.ಕೆ.ಪಾಟೀಲ್ - DAKSHIN BHARAT UTSAV 2024

Last Updated : Jun 16, 2024, 10:58 PM IST

ABOUT THE AUTHOR

...view details