ಮಂಗಳೂರು: ಕೈಗಾರಿಕಾ ವಲಯ(ಎಂಎಸ್‌ಇಝಡ್)ದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಥೆಂಟಿಕ್ ಓಷನ್ ಟ್ರಶರ್‌ನಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಂಪನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೌಕರರು ಯಾರು ಇರಲಿಲ್ಲ. ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅಥೆಂಟಿಕ್ ಓಷನ್ ಟ್ರೆಶರ್ ಕಂಪನಿ ಮೀನನ್ನು ಸ್ವಚ್ಚಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ 10 ಕೆ.ಜಿ.ಯ ಪ್ಯಾಕೆಟ್‌ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತದೆ. ಈ ಸಂಸ್ಥೆಯ ಕೋಲ್ಡ್ ಸ್ಟೋರ್ ಸೆಕ್ಷನ್ ಹಾಗೂ ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹೊಗೆ ಉಗುಳುತ್ತಿರುವ ದೃಶ್ಯ ಸೆರೆಯಾಗಿದೆ.