ಮಂಗಳೂರು:ನಗರದ ದೇರೆಬೈಲ್‌ನಲ್ಲಿ ನೂತನವಾಗಿ ಆರಂಭಗೊಂಡಿದ್ದ ರೆಸ್ಟೋರೆಂಟ್ವೊಂದು ವಿದ್ಯಾರ್ಥಿಗಳಿಗೆ ಮದ್ಯದ ದರದಲ್ಲಿ ಆಫರ್ ನೀಡಿದೆ ಎಂಬ ಪೋಸ್ಟ್ವೊಂದು ವೈರಲ್ ಆಗಿದ್ದು, ಇದು ವಿವಾದಕ್ಕೆ ಗುರಿಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ವಿರುದ್ಧ ಅಬಕಾರಿ ಇಲಾಖೆ ಎಫ್ಐಆರ್ ದಾಖಲು ಮಾಡಿದೆ.
ವಿದ್ಯಾರ್ಥಿಗಳಿಗೆ ಸ್ಪೂಡೆಂಟ್ಸ್ ನೈಟ್ಸ್ ಹೆಸರಿನಲ್ಲಿ ಮದ್ಯದ ದರದಲ್ಲಿ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಆಫರ್ ನೀಡಿದೆ. ಶಾಲೆಯ ಐಡಿ ತಂದರೆ ವಿದ್ಯಾರ್ಥಿಗಳಿಗೆ 15 ಪರ್ಸೆಂಟ್ ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟರ್ ವ್ಯವಸ್ಥೆ ಇದೆ ಎಂಬ ಆಫರ್ ಹೊಂದಿರುವ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಲಿಕ್ಕರ್ ಲಾಂಜ್ ನೈಟ್ ಪಾರ್ಟಿ ಆಯೋಜಿಸಿದೆ ಎಂಬ ಸ್ಟಿಕ್ಕರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.