ಕರ್ನಾಟಕ

karnataka

ETV Bharat / state

ಪಂಚ ಗ್ಯಾರಂಟಿ ಮಧ್ಯೆ ಬಜೆಟ್ ಅನುಷ್ಠಾನ: ನಾಲ್ಕು ತಿಂಗಳಲ್ಲಿ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿ ಏನಿದೆ? - Economic progress by department - ECONOMIC PROGRESS BY DEPARTMENT

ಆರ್ಥಿಕ ವರ್ಷದ ನಾಲ್ಕು ತಿಂಗಳಲ್ಲಿ ರಾಜ್ಯದ ಬಜೆಟ್​ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿಯಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಿಧಾನಸೌಧ
ವಿಧಾನಸೌಧ (ETV Bharat)

By ETV Bharat Karnataka Team

Published : Aug 25, 2024, 2:13 PM IST

ಬೆಂಗಳೂರು:2024-25 ಬಜೆಟ್ ವರ್ಷದ ನಾಲ್ಕು ತಿಂಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಆರ್ಥಿಕ ವರ್ಷದ ನಾಲ್ಕು ತಿಂಗಳಲ್ಲಿ ರಾಜ್ಯದ ಬಜೆಟ್​ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

2024-25ರ ಬಜೆಟ್ ವರ್ಷದ ನಾಲ್ಕು ತಿಂಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಬೃಹತ್ ಹೊರೆಯೊಂದಿಗೆ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ಎರಡನೇ ಬಜೆಟ್ ವರ್ಷದಲ್ಲೂ ಸಿಎಂ ಸಿದ್ದರಾಮಯ್ಯ ಬಹುವಾಗಿ ಪಂಚಗ್ಯಾರಂಟಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಭಾರದೊಂದಿಗೆ ಇಲಾಖಾವಾರು ಬಜೆಟ್ ಅನುಷ್ಠಾನ ಮಾಡಲಾಗುತ್ತಿದೆ. ಸಂಪನ್ಮೂಲಗಳ ಕ್ರೋಢೀಕರಣದ ಕಸರತ್ತು ಮಧ್ಯೆ ಬಜೆಟ್ ಅನುಷ್ಠಾನದಲ್ಲಿ ಸಮತೋಲನ ಕಾಪಾಡುವ ಸವಾಲು ಕಾಂಗ್ರೆಸ್ ಸರ್ಕಾರದ್ದಾಗಿದೆ.

ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ 23.57%:ಕೆಡಿಪಿ ಪ್ರಗತಿ ಅಂಕಿಅಂಶದ ಪ್ರಕಾರ 2024-25 ಬಜೆಟ್​ ವರ್ಷದ ನಾಲ್ಕು ತಿಂಗಳಲ್ಲಿ ಇಲಾಖಾವಾರು ಒಟ್ಟು 23.57% ಆರ್ಥಿಕ ಪ್ರಗತಿ ಕಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲಾ ಇಲಾಖೆಗಳಿಗೆ ಒಟ್ಟು 3,21,423 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜುಲೈವರೆಗೆ ಒಟ್ಟು 97,807 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

ಜುಲೈವರೆಗೆ ಒಟ್ಟು 75,753 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಮೂಲಕ ಒಟ್ಟು ಹಂಚಿಕೆ ಎದುರು 23.57% ಪ್ರಗತಿ ಸಾಧಿಸಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಇಲಾಖಾವಾರು ಆರ್ಥಿಕ ಪ್ರಗತಿ ಉತ್ತಮವಾಗಿದೆ. ಕಳೆದ ಬಾರಿ ಈ ಅವಧಿಗೆ 16.44% ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಲಾಗಿತ್ತು.

15%ಗೂ ಕಡಿಮೆ ಆರ್ಥಿಕ ಪ್ರಗತಿ ಕಂಡ ಇಲಾಖೆಗಳು:ತೋಟಗಾರಿಕೆ ಇಲಾಖೆ, ಮೂಲಭೂತ ಸೌಕರ್ಯ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಮೀನುಗಾರಿಕೆ ಇಲಾಖೆ, ಪರಿಶಿಷ್ಠ ಪಂಗಡ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಸತಿ ಇಲಾಖೆಗಳು 15%ಗೂ ಕಡಿಮೆ ಆರ್ಥಿಕ ಪ್ರಗತಿ ಕಂಡಿವೆ.

ತೋಟಗಾರಿಕೆ ಇಲಾಖೆಗೆ 1,210 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಜುಲೈವರೆಗೆ 202 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ 148 ಕೋಟಿ ರೂ. ವೆಚ್ಚವಾಗಿದ್ದು, ಈವರೆಗೆ 12.25% ಪ್ರಗತಿ ಕಂಡಿದೆ. ಮೂಲಸೌಕರ್ಯ ಹಾಗೂ ಒಳನಾಡು ಜಲ ಸಾರಿಗೆ ಇಲಾಖೆಗೆ 952 ಕೋಟಿ ರೂ. ಹಂಚಿಕೆಯಾಗಿದ್ದರೆ, ಜುಲೈವರೆಗೆ ಬಿಡುಗಡೆಯಾಗಿದ್ದು 119 ಕೋಟಿ ರೂ., ಇನ್ನು 101 ಕೋಟಿ ರೂ. ವೆಚ್ಚವಾಗಿದ್ದು, ಕೇವಲ 10.61% ಪ್ರಗತಿ ಕಂಡಿದೆ. ಇತ್ತ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 3000 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, 551 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜುಲೈವರೆಗೆ 202 ಕೋಟಿ ರೂ. ವೆಚ್ಚವಾಗಿದ್ದು, ಕೇವಲ 6.74% ಪ್ರಗತಿ ಕಂಡಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 3,489 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಜುಲೈವರೆಗೆ 542 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 395 ಕೋಟಿ ರೂ. ವೆಚ್ಚವಾಗಿದೆ. ಆ ಮೂಲಕ 11.32% ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ. ಸಮಾಜ ಕಲ್ಯಾಣ ಇಲಾಖೆಗೆ 5,125 ಕೋಟಿ ರೂ. ಹಂಚಿಕೆಯಾಗಿದ್ದು, ಈ ಪೈಕಿ 1,350 ಕೋಟಿ ರೂ. ಬಿಡುಗಡೆಯಾಗಿದೆ. ಜುಲೈವರೆಗೆ 635 ಕೋಟಿ ರೂ. ವೆಚ್ಚವಾಗಿದ್ದು, 12.39% ಪ್ರಗತಿ ಸಾಧಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 254 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ‌. ಈ ಪೈಕಿ ಈವರೆಗೆ 32.92 ಕೋಟಿ ರೂ. ಬಿಡುಗಡೆ ಮಾಡಿದ್ದು, 21.93 ಕೋಟಿ ರೂ. ವೆಚ್ಚವಾಗಿದೆ. ಆ ಮೂಲಕ 8.62% ಪ್ರಗತಿ ಕಂಡಿದೆ. ಪರಿಶಿಷ್ಠ ಪಂಗಡ ಕಲ್ಯಾಣ ಇಲಾಖೆಗೆ 1,718 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.‌ ಈ ಪೈಕಿ 138 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜುಲೈವರೆಗೆ ಇಲಾಖೆಯಲ್ಲಿ 41 ಕೋಟಿ ರೂ. ವೆಚ್ಚವಾಗಿದ್ದು, ಕೇವಲ 2.38% ಪ್ರಗತಿ ಕಂಡಿದೆ.

ವಸತಿ ಇಲಾಖೆಗೆ 4417 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಜುಲೈವರೆಗೆ 531 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಒಟ್ಟು 651 ಕೋಟಿ ವೆಚ್ಚವಾಗುವ ಮೂಲಕ ಈವರೆಗೆ 14.74% ಪ್ರಗತಿ ಕಂಡಿದೆ. ಇತ್ತ ಗ್ರಾಮೀಣಾಭಿವೃದ್ಧಿ ಇಲಾಖೆಗೆ 24,661 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದರೆ, ಜುಲೈವರೆಗೆ 3,026 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಒಟ್ಟು 3,508 ಕೋಟಿ ರೂ. ವೆಚ್ಚ ಮಾಡಿದ್ದು, ಈವರೆಗೆ ಇಲಾಖೆ 14.23% ಪ್ರಗತಿ ಕಂಡಿದೆ.

ಇತರೆ ಪ್ರಮುಖ ಇಲಾಖೆಗಳ ಪ್ರಗತಿ ಸ್ಥಿತಿಗತಿ:

ನಗರಾಭಿವೃದ್ಧಿ ಇಲಾಖೆ:
ಅನುದಾನ ಹಂಚಿಕೆ- 19,679 ಕೋಟಿ ರೂ‌.
ಬಿಡುಗಡೆ- 4,925 ಕೋಟಿ ರೂ.
ವೆಚ್ಚ- 5,987 ಕೋಟಿ ರೂ.
ಪ್ರಗತಿ- 30.42%

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 34,406 ಕೋಟಿ
ಬಿಡುಗಡೆ- 7,486 ಕೋಟಿ
ವೆಚ್ಚ- 6,748 ಕೋಟಿ
ಪ್ರಗತಿ- 19.61%

ಕೃಷಿ ಇಲಾಖೆ:
ಅನುದಾನ ಹಂಚಿಕೆ- 5050 ಕೋಟಿ
ಬಿಡುಗಡೆ- 1,263 ಕೋಟಿ
ವೆಚ್ಚ- 978 ಕೋಟಿ
ಪ್ರಗತಿ- 19.38%

ಗೃಹ ಇಲಾಖೆ:
ಅನುದಾನ ಹಂಚಿಕೆ- 12,831 ಕೋಟಿ
ಬಿಡುಗಡೆ- 4,865 ಕೋಟಿ
ವೆಚ್ಚ- 3,007 ಕೋಟಿ
ಪ್ರಗತಿ- 23.44%

ಕಂದಾಯ ಇಲಾಖೆ:
ಅನುದಾನ ಹಂಚಿಕೆ- 3,053 ಕೋಟಿ
ಬಿಡುಗಡೆ- 1,407 ಕೋಟಿ
ವೆಚ್ಚ- 633 ಕೋಟಿ
ಪ್ರಗತಿ-20.74%

ಜಲಸಂಪನ್ಮೂಲ ಇಲಾಖೆ:
ಅನುದಾನ ಹಂಚಿಕೆ- 16,832 ಕೋಟಿ
ಬಿಡುಗಡೆ- 3,704 ಕೋಟಿ
ವೆಚ್ಚ- 4,402 ಕೋಟಿ
ಪ್ರಗತಿ- 26.15%

ಲೋಕೋಪಯೋಗಿ ಇಲಾಖೆ:
ಅನುದಾನ ಹಂಚಿಕೆ- 9,926 ಕೋಟಿ
ಬಿಡುಗಡೆ- 2,902 ಕೋಟಿ
ವೆಚ್ಚ- 2,386 ಕೋಟಿ
ಪ್ರಗತಿ- 24.04%

ಇಂಧನ ಇಲಾಖೆ:
ಅನುದಾನ ಹಂಚಿಕೆ- 23,158 ಕೋಟಿ
ಬಿಡುಗಡೆ- 8,220 ಕೋಟಿ
ವೆಚ್ಚ- 8,192 ಕೋಟಿ
ಪ್ರಗತಿ-35.38%

ಸಣ್ಣ ನೀರಾವರಿ ಇಲಾಖೆ:
ಅನುದಾನ ಹಂಚಿಕೆ- 2,388 ಕೋಟಿ
ಬಿಡುಗಡೆ- 726 ಕೋಟಿ
ವೆಚ್ಚ- 379 ಕೋಟಿ
ಪ್ರಗತಿ- 15.86%

ಆರೋಗ್ಯ ಇಲಾಖೆ:
ಅನುದಾನ ಹಂಚಿಕೆ- 11,247 ಕೋಟಿ
ಬಿಡುಗಡೆ- 3,047 ಕೋಟಿ
ವೆಚ್ಚ- 2,703 ಕೋಟಿ
ಪ್ರಗತಿ- 24.03%

ಶಿಕ್ಷಣ ಇಲಾಖೆ:
ಅನುದಾನ ಹಂಚಿಕೆ- 38,651 ಕೋಟಿ
ಬಿಡುಗಡೆ- 12,933 ಕೋಟಿ
ವೆಚ್ಚ- 8,094 ಕೋಟಿ
ಪ್ರಗತಿ-20.94%

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ:
ಅನುದಾನ ಹಂಚಿಕೆ- 9,963 ಕೋಟಿ
ಬಿಡುಗಡೆ- 2,288 ಕೋಟಿ
ವೆಚ್ಚ- 1,914 ಕೋಟಿ
ಪ್ರಗತಿ-19.21%

ಇದನ್ನೂ ಓದಿ:ನಿಗದಿತ ದಿನಾಂಕದಂದೇ ಕೆಎಎಸ್ ಪರೀಕ್ಷೆ: ಮುಖ್ಯಮಂತ್ರಿ ಅಪರ ಕಾರ್ಯದರ್ಶಿಯಿಂದ ಸ್ಪಷ್ಟನೆ - KAS Exam

ABOUT THE AUTHOR

...view details