ಕರ್ನಾಟಕ

karnataka

ETV Bharat / state

ಬೆಳಗಾವಿ: ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ಕ್ಯಾಂಟರ್​​ ವಾಹನ ಡಿಕ್ಕಿ; ರೈತ ಸಾವು - Road Accident - ROAD ACCIDENT

ರಸ್ತೆ ಅಪಘಾತದಲ್ಲಿ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಸುವರ್ಣ ವಿಧಾನಸೌಧದ ಬಳಿ ನಡೆದಿದೆ.

farmer-died-in-road-accident-near-belagavi
ಕೊತ್ತುಂಬರಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್​​ - ಕ್ಯಾಂಟರ್​​ ವಾಹನ ಡಿಕ್ಕಿ: ರೈತ ಸಾವು

By ETV Bharat Karnataka Team

Published : Apr 7, 2024, 10:48 AM IST

Updated : Apr 7, 2024, 12:52 PM IST

ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ಕ್ಯಾಂಟರ್​​ ವಾಹನ ಡಿಕ್ಕಿ; ರೈತ ಸಾವು

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಸುವರ್ಣ ವಿಧಾನಸೌಧದ ಬಳಿ ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕ್ಯಾಂಟರ್ ವಾಹನ ಮತ್ತು ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ತವಾಡ ಗ್ರಾಮದ ಮಲ್ಲಪ್ಪ ದೊಡ್ಡಕಲ್ಲನ್ನವರ (41) ಎಂಬ ರೈತ ಮೃತಪಟ್ಟಿದ್ದಾರೆ. ಬೆಳಗಾವಿ ಮಾರ್ಕೆಟ್​​​ಗೆ ಕೊತ್ತುಂಬರಿ ಸೊಪ್ಪು ಸಾಗಿಸಲು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನ ರಭಸವಾಗಿ ಟ್ರ್ಯಾಕ್ಟರ್​​ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಟ್ರ್ಯಾಕ್ಟರ್ ಟೈರ್ ಸೇರಿ ಬಿಡಿ ಭಾಗಗಳು, ಕೊತ್ತಂಬರಿ ಸೊಪ್ಪು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಹೊಳಲಕೆರೆ ಬಳಿ ಭೀಕರ ರಸ್ತೆ ಅಪಘಾತ; ಬಸ್​ ಪಲ್ಟಿಯಾಗಿ ನಾಲ್ವರು ಸಾವು, 8 ಜನರ ಸ್ಥಿತಿ ಗಂಭೀರ - bus accident

Last Updated : Apr 7, 2024, 12:52 PM IST

ABOUT THE AUTHOR

...view details