ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ ಮೊದಲ ದಿನವಾದ ನಿನ್ನೆ ಸರ್ಕಾರಿ ಭಾಷಣ ಮಾಡದೆ ತೆರಳಿದ್ದ ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ಡಿಎಂಕೆ ಪಕ್ಷ ಪೋಸ್ಟರ್ ಅಭಿಯಾನ ಆರಂಭಿಸಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರತಿಭಟನಾ ಅಭಿಯಾನ ನಡೆಸಲಿದೆ ಎಂದು ಪಕ್ಷ ಘೋಷಿಸಿದೆ.
ಜನವರಿ 6ರಂದು ಆರಂಭವಾದ ಅಧಿವೇಶನದ ಮೊದಲ ದಿನ ರಾಷ್ಟ್ರಗೀತೆ ಹಾಡದೆೇ ಅವಮಾನ ಮಾಡಲಾಗಿದೆ ಎಂದ ಆರೋಪಿಸಿ ಗವರ್ನರ್ ಸರ್ಕಾರಿ ಭಾಷಣ ಮಾಡದೆಯೇ ವಿಧಾನಸಭೆಯಿಂದ ಹೊರನಡೆದ ಕ್ರಮದ ವಿರುದ್ಧ ವಿವಾದ ಭುಗಿಲೆದ್ದಿತ್ತು.
ರಾಜ್ಯಪಾಲರ ನಡೆಯನ್ನು ಟೀಕಿಸಿದ ಸಿಎಂ ಎಂಕೆ ಸ್ಟಾಲಿನ್, ರಾಜ್ಯಪಾಲ ರವಿ ಪದೇ ಪದೇ ಈ ರೀತಿ ವರ್ತಿಸುವ ಮೂಲಕ ತಮಿಳುನಾಡು ಜನರಿಗೆ ಹಾಗೂ ಚುನಾಯಿತ ಸರ್ಕಾರ ಹಾಗೂ ವಿಧಾನಸಭೆಗೆ ಅವಮಾನ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಬೆನ್ನಲ್ಲೇ ಡಿಎಂಕೆ ಚೆನ್ನೈನ ಪಶ್ಚಿಮ ಘಟಕ ರಾಜ್ಯಪಾಲ ಮತ್ತು ವಿಧಾನಸಭಾ ಪ್ರತಿಪಕ್ಷದ ಎಡಪ್ಪಡಿ ಕೆ.ಪಳನಿಸ್ವಾಮಿ ಅವರನ್ನು ಗುರಿಯಾಗಿಸಿ ಪೋಸ್ಟರ್ ಅಭಿಯಾನ ಆರಂಭಿಸಿದೆ. (ಐಎಎನ್ಎಸ್)
ಇದನ್ನೂ ಓದಿ: 'ರಾಷ್ಟ್ರಗೀತೆಗೆ ಅವಮಾನ': ಸರ್ಕಾರದ ಭಾಷಣ ಓದದೇ ಸದನದಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ