ETV Bharat / state

ಎಸ್​ಸಿ-ಎಸ್​​ಟಿ ಶಾಸಕರು, ಸಚಿವರಿಗೆ ನಾಳೆ ಔತಣಕೂಟ ಏರ್ಪಡಿಸಿದ್ದೇನೆ: ಗೃಹ ಸಚಿವ ಪರಮೇಶ್ವರ್ - SC ST LEADERS MEETING

ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಎಸ್​ಸಿ, ಎಸ್​ಟಿ ಶಾಸಕರು ಮತ್ತು ಸಚಿವರ ಜೊತೆ ನಾಳೆ ಸಭೆ ನಡೆಸುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ (ETV Bharat)
author img

By ETV Bharat Karnataka Team

Published : Jan 7, 2025, 1:09 PM IST

ಬೆಂಗಳೂರು: ಎಸ್​​ಸಿ, ಎಸ್​​ಟಿ ಶಾಸಕರು ಮತ್ತು ಸಚಿವರಿಗೆ ನಾಳೆ ಸಂಜೆ ಔತಣಕೂಟ ಏರ್ಪಡಿಸಿದ್ದೇನೆ. ಬೇರೆ ಯಾರಿಗೂ ಆಹ್ವಾನ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸ್ತೇವೆ. ನಾಳೆ ಸಂಜೆ 7 ಗಂಟೆಗೆ ಸಭೆ ಕರೆದಿದ್ದೇವೆ. ಎಸ್​ಸಿ, ಎಸ್​ಟಿ ಶಾಸಕರು ಮತ್ತು ಸಚಿವರನ್ನು ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್​​ಸಿ, ಎಸ್​ಟಿ ಸಮಾವೇಶ ಆಯ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ವಿ, ಅದರ ಬಗ್ಗೆಯೂ ನಾಳೆ ಚರ್ಚೆ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಪರಮೇಶ್ವರ್ (ETV Bharat)

ಮುಂದೆ ಎಸ್‌ಸಿ, ಎಸ್​ಟಿ ಸಮಾವೇಶ ಮಾಡಬೇಕು ಅನ್ಕೊಂಡಿದ್ದೇವೆ. ಅದಕ್ಕಾಗಿ ಸಮುದಾಯದ ಎಲ್ಲ ಸಚಿವರು, ಶಾಸಕರನ್ನು ಕರೆದಿದ್ದೇವೆ. ನಾಳೆ ನಾನು ಡಿನ್ನರ್ ಮಾತ್ರ ಕೊಡ್ತಿದ್ದೇನೆ, ಡಿನ್ನರ್ ಪಾರ್ಟಿ ಅಲ್ಲ. ಹಿಂದೆ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ದೆವು. ಅದು ಯಶಸ್ವಿ ಆಗಿತ್ತು. ಆಮೇಲೆ ನಮ್ಮ ಸರ್ಕಾರ ಬಂತು. ನಂತರ ನಾವು ಒಂದೆಡೆ ಸೇರಲು ಆಗಿರಲಿಲ್ಲ. ಆದ್ದರಿಂದ ನಾಳೆ ಸೇರುತ್ತಿದ್ದೇವೆ. ಮುಂದೆ ಸಮಾವೇಶ ಮಾಡುವ ಬಗ್ಗೆ ಚರ್ಚೆ ಮಾಡಲಿದ್ದೇವೆ, ಸ್ಥಳ ಎಲ್ಲಿ ಅಂತ ಚರ್ಚೆ ಮಾಡ್ತೇವೆ ಎಂದರು.

ಕುಮಾರಸ್ವಾಮಿ ಅವರ ಶೇ.60 ಕಮೀಷನ್ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದವರು, ಕೇಂದ್ರದ ಸಚಿವರು. ಅವರು ಆರೋಪ ಮಾಡಿದ್ದಾರೆ ಅಂದ್ರೆ ನಾವು ಗಂಭೀರವಾಗಿಯೇ ತೆಗೆದುಕೊಳ್ಳುತ್ತೇವೆ. ಈ ಆರೋಪವನ್ನು ಸಿಎಂ ನಿರಾಕರಿಸಿ, ದಾಖಲೆ ಕೊಡಿ ಅಂದಿದ್ದಾರೆ. ನಾನೂ ಕುಮಾರಸ್ವಾಮಿ ಅವರಿಗೆ ಕೇಳ್ತೀನಿ, ಯಾರು ಶೇ.60 ಕಮಿಷನ್ ಪಡೆದಿದ್ದಾರೆ ಅಂತ ನಿರ್ದಿಷ್ಟ ದಾಖಲೆ ಇದ್ರೆ ಕೊಡಿ, ನಾವು ಕ್ರಮ ಕೈಗೊಳ್ಳುತ್ತೇವೆ. ಶೇ.40 ಕಮಿಷನ್ ಆರೋಪ ನಾವು ಮಾಡಿದ್ದಲ್ಲ, ಅದನ್ನು ಮೊದಲು ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಕುಮಾರಸ್ವಾಮಿ ಅವರಿಗೆ ಸಲಹೆ ಕೊಡ್ತೇನೆ, ರಾಜ್ಯಕ್ಕೆ ಸ್ಟೀಲ್ ಫ್ಯಾಕ್ಟರಿ ತನ್ನಿ. ನಿಮ್ಮ ಪ್ರಭಾವವನ್ನು ಕೇಂದ್ರದಲ್ಲಿ ಬಳಸಿ ದೊಡ್ಡ ಕೈಗಾರಿಕೆಯನ್ನು ರಾಜ್ಯಕ್ಕೆ ತಂದರೆ ನಿಮ್ಮ ಹೆಸರು ರಾಜ್ಯದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದು ತಿಳಿಸಿದರು.

ಭದ್ರಾವತಿ ಕೈಗಾರಿಕೆ ಸೊರಗುತ್ತಿದೆ, ಅದು ಮುಚ್ಚುವ ಸ್ಥಿತಿಯಲ್ಲಿದೆ. ಭದ್ರಾವತಿ ಕೈಗಾರಿಕೆ ಪುನರುಜ್ಜೀವನ ಮಾಡಿ. ಬೇಕಾದಷ್ಟು ಕೈಗಾರಿಕೆಗಳಿದ್ದು, ಎಲ್ಲದಕ್ಕೂ ಶಕ್ತಿ ತುಂಬಿ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳನ್ನು ರಾಜ್ಯಕ್ಕೆ ತಂದು ಬಂಡವಾಳ ಹೂಡುವಂತೆ ಮಾಡಿ. ಸುಮ್ಮನೆ ರಾಜಕೀಯಕ್ಕೆ ಆರೋಪ ಮಾಡೋದು ಸರಿಯಲ್ಲ ಎಂದರು.

2028ಕ್ಕೆ ನಾನು ಸಿಎಂ ಸ್ಥಾನಕ್ಕೆ ಪೈಪೋಟಿ ಕೊಡ್ತೇನೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆಯ್ತಲ್ಲ, ಅವರು ಹೇಳಿದ ಮೇಲೆ‌ ಆಯಿತು. ಇನ್ನು ನಾನೇನು ಹೇಳೋದು ಎಂದು ಹೇಳಿದರು.

ನಕ್ಸಲರ ಶರಣಾಗತಿ ವಿಚಾರವಾಗಿ ಮಾತನಾಡಿ, ವಿಕ್ರಮ್ ಗೌಡ ಎನ್‌ಕೌಂಟರ್ ನಂತರ ಉಳಿದ ನಕ್ಸಲರಿಗೆ ಶರಣಾಗಲು ಕರೆ ಕೊಟ್ಟಿದ್ದೇವೆ. ಈ ಪ್ರಕ್ರಿಯೆ ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತಿದೆ. ಶರಣಾಗತಿ ಬಳಿಕ ಅವರಿಗೆ ಕಲ್ಪಿಸಿಕೊಡಬೇಕಾದ ಅನುಕೂಲತೆಗಳ ಬಗ್ಗೆಯೂ ಪರಿಶೀಲಿಸ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಹೊರಗಿಂದ ಯಾರೂ ನಕ್ಸಲರು ಬರದಿದ್ರೆ, ಈಗ ರಾಜ್ಯದಲ್ಲಿ ಇರೋರು ಶರಣಾದ್ರೆ ನಕ್ಸಲ್ ಮುಕ್ತ ಆಗಬಹುದು ಎಂದರು‌.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.