ಸೌತ್ ಸೂಪರ್ ಸ್ಟಾರ್ ಸೂರ್ಯ ಹಾಗೂ ಬಾಲಿವುಡ್ ಸ್ಟಾರ್ ಹೀರೋ ಬಾಬಿ ಡಿಯೋಲ್ ಅಭಿನಯದ 'ಕಂಗುವ' ಚಿತ್ರ 2025ರ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ. ಸೂಪರ್ ಸ್ಟಾರ್ಗಳು ತೆರೆಹಂಚಿಕೊಂಡ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಮಾಲ್ ಮಾಡಲಿಲ್ಲ. 2024ರ ಬಿಗ್ ಬಜೆಟ್ ಸಿನಿಮಾ ತನ್ನ ಬಂಡವಾಳವನ್ನು ಹಿಂಪಡೆಯಲೂ ವಿಫಲವಾಗಿತ್ತು.
ಸೂರ್ಯ ಬಾಬಿ ಕಾಂಬಿನೇಷನ್ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಆದ್ರೀಗ 'ಕಂಗುವ' ಚಿತ್ರಕ್ಕೆ ಸಂಬಂಧಿಸಿದಂತೆ ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಹೌದು, 'ಕಂಗುವ' 2025ರ ಆಸ್ಕರ್ ಪ್ರಶಸ್ತಿಗೆ ಹೋಗುತ್ತಿದೆ. ಆಸ್ಕರ್ 2025 ಪಟ್ಟಿಯಲ್ಲಿ 323 ಜಾಗತಿಕ ಚಲನಚಿತ್ರಗಳೊಂದಿಗೆ ಸ್ಪರ್ಧಿಸುವ ಮೂಲಕ ಈ ಪಟ್ಟಿಯಲ್ಲಿ ಕಂಗುವ ಸ್ಥಾನ ಪಡೆದುಕೊಂಡಿದೆ. ಈ ಗುಡ್ ನ್ಯೂಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸೂರ್ಯ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
BREAKING: Kanguva ENTERS oscars 2025🏆 pic.twitter.com/VoclfVtLBL
— Manobala Vijayabalan (@ManobalaV) January 7, 2025
ಲಿಸ್ಟ್ನಲ್ಲಿ ಭಾರತದ 5 ಸಿನಿಮಾಗಳು: ಕಂಗುವ ಸಿನಿಮಾ ಜೊತೆಗೆ, ಇತರೆ ಭಾರತೀಯ ಚಿತ್ರಗಳಾದ ಗರ್ಲ್ಸ್ ವಿಲ್ ಬಿ ಗರ್ಲ್ಸ್, ಆಡುಜೀವಿತಂ (ದಿ ಗೋಟ್ ಲೈಫ್ - ಹಿಂದಿ), ಸಂತೋಷ್, ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ (ಮಲಯಾಳಂ+ಹಿಂದಿ) ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಚಿತ್ರಗಳು ವಿಶ್ವದ ಹಲವು ಸಿನಿಮಾಗಳೊಂದಿಗೆ ಆಸ್ಕರ್ ನಾಮನಿರ್ದೇಶನಗಳಿಗಾಗಿ ಸ್ಪರ್ಧಿಸುತ್ತಿದ್ದು, ಮತದಾನ ಜನವರಿ 8ರಿಂದ ಜನವರಿ 12, 2025ರವರೆಗೆ ನಿಗದಿಪಡಿಸಲಾಗಿದೆ. ಅಂತಿಮ ನಾಮನಿರ್ದೇಶನಗಳನ್ನು ಜನವರಿ 17, 2025ರಂದು ಘೋಷಿಸಲಾಗುವುದು. ಮಾರ್ಚ್ 2, 2025ರಂದು ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಸಮಾರಂಭ ನಡೆಯಲಿದೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್
ಶಿವ ನಿರ್ದೇಶನದ ಕಂಗುವ 2024ರ ನವೆಂಬರ್ 14ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ರಿಲೀಸ್ಗೂ ಮುನ್ನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಮೋಶನ್ ಕೂಡಾ ಭರ್ಜರಿಯಾಗೇ ನಡೆದಿತ್ತು. ಅದ್ಧೂರಿ ಪ್ರಚಾರ ಗಮನಿಸಿದ ಸಿನಿಪ್ರಿಯರು ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಾಣಲಿದೆ ಎಂದು ಅಂದಾಜಿಸಿದ್ದರು. ಸರಿಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ಅನೇಕ ದೊಡ್ಡ ಸಾಹಸ ದೃಶ್ಯಗಳನ್ನು ಒಳಗೊಂಡಿತ್ತು. ಆದ್ರೆ ಪ್ರೇಕ್ಷಕರ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ 'ಕಂಗುವ' 2025ರ ಆಸ್ಕರ್ ಪ್ರವೇಶಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ TO ಕಂಗುವ: 2024ರಲ್ಲಿ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ಬಿಗ್ ಬಜೆಟ್ ಸಿನಿಮಾಗಳು
'ಕಂಗುವ' 2024ರ ಬಿಗ್ ಡಿಸಾಸ್ಟರ್ ಆಗಿ ಹೊರಹೊಮ್ಮಿತು. 350 ಕೋಟಿ ರೂಪಾಯಿ ಮೊತ್ತದ ಈ ಬಿಗ್ ಪ್ರಾಜೆಕ್ಟ್ ಕಲೆಕ್ಷನ್ ಮೇಲೆ ಭಾರಿ ವಿಶ್ವಾಸ ಹೊಂದಲಾಗಿತ್ತು. ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಸೂರ್ಯ ಅವರ ಸ್ಟಾರ್ಡಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸುವ ಭರವಸೆ ಕೊಟ್ಟಿತ್ತು. 2,000 ಕೋಟಿ ಗಳಿಸಲಿದೆ ಎಂದು ನಿರ್ಮಾಪಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಅದಾಗ್ಯೂ, ಬಹುನಿರೀಕ್ಷಿತ ಚಿತ್ರ ಮಿಶ್ರ ವಿಮರ್ಶೆ ಸ್ವೀಕರಿಸಿತು. ಭಾರತೀಯ ಬಾಕ್ಸ್ ಆಫೀಸ್ನಲ್ಲಿ 70 ಕೋಟಿ ರೂ. ಮತ್ತು ಜಾಗತಿಕವಾಗಿ 110 ಕೋಟಿ ರೂ.ಗೂ ಕಡಿಮೆ ಕಲೆಕ್ಷನ್ ಮಾಡಿ ಸಿನಿಮಾ ಹಿನ್ನೆಡೆ ಕಂಡಿತು. ಈ ಚಿತ್ರ ಡಿಸೆಂಬರ್ 8, 2024 ರಂದು ಒಟಿಟಿ ಪ್ಲ್ಯಾಟ್ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
ಇದನ್ನೂ ಓದಿ: ನಟಿ ಹರಿಪ್ರಿಯಾ ಅದ್ಧೂರಿ ಸೀಮಂತ ಶಾಸ್ತ್ರ: ವಿಡಿಯೋ ನೋಡಿ