OnePlus 13 Series: ಒನ್ಪ್ಲಸ್ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳಾದ OnePlus 13 ಮತ್ತು OnePlus 13R ಅನ್ನು ಇಂದು ಬಿಡುಗಡೆ ಮಾಡುತ್ತಿದೆ. ಕಂಪನಿಯ ಪ್ರೀಮಿಯಂ ಶ್ರೇಣಿಯಲ್ಲಿ ಬರುವ ಈ ಸ್ಮಾರ್ಟ್‌ಫೋನಿನ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಹಲವು ಅಪ್ಡೇಟ್ಗಳನ್ನು ಮಾಡಲಾಗಿದೆ. ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ಕಂಪನಿ ಅದರ ಕೆಲವು ವೈಶಿಷ್ಟ್ಯಗಳು ಮತ್ತು ಅಪ್ಡೇಟ್ಗಳ ಬಗ್ಗೆ ಮಾಹಿತಿ ನೀಡಿದೆ.
ಎರಡೂ ಫೋನ್‌ಗಳಲ್ಲಿ ಫ್ಲಾಟ್ ಡಿಸ್ಪ್ಲೇ: ಈ ಸಾಲಿನಲ್ಲಿ ಕರ್ವ್ಡ್ ಡಿಸ್ಪ್ಲೇಯನ್ನು ಬದಲಾಯಿಸುತ್ತಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಹೊಸ ಫ್ಲಾಟ್ ಡಿಸ್‌ಪ್ಲೇಯೊಂದಿಗೆ ಬರಲಿದ್ದು, ಇದು ಹೊಸ ಲುಕ್ ನೀಡುತ್ತದೆ. ಕ್ಯಾಮೆರಾ ಮಾಡ್ಯೂಲ್ ಹಳೆಯ ಸ್ಮಾರ್ಟ್‌ಫೋನ್‌ಗಳಂತೆ ವೃತ್ತಾಕಾರವಾಗಿದೆ. ಆದರೆ ಕ್ಯಾಮೆರಾ ಬಂಪ್ ಅನ್ನು ಫೋನ್‌ನ ಫ್ರೇಮ್‌ಗೆ ಸಂಪರ್ಕಿಸುವ ವಿನ್ಯಾಸ ಅಂಶವನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ ಫೋನ್‌ನ ನೋಟ ಸಾಕಷ್ಟು ಬದಲಾಗಿದೆ. OnePlus 13 ವೀಗನ್ ಲೇದರ್ ಮತ್ತು ಗ್ಲಾಸ್ ಫಿನಿಶಿಂಗ್‌ನಲ್ಲಿ ಮೂಡಿ ಬರಲಿದೆ. ಇದು ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸಿ IP68 ಮತ್ತು IP69 ರೇಟಿಂಗ್ ಪಡೆದುಕೊಂಡಿದೆ. OnePlus 13R ನಲ್ಲಿ ಗ್ರಾಹಕರು ಲೇದರ್ ಆಯ್ಕೆಯನ್ನು ಪಡೆಯುವುದಿಲ್ಲ.
ಬ್ಯಾಟರಿ ಮತ್ತು ಸಾಫ್ಟ್‌ವೇರ್: ಎರಡೂ ಫೋನ್‌ಗಳು 6,000mAh ಪವರ್ಫುಲ್ ಬ್ಯಾಟರಿಯೊಂದಿಗೆ ಬರುತ್ತವೆ. ಇದು ಸ್ಪೀಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಎರಡೂ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ OS15 ನಲ್ಲಿ ಕಾರ್ಯನಿರ್ವಹಿಸುತ್ತವೆ. OnePlus 13 ನಾಲ್ಕು ವರ್ಷಗಳವರೆಗೆ Android ಅಪ್ಡೇಟ್ಗಳನ್ನು ಮತ್ತು ಐದು ವರ್ಷಗಳವರೆಗೆ ಭದ್ರತಾ ಅಪ್ಡೇಟ್ಗಳನ್ನು ಪಡೆಯುವ ನಿರೀಕ್ಷೆಯಿದೆ. ಆದರೆ OnePlus 13R ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷಗಳವರೆಗೆ Android ಮತ್ತು ಭದ್ರತಾ ಅಪ್ಡೇಟ್ಗಳನ್ನು ಪಡೆಯುತ್ತದೆ.
ಟ್ರಿಪಲ್ ಕ್ಯಾಮೆರಾ ಸೆಟಪ್: OnePlus 13 50MP ಸೋನಿ LYT-808 ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದುವ ನಿರೀಕ್ಷೆಯಿದೆ. ಮತ್ತೊಂದೆಡೆ, OnePlus 13R 50MP ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಸೆನ್ಸಾರ್ ಪಡೆಯಬಹುದು. ಈ OnePlus 13R ಕಂಪನಿಯ R-ಸರಣಿಯಲ್ಲಿ ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುವ ಮೊದಲ ಫೋನ್ ಆಗಿರುತ್ತದೆ.
ಬೆಲೆ ಎಷ್ಟು?: ದೇಶದಲ್ಲಿ OnePlus 13 ನ ಬೆಲೆಯು 67,000 ರಿಂದ 70,000 ರೂಪಾಯಿಗಳ ನಡುವೆ ಇರಬಹುದು. ಆದರೆ OnePlus 13R ಅನ್ನು 50,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು. 13 ರ ದುಬಾರಿ ಬೆಲೆಗೆ ಕಾರಣವೆಂದರೆ ಅದರಲ್ಲಿ ನೀಡಲಾದ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್. ಆದರೆ, ಕಂಪನಿ ಇನ್ನೂ ಬೆಲೆಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಅಥರ್ ಇವಿ ಸ್ಕೂಟರ್ 450 ಮಾಡೆಲ್ ಬುಕಿಂಗ್ ಶುರು, ಬೆಲೆ ಹೆಚ್ಚಿಸಿದ್ರೂ ಫೀಚರ್ಸ್ ಬೊಂಬಾಟ್