ಕರ್ನಾಟಕ

karnataka

ETV Bharat / state

ಕೆಲವೊಂದು ಕಡೆ ಇವಿಎಂ ಹ್ಯಾಕ್ ಆಗಿರಬಹುದು: ಸಚಿವ ಜಿ.ಪರಮೇಶ್ವರ್

ನಾವು ಕಳೆದ 15 ವರ್ಷಗಳಿಂದ ಇವಿಎಂ‌ ಬೇಡ ಅಂತ ಹೇಳ್ತಿದ್ದೇವೆ. ಇವಿಎಂ ಬದಲು ಬ್ಯಾಲೆಟ್‌ ಪೇಪರ್ ಮೂಲಕ ಚುನಾವಣೆ ಮಾಡಬೇಕೆಂದು ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಜಿ.ಪರಮೇಶ್ವರ್
ಸಚಿವ ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : Nov 24, 2024, 3:34 PM IST

ಬೆಂಗಳೂರು: ಇವಿಎಂ ಬದಲು ಬ್ಯಾಲೆಟ್ ಪೇಪರ್ ತರುವುದು ಸೂಕ್ತ ಎಂಬುದು ನನ್ನ ಅನಿಸಿಕೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ‌ನಾವು ಹೇಳ್ತಿದೇವೆ ಇವಿಎಂ‌ ಬೇಡ ಅಂತ. ಅಮೆರಿಕದಲ್ಲೂ ಇವಿಎಂ ಬೇಡ ಅಂತಾರೆ. ನಮ್ಮಲ್ಲಿ ‌ಎಐಸಿಸಿ ಕೂಡ‌ ಒಂದು ಕಮಿಟಿ ಮಾಡಿದ್ರು ಇವಿಎಂ‌ ಬೇಡ ಅಂತ. ಇವಿಎಂ ತೆಗೆದು ಬ್ಯಾಲೆಟ್‌ ಪೇಪರ್ ಮೂಲಕ ಚುನಾವಣೆ ಮಾಡೋಕೆ ಏನು ಆಗುತ್ತದೆ? ಎಂದು ಪ್ರಶ್ನಿಸಿದರು.

ಮೊದಲೆಲ್ಲಾ ಬ್ಯಾಲೆಟ್​ ಪೇಪರ್ ಮೂಲಕ ಚುನಾವಣೆ ಮಾಡಿಲ್ವಾ?. ಸಿಸ್ಟಮ್ ಅವರ‌ ಕೈನಲ್ಲಿದೆ‌‌. ಏನು ಮಾಡೋದು. ಅವರಲ್ಲೂ ಸಹ‌ ಅನೇಕರು ಇವಿಎಂ‌ ವಿರೋಧಿಸಿದ್ದಾರೆ‌. ಸೆಲೆಕ್ಟೀವ್ ಆಗಿ ಮಾಡ್ತಾರೆ, ನಂಬಿಕೆ‌ ಬರೋ ರೀತಿ. ಎಲ್ಲವನ್ನೂ‌ ಹ್ಯಾಕ್ ಮಾಡಿದ್ದಾರೆ ಅಂತಲ್ಲ. ಕೆಲವೊಂದು ಕಡೆ ಹ್ಯಾಕ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಸಚಿವ ಜಿ.ಪರಮೇಶ್ವರ್ (ETV Bharat)

ನಟ ದರ್ಶನ್ ಬೇಲ್ ಕ್ಯಾನ್ಸಲ್ ಮಾಡಬೇಕು:ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ನಟ ದರ್ಶನ್ ಇರೋ ಫೋಟೋ ಪೊಲೀಸರಿಗೆ ಸಿಕ್ಕಿರೋ ವಿಚಾರವಾಗಿ ಪ್ರತಿಕ್ರಿಯಿಸಿ, ಎಫ್​ಎಸ್​ಎಲ್ ರಿಪೋರ್ಟ್​ಗೆ ಹೈದರಾಬಾದ್​ಗೆ ಕಳಿಸಿದ್ದೆವು. ಘಟನಾ ಸ್ಥಳದಲ್ಲಿ ಫೋಟೋ ಸಿಕ್ಕಿದೆ. ಯಾರೋ ಜೊತೆಯಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಅದನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ ಜಾಮೀನು ರದ್ದತಿಗೆ ಮನಮಿ ಮಾಡಲಾಗುವುದು. ಮುಂದಿನ ಕ್ರಮ ಕೈಗೊಳ್ಳಲು ತನಿಖೆ ಆಗ್ತಿದೆ ಎಂದರು.

ನಟ ದರ್ಶನ್​ಗೆ ಆಪರೇಷನ್ ಆಗದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಆಪರೇಷನ್ ಆಗತ್ಯ ಇಲ್ಲ ಎಂದು ಗೊತ್ತಾಗ್ತಿದೆ. ಅವರು ನಾಳೆ ನಾಡಿದ್ದು ಆಪರೇಷನ್ ಮಾಡಿಲ್ಲ ಅಂದ್ರೆ ಬೆನ್ನು ಮೂಳೆ ಮುರಿದುಹೋಗುತ್ತದೆ ಅಂತ ಹೇಳಿದ್ರು. ಇಷ್ಟು ದಿನ ಆದರೂ ವೈದ್ಯರು ಆಪರೇಷನ್ ಮಾಡಿಲ್ಲ. ಕೋರ್ಟ್ ವ್ಯವಸ್ಥೆಯಲ್ಲಿ ತೀರ್ಮಾನ ಕೊಡಬೇಕು ಎಂದು ತಿಳಿಸಿದರು.

ಹಗರಣ, ಆರೋಪಗಳಿಗೆ ಜನ ತಲೆಕೆಡಿಸಿಕೊಂಡಿಲ್ಲ:ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಮೂರು ಕ್ಷೇತ್ರ ಗೆಲ್ಲುತ್ತೇವೆ ಅಂತ ಹೇಳಿದ್ದೆವು. ಸಿಎಂ, ಡಿಸಿಎಂ ಪಾತ್ರ ದೊಡ್ಡದಿದೆ. ಕಾರ್ಯಕರ್ತರು, ನಾಯಕರು ಎಲ್ಲಾ ಒಗ್ಗೂಡಿ ಕೆಲಸ ಮಾಡಿದ್ದಾರೆ. ನಮ್ಮ ಪೊಲೀಸ್ ಇಲಾಖೆಯವರು ಗೆಲುವಿನ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಮೂರು ಕ್ಷೇತ್ರ ಗೆದ್ದಿದ್ದೇವೆ ಎಂದರು.

ಹಗರಣಗಳಿಗೆ, ಆರೋಪಗಳಿಗೆ ಜನ ತಲೆಕೆಡಿಸಿಕೊಂಡಿಲ್ಲ. ಅದು ಜನರಿಗೆ ಅಗತ್ಯ ಕೂಡ ಇಲ್ಲ. ಅವರಿಗೆ ಅಭಿವೃದ್ಧಿ ಬೇಕು, ತಮಗೆ ಸರ್ಕಾರದಿಂದ ಏನು ಸಿಕ್ತಿದೆ ಅನ್ನೋದಷ್ಟೇ ಬೇಕು. ಬೆಳಗಾವಿ ಅಧಿವೇಶನ ಸಲೀಸು ಅಂತ ಅಲ್ಲ. ಬಿಜೆಪಿಯವರು ವಕ್ಫ್​, ಮುಡಾ ವಿಚಾರಗಳನ್ನು ಚರ್ಚೆ ಮಾಡೇ ಮಾಡ್ತಾರೆ. ಮೂರು ಕ್ಷೇತ್ರ ಸೋತಿದ್ದೇವೆ ಅಂತ ಚರ್ಚೆ ಮಾಡದೇ ಇರಲ್ಲ ಎಂದು ಹೇಳಿದರು.

ಇದನ್ನೂ ಓದಿ:ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ, ಬೇರೆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೆಲಸ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details