ETV Bharat / state

ಬೆಳಗಾವಿ: ಈರುಳ್ಳಿಗೆ ಬಂಪರ್​​​​ ಬೆಲೆ; ಕ್ವಿಂಟಾಲ್​ 6,500 ರೂ.ವರೆಗೆ ಮಾರಾಟ - ONIONS PRICE

ಬೆಳಗಾವಿ ಎಪಿಎಂಸಿಗೆ ಈರುಳ್ಳಿ ತರುತ್ತಿರುವ ರೈತರು ಫುಲ್ ಖುಷ್​​ನಿಂದ ಮನೆಗೆ ತೆರಳುತ್ತಿದ್ದಾರೆ. ನಿನ್ನೆ ಉತ್ತಮ ಈರುಳ್ಳಿ ಕ್ವಿಂಟಾಲ್​ 6,500 ರೂ.ವರೆಗೆ ಮಾರಾಟವಾಗಿದೆ.

ಈರುಳ್ಳಿಗೆ ಬಂಪರ್​​​​ ಬೆಲೆ; ಕ್ವಿಂಟಾಲ್​ 6,500 ರೂ.ವರೆಗೆ ಮಾರಾಟ
ಈರುಳ್ಳಿಗೆ ಬಂಪರ್​​​​ ಬೆಲೆ; ಕ್ವಿಂಟಾಲ್​ 6,500 ರೂ.ವರೆಗೆ ಮಾರಾಟ (ETV Bharat)
author img

By ETV Bharat Karnataka Team

Published : Nov 28, 2024, 1:29 PM IST

ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇಂದು ಈರುಳ್ಳಿಗೆ ಬಂಪರ್​ ಬೆಲೆ ಸಿಕ್ಕಿದೆ. ಈ ವರ್ಷದಲ್ಲೆ ಒಳ್ಳೆಯ ದರ ಸಿಕ್ಕಿದ್ದರಿಂದ ರೈತರು ಫುಲ್ ಖುಷ್ ಆಗಿದ್ದಾರೆ. ಕಷ್ಟ ಪಟ್ಟು ಬೆಳೆದಿದ್ದ ಈರುಳ್ಳಿ ಒಳ್ಳೆಯ ಲಾಭ ತಂದು ಕೊಟ್ಟಿದ್ದರಿಂದ ಸಂತಸದಿಂದ ರೈತರು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಈ ಬಾರಿ ಮಳೆ ಹೆಚ್ಚಾದ ಪರಿಣಾಮ ರೈತರಿಗೆ ನಿರೀಕ್ಷೆಗೆ ತಕ್ಕಷ್ಟು ಈರುಳ್ಳಿ ಇಳುವರಿ ಬಂದಿಲ್ಲ. ಆದರೆ ಹರಸಾಹಸ ಪಟ್ಟು ಉಳಿಸಿಕೊಂಡ ಈರುಳ್ಳಿಯನ್ನು ಬೆಳಗಾವಿ ಎಪಿಎಂಸಿಗೆ ಮಾರಾಟಕ್ಕೆ ತಂದಿದ್ಧ ರೈತರಿಗೆ ಜಾಕಪಾಟ್​ ಹೊಡೆದಿದೆ. ಗುಣಮಟ್ಟದ ಈರುಳ್ಳಿ ಕ್ವಿಂಟಾಲ್​ 6,500 ರೂ.ವರೆಗೆ ಮಾರಾಟವಾಗಿದೆ. ಇದು ಈ ವರ್ಷಕ್ಕೆ ಹೋಲಿಸಿದರೆ ದಾಖಲೆ ಬೆಲೆ ಎನ್ನುತ್ತಾರೆ ವ್ಯಾಪಾರಿಗಳು ಮತ್ತು ರೈತರು.

ವ್ಯಾಪಾರಿ, ರೈತರ ಅಭಿಪ್ರಾಯ. (ETV Bharat)

ಬೆಳಗಾವಿ ಮಾರುಕಟ್ಟೆಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ಈರುಳ್ಳಿ ಮಾರಾಟಕ್ಕೆ ತರುತ್ತಾರೆ. ಅಲ್ಲದೇ ಮಹಾರಾಷ್ಟ್ರದ ಕೆಲ ರೈತರು ಕೂಡ ಇದೇ ಮಾರುಕಟ್ಟೆ ಅವಲಂಬಿಸಿದ್ದಾರೆ. ಇಲ್ಲಿಂದ ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಅಸ್ಸೋಂ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಮತ್ತಿತರ ಪ್ರದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ.

ಈ ಬಾರಿ ಮಳೆಯಿಂದಾಗಿ ಹಾನಿಯಾಗಿ ಆವಕ ಕಡಿಮೆ ಆಗಿದೆ. ಹಾಗಾಗಿ, ದರ ಹೆಚ್ಚಿದೆ. ನಿನ್ನೆ ಬುಧವಾರ 2,200-6,500ರೂ. ವರೆಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿದೆ. ಹಾಗೇ 7,773 ಕ್ವಿಂಟಾಲ್ ಈರುಳ್ಳಿ ಮಾತ್ರ ಆವಕವಾಗಿದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಮುಧೋಳ ತಾಲ್ಲೂಕಿನ ಮುದ್ದಾಪುರ ರೈತ ವೆಂಕಣ್ಣ ಹಲಗಲಿ, "ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಇದು ಅತೀ ಹೆಚ್ಚು ದರ. 6,500 ರೂ. ದರ ಸಿಕ್ಕಿದೆ. 58 ಚೀಲ ಈರುಳ್ಳಿ ತಂದಿದ್ದು, 1.35 ಲಕ್ಷ ಬಿಲ್ ಕೈಗೆ ಸೇರಿದೆ. ತುಂಬಾ ಖುಷಿ ಆಗುತ್ತಿದೆ. ಇನ್ನು ಒಟ್ಟು 15 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿದ್ದೇವೆ. ಈ ವರ್ಷ ಈರುಳ್ಳಿಯಿಂದ 22 ಲಕ್ಷ ರೂ‌. ಲಾಭದ ನಿರೀಕ್ಷೆ ಇದೆ" ಎಂದರು.

ವ್ಯಾಪಾರಿ ಸಂಭಾಜಿ ಮಾತನಾಡಿ, "ನಮ್ಮಲ್ಲಿ ಸಣ್ಣ ಗಾತ್ರದ ಈರುಳ್ಳಿ 1 ಸಾವಿರ ರೂ., ಮಧ್ಯಮ ಗಾತ್ರದ ಈರುಳ್ಳಿ 3,000-4,500 ರೂ., ದೊಡ್ಡ ಗಾತ್ರದ ಈರುಳ್ಳಿ 6 ಸಾವಿರ ರೂ.ವರೆಗೆ ಮಾರಾಟವಾಗಿದೆ. ಸದ್ಯಕ್ಕೆ ಇದು ಒಳ್ಳೆಯ ಬೆಲೆಯಾಗಿದ್ದು, ರೈತರಿಗೆ ಖುಷಿ ತಂದಿದೆ" ಎಂದು ತಿಳಿಸಿದರು.

"ಭಾರಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾಗಿದ್ದು, ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಆವಕವೂ ಕಡಿಮೆ ಆಗಿದೆ. ಹಾಗಾಗಿ, ದರದಲ್ಲಿ ಏರಿಕೆ ಕಂಡಿದೆ. 1 ಸಾವಿರದಿಂದ 6,500 ರೂ. ವರೆಗೆ ಇಂದು ಈರುಳ್ಳಿಗೆ ಮಾರಾಟವಾಗಿದೆ" ಎಂದು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೆ.ಹೆಚ್. ಗುರುಪ್ರಸಾದ ಅವರು ತಿಳಿಸಿದರು.

ಇದನ್ನೂ ಓದಿ: ಭತ್ತದ ಕೊಯ್ಲು, ರಾಶಿ ಜೋರು; ದರ ನೋಡಿದ್ರೆ ಮನಸ್ಸು ಚೂರು! ರೈತರ ಗೋಳು ಕೇಳೋರಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.