ETV Bharat / state

ಬೆಂಗಳೂರು: ಊಟ, ತಿಂಡಿಗಾಗಿ ಮನೆ ಬಿಟ್ಟು ಬಾಲಮಂದಿರ ಸೇರಿದ್ದ ಅಪ್ರಾಪ್ತ‌ನನ್ನು ಪೋಷಕರಿಗೊಪ್ಪಿಸಿದ ಪೊಲೀಸರು - POLICE HELP

ಊಟ, ತಿಂಡಿಗಾಗಿ ಮನೆ ಬಿಟ್ಟು ಬಾಲಮಂದಿರ ಸೇರಿಕೊಳ್ಳುತ್ತಿದ್ದ ಅಪ್ರಾಪ್ತ‌ನನ್ನು ಪೊಲೀಸರು ಹುಡುಕಿ ಪೋಷಕರಿಗೊಪ್ಪಿಸಿದ್ದಾರೆ.

POLICE SEARCH FOR CHILDREN
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Nov 28, 2024, 1:19 PM IST

ಬೆಂಗಳೂರು : ಮನೆಯಲ್ಲಿ ಮಕ್ಕಳನ್ನು ನಿರ್ಲಕ್ಷ್ಯಿಸುವ ಪೋಷಕರೇ ಎಚ್ಚರ..! ಹೊಟ್ಟೆ ತುಂಬ ಊಟ, ತಿಂಡಿ ಸಿಗುತ್ತದೆ ಎಂದು ಮನೆ ಬಿಟ್ಟು ಬಂದು ಬಾಲಮಂದಿರ ಸೇರಿಕೊಳ್ಳುತ್ತಿದ್ದ ಅಪ್ರಾಪ್ತ ಬಾಲಕನೋರ್ವನನ್ನು ಪುನಃ ಪೋಷಕರ ಮಡಿಲಿಗೆ ಸೇರಿಸುವಲ್ಲಿ ಶಂಕರಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಪಾನಮತ್ತನಾಗಿರುವ ತಂದೆ, ಕೂಲಿ ಕೆಲಸ ಮಾಡುವ ತಾಯಿ, ಓದಿನಲ್ಲಿ ಆಸಕ್ತಿ ಇರದ ಬಾಲಕ ಮನೆ ಬಿಟ್ಟು ಬಂದು ಫುಟ್‌ಪಾತ್‌ನಲ್ಲಿ ನಿಂತುಕೊಳ್ಳುತ್ತಿದ್ದ. ಬಾಲಕನನ್ನು ಗಮನಿಸಿದವರು ಸಹಜವಾಗಿಯೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ವಿಚಾರಿಸಿದಾಗ ಸೂಕ್ತ ವಿವರ ನೀಡದ ಬಾಲಕನನ್ನು ಪೊಲೀಸರು ಸರ್ಕಾರಿ ಬಾಲಮಂದಿರಕ್ಕೆ ಬಿಟ್ಟು ಬರುತ್ತಿದ್ದರು. ಬಾಲ ಮಂದಿರದಲ್ಲಿ ಊಟ, ತಿಂಡಿ ಮಾಡಿಕೊಂಡು ಬಾಲಕ ನೆಮ್ಮದಿಯಾಗಿರುತ್ತಿದ್ದ. ಇದನ್ನೇ ರೂಢಿ ಮಾಡಿಕೊಂಡಿದ್ದ ಬಾಲಕನನ್ನು ಈ ಹಿಂದೆಯೂ ಸಹ ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ ಪೊಲೀಸರು ಬಾಲಮಂದಿರಕ್ಕೆ ಒಪ್ಪಿಸಿದ್ದರು. ಬಳಿಕ ಪೋಷಕರನ್ನು ಪತ್ತೆ ಹಚ್ಚಿ ಆತನನ್ನು ಕಳಿಸಿಕೊಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ (ETV Bharat)

ಡಿಸಿಪಿ ಮಾಹಿತಿ: ''ವಾರದ ಹಿಂದೆ ರಾತ್ರಿ ವೇಳೆ ಫುಟ್‌ಪಾತ್‌ನಲ್ಲಿ ನಿಂತಿದ್ದ ಬಾಲಕನನ್ನು ಶಂಕರಪುರ ಠಾಣೆಯ ಇನ್ಸ್‌ಪೆಕ್ಟರ್ ಉದಯರವಿ ಗಮನಿಸಿದ್ದರು. ವಿಚಾರಿಸಿದಾಗ ಬಾಲಕ 'ತಂದೆ ತಾಯಿ ಗೊತ್ತಿಲ್ಲ, ಊರು ಗೊತ್ತಿಲ್ಲ' ಎಂದು ಉತ್ತರಿಸಿದ್ದ. ಬಳಿಕ ಆತನನ್ನು ಬಾಲಮಂದಿರಕ್ಕೆ ಬಿಟ್ಟು ಬಂದಿದ್ದ ಪೊಲೀಸರು, ಪೋಷಕರ ಪತ್ತೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಬಳಿಕ ಅತ್ತಿಬೆಲೆ ಠಾಣೆಗೆ ಬಾಲಕನ ಪೋಷಕರು ಆಗಮಿಸಿದ್ದರು. ನಂತರ ಬಾಲಕನನ್ನು ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ'' ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಮೊಬೈಲ್​ ಫೋನ್‌ ವ್ಯಸನ: ಈ ಸಲಹೆಗಳನ್ನು ಪಾಲಿಸಿದರೆ ಮತ್ತೊಮ್ಮೆ ಫೋನ್​ ಮುಟ್ಟಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.