ಕರ್ನಾಟಕ

karnataka

ETV Bharat / state

ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ: 5 ಗಂಟೆ ಕ್ಯೂನಲ್ಲಿ ನಿಂತರೂ ಸಿಗದ ದೇವರ ದರ್ಶನ, ಭಕ್ತರಿಗೆ ಬೇಸರ - GHATI SUBRAMANYA SWAMY RATHOTSAVA

ಸತತ 5 ಗಂಟೆ ಕಾಲ ಸರದಿ ಸಾಲಿನಲ್ಲಿ ನಿಂತರೂ ಘಾಟಿ ಸುಬ್ರಹ್ಮಣ್ಯಸ್ವಾಮಿ ದರ್ಶನ ಸಿಗದ ಹಿನ್ನೆಲೆ ಭಕ್ತರು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

5 ಗಂಟೆ ಕ್ಯೂನಲ್ಲಿ ತಿಂತರೂ ಸಿಗದ ದೇವರ ದರ್ಶನ, ರೊಚ್ಚಿಗೆದ್ದ ಭಕ್ತರು
5 ಗಂಟೆ ಕ್ಯೂನಲ್ಲಿ ತಿಂತರೂ ಸಿಗದ ದೇವರ ದರ್ಶನ, ರೊಚ್ಚಿಗೆದ್ದ ಭಕ್ತರು (ETV Bharat)

By ETV Bharat Karnataka Team

Published : Jan 5, 2025, 3:51 PM IST

ದೊಡ್ಡಬಳ್ಳಾಪುರ(ಬೆಂಗಳೂರು): ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಬ್ರಹ್ಮರಥೋತ್ಸವ ಹಿನ್ನೆಲೆ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ಸತತ 5 ಗಂಟೆ ಕಾಲ ಸರದಿ ಸಾಲಿನಲ್ಲಿ ನಿಂತರೂ ದೇವರ ದರ್ಶನ ಸಿಗದ ಹಿನ್ನೆಲೆ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಭಕ್ತರು ರೊಚ್ಚಿಗೆದ್ದರು.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸ ಹಿನ್ನೆಲೆ ಭಾನುವಾರ ಮುಂಜಾನೆ 3 ಗಂಟೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಹರಿದು ಬರುತ್ತಿದ್ದಾರೆ. ಐದು ಗಂಟೆಗ ಕಾಲ ಕ್ಯೂ ನಲ್ಲಿ ನಿಂತಿದ್ದರೂ ದೇವರ ದರ್ಶನ ಭಕ್ತರಿಗೆ ಸಿಕ್ಕಿಲ್ಲ. ಬೆಳಗ್ಗೆ 6 ಗಂಟೆಯಿಂದ ಕ್ಯೂನಲ್ಲಿ ನಿಂತಿರುವ ಭಕ್ತರು, ಗಂಟೆಗಟ್ಟಲೆ ಕಾದರೂ ದರ್ಶನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಹಣ ಸಂಗ್ರಹಕ್ಕೆ ಮಾತ್ರ ಆಡಳಿತ ಮಂಡಳಿ ಸೀಮಿತವಾಗಿದೆ, ಭಕ್ತರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಭಕ್ತರು ಆರೋಪಿಸಿದರು.

ಗಂಟೆಗಟ್ಟಲೆ ಕಾದರೂ ಸಿಗದ ದೇವರ ದರ್ಶನ, ಭಕ್ತರ ಆಕ್ರೋಶ (ETV Bharat)

ಭಕ್ತರಾದ ಭೈರಯ್ಯ ಮಾತನಾಡಿ, "ನೂರು ರೂಪಾಯಿ ಕೊಟ್ಟು ದರ್ಶನದ ಟಿಕೆಟ್ ದರ್ಶನ ಸಿಕ್ಕಿಲ್ಲ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತವರಿಗೆ ಕುಡಿಯಲು ನೀರಿ ಇಲ್ಲ, ಸಕ್ಕರೆ ಕಾಯಿಲೆ ಇರುವ ರೋಗಿಗಳು ಆಹಾರವಿಲ್ಲದೆ ಕಾಯುತ್ತಿದ್ದಾರೆ. ಚಿಕ್ಕಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಪ್ರತಿ ವರ್ಷ ನಾವು ಜಾತ್ರೆಗೆ ಬರುತ್ತಿದ್ದೆವು. ಒಂದು ಗಂಟೆಯಲ್ಲಿ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಿದ್ದರು. ಈ ವರ್ಷ ಐದು ತಾಸು ಕಳೆದರೂ ದರ್ಶನ ಸಿಕ್ಕಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಉಮ್ರಾ ಯಾತ್ರೆಗೆ 164 ಜನರನ್ನು ಕಳುಹಿಸಿ ಅಲ್ಲೇ ಬಿಟ್ಟು ಬಂದ ಟ್ರಾವೆಲ್​ ಏಜೆನ್ಸಿಯಿಂದ ಕ್ಷಮೆಯಾಚನೆ

ABOUT THE AUTHOR

...view details