ದಾವಣಗೆರೆ:ವಿದ್ಯುತ್ ಕಡಿತದಿಂದಾಗಿ ರೋಗಿಗಳು ತೊಂದರೆ ಅನುಭವಿಸಿದ ಘಟನೆ ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಕರೆಂಟ್ ಇಲ್ಲದೇ ರೋಗಿಗಳು ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ. ರೋಗಿಗಳಿಗೆ ಸಂಬಂಧಿಕರು ಟವೆಲ್ನಲ್ಲಿ ಗಾಳಿ ಬೀಸುತ್ತಿರುವುದು ಕಂಡುಬಂತು. ಇನ್ನು ವೈದ್ಯಕೀಯ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಔಷಧಿ ಚೀಟಿ ಬರೆದುಕೊಟ್ಟಿದ್ದಾರೆ.
ವಿದ್ಯುತ್ ಕಡಿತದ ಜೊತೆಗೆ ಜನರೇಟರ್ ಕೈಕೊಟ್ಟ ಹಿನ್ನೆಲೆ ರೋಗಿಗಳು ಪರದಾಡಿದರು. ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.