ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಹಿನ್ನೆಲೆ ಶನಿವಾರ ಡಿಐಜಿ ಟಿ.ಪಿ ಶೇಷ ಜೈಲಿಗೆ ಭೇಟಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ' ಎಂದು ದರ್ಶನ್ ಹೇಳಿದ್ದಾರೆ. ಈ ಬಗ್ಗೆ ಮೆಡಿಕಲ್ ರೆಕಾರ್ಡ್ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ, ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್ಗೂ ಕೊಡಿಸುತ್ತೇವೆ ಎಂದರು.