ಕರ್ನಾಟಕ

karnataka

ETV Bharat / state

ಸಿ.ಟಿ ರವಿ ಫೇಕ್ ಎನ್​ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ - C T RAVI ARREST ISSUE

ಸಿ.ಟಿ.ರವಿ ಅವರನ್ನು ಬಂಧಿಸಿ, ಠಾಣೆಯಿಂದ ಠಾಣೆಗೆ ಅಲೆದಾಡಿಸಿದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

UNION MINISTER PRALHAD JOSHI
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

By ETV Bharat Karnataka Team

Published : Dec 22, 2024, 5:24 PM IST

Updated : Dec 22, 2024, 6:36 PM IST

ಹುಬ್ಬಳ್ಳಿ:"ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ ಹರಿಹಾಯ್ದರು.

ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಖಾನಾಪುರದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಜೊತೆಗೆ ಕಮಿಷನರ್ ಯಾಕೆ ಮಾತನಾಡಿಲ್ಲ. ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸಹ ಖಾನಾಪುರ ಠಾಣೆಗೆ ಬಿಟ್ಟಿಲ್ಲ. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜೊತೆಗೆ ಕಮಿಷನರ್ ಹಾಗೇ ನಡೆದುಕೊಂಡ್ರಾ? ನಾವು ಯಾವತ್ತೂ ಅಸ್ಪೃಶ್ಯತೆಯನ್ನು ಬೆಂಬಲಿಸಿಲ್ಲ. ಆದರೆ ಬೆಳಗಾವಿ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರೆಂದು ಆ ರೀತಿ ನಡೆದುಕೊಂಡಿರಬಹುದು" ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

''ಸಿ.ಟಿ.ರವಿ ಅವರನ್ನು ಫೇಕ್ ಎನ್​ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ? ಕಬ್ಬಿನ ಗದ್ದಗೆ, ಕಂಕರ್ ಮಶಿನ್​ಗೆ, ಅರಣ್ಯಕ್ಕೆ ಯಾಕೆ ಅವರನ್ನು ಕರೆದುಕೊಂಡು ಹೋಗಿದ್ದರು. ಮಾಧ್ಯಮವರು ಸಾಹಸ ಮಾಡಿ ಅವರನ್ನು ಬೆನ್ನುಹತ್ತಿದ್ದಕ್ಕೆ ಸಿ.ಟಿ. ರವಿ ಉಳಿದಿದ್ದಾರೆ. ಇದು ರಾಜಕೀಯ ದ್ವೇಷ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೆ ಅವರ ಉದ್ದೇಶವೇನು? ನೀವು ಬಳ್ಳಾರಿಗೆ ಹೋಗಿ ತೊಡೆ ತಟ್ಟಿದಾಗ ನಮ್ಮ ಸರ್ಕಾರ ಇತ್ತು. ಆಗ ಪೊಲೀಸರಿಂದ ರಕ್ಷಣೆ ನೀಡಿತ್ತಲ್ವಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಕಾಂಗ್ರೆಸ್ ಅವರಿಗೆ ಯಾವ ನಾಯಿ ಕಡಿದಿತ್ತು?" ಎಂದು ಪ್ರಶ್ನಿಸಿದರು.

''ಕಾಂಗ್ರೆಸ್​ನವರು ನಾಯಿ ಕಡಿದವರಂತೆ ವರ್ತನೆ ಮಾಡುತ್ತಿದ್ದಾರೆ. ಸಿ.ಟಿ. ರವಿ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವರಿಗೆ ಏನು ಗೊತ್ತಿಲ್ಲ ಅಂದ್ರೆ ಹೇಗೆ? ಕಾಂಗ್ರೆಸ್ ಸತತ ಸೋಲಿನಿಂದ ಹತಾಶೆಗೊಂಡಿದೆ. ಹರಿಯಾಣ, ಮಹಾರಾಷ್ಟ್ರದಲ್ಲಿ ಹೀನಾಯವಾಗಿ ಸೋತಿದೆ. ವಿರೋಧ ಪಕ್ಷವೂ ಸಹ ಕಾಂಗ್ರೆಸ್ ಆಗಿಲ್ಲ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಬಿಜೆಪಿ ಸಂಸದನನ್ನು ಮೊಣಕೈಯಿಂದ ತಳ್ಳಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆದ್ದ ನಂತರ ಇಡೀ ಜಗತ್ತೇ ಗೆದ್ದಂತೆ ಕಾಂಗ್ರೆಸ್​ ವರ್ತಿಸುತ್ತಿದೆ. ರಾಹುಲ್ ಗಾಂಧಿ ತಮ್ಮ ಸೋಲನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನೆಹರು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅತ್ಯಂತ ಘೋರ ಅಪಮಾನ ಮಾಡಿದ್ದರು. ಅಂಬೇಡ್ಕರ್ ರಾಜೀನಾಮೆಯಿಂದ ಏನು ವ್ಯತ್ಯಾಸ ಬೀಳಲ್ಲ ಅಂತ ಪತ್ರ ಬರೆದಿದ್ದಾರೆ. ನೆಹರು ಭಾರತ ರತ್ನ, ಇಂದಿರಾಗಾಂಧಿ ಭಾರತ ರತ್ನ, ರಾಜೀವ ಗಾಂಧಿ ಭಾರತರತ್ನ ತಮಗೆ ತಾವೇ ಕೊಟ್ಟುಕೊಂಡರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ಬೆಂಬಲಿತ ಕಾಂಗ್ರೆಸ್ ಅಲ್ಲದ ಪಕ್ಷ ಬರಬೇಕಾಯಿತು" ಎಂದು ವಾಗ್ದಾಳಿ ನಡೆಸಿದರು.

"ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಾರೆ. ನೆಹರು ಅವರು ಮೀಸಲಾತಿ ಬಗ್ಗೆ ಕ್ವಾಲಿಟಿ ಬಗ್ಗೆ ಮಾತನಾಡಿದ್ದು ರೆಕಾರ್ಡ್ ಇದೆ. ಈ ವಿಚಾರವಾಗಿ ಕರ್ನಾಟಕದಲ್ಲಿ ಸದನದಲ್ಲಿ ಗಲಾಟೆ ಮಾಡಿ ಸಿ. ಟಿ. ರವಿ ಅವರನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಮಾತು, ಸರ್ಕಾರಗಳು ಬದಲಾಗುತ್ತವೆ. ವಾಟ್ ಬ್ಲಡಿ ಡಿಡ್ ಮಿಸ್ಟರ್ ಕಮಿಷನರ್. ಬಾಲಿಶ ಹೇಳಿಕೆ ನೀಡತ್ತೀರಿ. ಅಧಿಕಾರಿಗಳು ಕಾನೂನು ಬಾಹಿರ ಅಧಿಕಾರ ಬಳಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಸಿ. ಟಿ. ರವಿಗೆ ನಮ್ಮ ಪಕ್ಷ ಎಲ್ಲ ಸಹಾಯ ಮಾಡುತ್ತದೆ. ಅಧಿಕಾರಿಗಳ ವರ್ತನೆಯನ್ನು ತೀವ್ರವಾಗಿ‌ ಖಂಡನೆ ಮಾಡುತ್ತೇನೆ" ಎಂದರು.

ಇದನ್ನೂ ಓದಿ:ಸಿ.ಟಿ.ರವಿ ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಎಕ್ಸ್​ಪರ್ಟ್: ಡಿ.ಕೆ.ಸುರೇಶ್

Last Updated : Dec 22, 2024, 6:36 PM IST

ABOUT THE AUTHOR

...view details