ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 381 ಮಂದಿಯಲ್ಲಿ ಡೆಂಗ್ಯೂ ಪತ್ತೆ! - New Dengue Cases

ರಾಜ್ಯದಲ್ಲಿ 381 ಮಂದಿಗೆ ಡೆಂಗ್ಯೂ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 362ಕ್ಕೆ ಏರಿಕೆ ಆಗಿದೆ.

NEW DENGUE CASES
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 11, 2024, 9:33 PM IST

ಬೆಂಗಳೂರು:ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 381 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 362ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ 2,503 ಮಂದಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 381 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 1 ವರ್ಷದೊಳಗಿನ 44, 1 ರಿಂದ 18 ವರ್ಷದೊಳಗಿನ 140, 18 ವರ್ಷ ಮೇಲ್ಪಟ್ಟವರು 237 ಮಂದಿ ಇದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಸಾವಿನ ಪ್ರಮಾಣ ಶೇ.0.08 ಇದೆ. ಪ್ರಸ್ತುತ 100 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 8,221 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಟ್ಟು 7 ಮಂದಿ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿ ಸಾವು - Dengue Case

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕಾರ ಸಾಕಷ್ಟು ಹೆಚ್ಚಾಗಿದೆ. ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಗಣನೀಯ ಏರಿಕೆ ಕಂಡಿದೆ. ಈ ಬಾರಿ ಜ್ವರದ ಪ್ರಮಾಣ ಡೆಂಗ್ಯೂ ರೋಗಿಗಳಲ್ಲಿ ಹೆಚ್ಚಾಗಿದೆ. 104 ಡಿಗ್ರಿ ವರೆಗೆ ಜ್ವರ ಕಂಡುಬರುತ್ತಿದೆ. ತಲೆನೋವು, ಮೈಕೈ ನೋವು, ಜಾಯಿಂಟ್ ಪೇನ್ ಹೆಚ್ಚಾಗಿದೆ. ರೋಗಿಗಳು ಗುಣಮುಕುಖರಾಗುವ ಸಮಯ ಕೂಡ ಜಾಸ್ತಿಯಿದೆ. ರೋಗಿಗಳಲ್ಲಿ ಪ್ಲೇಟ್ಲೆಟ್​​ಗಳು ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಿರುವುದು ಗೋಚರಿಸಿದೆ. ನೆಗೆಟಿವ್ ಬಂದಿರುವ ಪ್ರಕಣಗಳಲ್ಲಿ ಡೆಂಗ್ಯೂ ಲೈಕ್ ಇಲ್ನೆಸ್ ಪ್ರಮಾಣ ಗಣನೀಯ ಏರಿಕೆ ಕಂಡಿದೆ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಸಿಷಿಯನ್, ಡೈಬೆಟೋಲೊಜಿಸ್ಟ್ ಡಾ ನಸೀರ್.

ಎನ್.ಎಸ್ 1 ಐ.ಜಿ.ಎಂ ಟೆಸ್ಟ್ ಡೆಂಗ್ಯೂ ಗುಣಲಕ್ಷಣ ಕಂಡುಬರುತ್ತಿರುವ ರೋಗಿಗಳಿಗೆ ಮಾಡಲಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ಪ್ರಕರಣಗಳು ಧೃಢಪಡದಿದ್ದರೂ ಡೆಂಗ್ಯೂ ಲೈಕ್ ಇಲ್ನೆಸ್ ಪ್ರಮಾಣ ನಮ್ಮಲಿ ಬರುತ್ತಿರುವ ರೋಗಿಗಳಲ್ಲಿ ಹೆಚ್ಚಾಗಿದೆ. ಆದರೆ, ಆಗಲೂ ಡೆಂಗ್ಯೂ ಮಾದರಿಯಲ್ಲಿ ಚಿಕೆತ್ಸೆ ನೀಡುತ್ತಿದ್ದೇವೆ. ಕಳೆದ ಕೆಲ ವಾರಗಳಿಂದ ಈ ರೀತಿಯ ಪ್ರಕರಣಗಳು ಹೆಚ್ಚು ಕಂಡು ಬಂದಿದೆ. 1 ರಿಂದ 2 ದಿನ ಜ್ವರ ಕಾಣಿಸಿಕೊಂಡರೆ ಹತ್ತಿರದ ವೈದ್ಯರನ್ನು ಕಾಣುವುದು ಸಮಂಜಸ. ಟೆಸ್ಟ್ ಮಾಡಿಸುವಂತೆ ಹೇಳಿದರೆ ತಡ ಮಾಡದೇ ಮಾಡಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:15 ತಿಂಗಳಲ್ಲಿ 122 ರೈತರ ಆತ್ಮಹತ್ಯೆ: ಸಂಕಷ್ಟದಲ್ಲಿ ಬೆಳಗಾವಿ ಜಿಲ್ಲೆ ಅನ್ನದಾತರು - Belagavi farmer suicide cases

ABOUT THE AUTHOR

...view details