ಬೆಂಗಳೂರು:ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠಹೆಚ್ ಡಿದೇವೇಗೌಡರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆಯಡಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ನ ಮೊದಲ ಸೂಸೈಡ್ ಅಟೆಂಪ್ಟ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಮೈತ್ರಿ ಬಿರುಕು ವಿಚಾರವಾಗಿ ಪ್ರತಿಕ್ರಿಯಿಸಿದರು. ಇದು ನನಗೆ ಮೊದಲಿಂದಲೂ ಗೊತ್ತಿರುವ ವಿಚಾರ. ದೇವೇಗೌಡ್ರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆನಲ್ಲಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ನ ಮೊದಲ ಸೂಸೈಡ್ ಅಟೆಂಪ್ಟ್. ಅದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಅವರ ಪಕ್ಷಕ್ಕೆ ಒಂದು ದೊಡ್ಡ ಮುಜುಗರ ಉಂಟಾಗಿದೆ ಎಂದರು.
ಅದು ಅವರ ಪಾರ್ಟಿ ತೀರ್ಮಾನ. ನಾನು ಅದಕ್ಕೆ ಮಧ್ಯಪ್ರವೇಶ ಮಾಡಲ್ಲ. ಸಿಟ್ಟಿಂಗ್ ಎಂಎಲ್ಎಗಳಿದ್ದಾರೆ, ಸಂಸದರಿದ್ದಾರೆ. ಅವರ ಪಾರ್ಟಿಗೆ ಅವರದ್ದೇ ಶಕ್ತಿ ಇದೆ. ಆ ಶಕ್ತಿ ಅವರಿಗೆ ಬೇಕಾಗಿತ್ತು. ಆದರೆ ಬಿಜೆಪಿಯವರ ಸ್ಟೈಲ್ ಇರೋದೇ ಹೀಗೆ. ಇದೊಂದೇ ರಾಜ್ಯ ಅಲ್ಲ. ಬೇರೆ ರಾಜ್ಯಗಳಲ್ಲೂ ಹೀಗೆ ನಡೆಸಿಕೊಳ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಾರ್ಟಿಯಲ್ಲಿ ತೀರ್ಮಾನ ಮಾಡಿಕೊಳ್ಳಲಿ ಎಂದು ತಿಳಿಸಿದರು.